ಬ್ರೇಕಿಂಗ್ ನ್ಯೂಸ್
ಕರ್ನಾಟಕ

Marriage Life: ನೀವು ಮದುವೆಯಾದ್ರೂ ಗಂಡನ ಬಿಟ್ಟು ದೂರ ಇದ್ದೀರಾ ಹಾಗಾದ್ರೆ ಈ ಸ್ಟೋರಿ ಓದಲೇಬೇಕು!

Marriage Life: ಮದುವೆ ಅನ್ನೋದು ಪ್ರತಿಯೊಂದು ಹೆಣ್ಣು ಮಕ್ಕಳ ಜೀವನದ ಬಹು ಮುಖ್ಯ ಘಟಕ ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಕೂಡ ಸಾಧ್ಯವಿಲ್ಲ ಹಾಗಾದ್ರೆ ಮದುವೆ ಆದ ಬಳಿಕ ಹೆಣ್ಣು ಮಕ್ಕಳು ಏನೆಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ನೋಡೋಣ ಈ ಸ್ಟೋರಿಯಲ್ಲಿ…

ಗಂಡ ಹೆಂಡತಿ ದೂರ ದೂರ ಆಗೋದ್ಯಾಕೆ..?

ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವ ಬಂಧನದಲ್ಲಿ ನಂಬಿಕೆಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮದುವೆಯಾದ ಯುವಕ ಯುವತಿಯರು ತಮ್ಮ ಜೀವನದಲ್ಲಿ ಪ್ರತೀ ದಿನ ಸಂಕಟ ಪಡುತ್ತಿದ್ದಾರೆ. ಜೊತೆಗೆ ನಮ್ಮ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಡಿವೋಸ್ ಕೇಸ್ ಗಳು ಹೆಚ್ಚಾಗುತ್ತಿವೆ. ಪ್ರತಿದಿನವೂ ಇಂತಹ ಡಿವೋರ್ಸ್ ಕೇಸ್ ಗಳು ಹೆಚ್ಚಾಗುತ್ತಿವೆ. ಅದರ ಜೊತೆಗೆ ಗಂಡ ಹೆಂಡತಿ ದೂರವಿರುವಂತಹ ಪರಿಸ್ಥಿತಿಗಳು ಹೆಚ್ಚಾಗಿದೆ. ಇವೆಲ್ಲ ಸಮಸ್ಯೆಗಳು ಉಂಟಾಗಲು ಹಲವಾರು ಕಾರಣ ಇರಬಹುದು, ಆದರೆ ಹೆಣ್ಣು ಮಕ್ಕಳು ಏನೆಲ್ಲಾ ವಿಚಾರಗಳನ್ನು ಅರಿತುಕೊಳ್ಳಬೇಕು? ಜೀವನದಲ್ಲಿ ಏನೆಲ್ಲ ತಿಳಿದುಕೊಳ್ಳಲು ಟ್ರೈ ಮಾಡಬೇಕು ಖಂಡಿತವಾಗಲೂ ತಿಳಿದುಕೊಳ್ಳಲೇಬೇಕು.

ನಿಮ್ಮ ಗಂಡನ ಜೊತೆ ಹೊಂದಾಣಿಕೆಯಿಂದ ಜೊತೆಗಿರಿ..!

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದ ಗಂಡ ಹೆಂಡತಿ ಮಧ್ಯೆ ಬಿರುಕುಗಳು ಉಂಟಾಗುವುದು ಹೆಚ್ಚಾಗಿದೆ. ಅದರಲ್ಲೂ ಮದುವೆಯಾದ ನಂತರ ಹೆಣ್ಣು ಮಕ್ಕಳಿಗೆ ತನ್ನ ಗಂಡನೇ ಆಧಾರ. ಅದೇನೇ ಸಮಸ್ಯೆಯಾದರೂ ಕೂಡ ತನ್ನ ಗಂಡನ ಜೊತೆಗೆ ಹೇಳಿಕೊಳ್ಳಬೇಕು. ಅದೇ ರೀತಿಯಾಗಿ ಗಂಡನೂ ಕೂಡ ತನ್ನ ಹೆಂಡತಿಯ ಜೊತೆಗೆಸಮಯ ಕೊಟ್ಟು ಸಂತೋಷವಾಗಿ ಕಾಲ ಕಳೆಯಲೇಕು. ಇಷ್ಟಿದ್ದರೂ, ಕೆಲವೊಂದು ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ಮದುವೆಯಾದ ನಂತರ ಹೆಣ್ಣು ಮಕ್ಕಳು ಮನೆ, ಗಂಡನ ಜೊತೆಗೆ ಹೊಂದಾಣಿಕೆಯಿಂದ ಇರುವುದು ಅತೀ ಮುಖ್ಯ. ಇಲ್ಲವಾದಲ್ಲಿ, ಮನಸ್ತಾಪ, ಜಗಳ ಕಟ್ಟಿಟ್ಟ ಬುತ್ತಿ..ನಮ್ಮಲ್ಲಿ ಮನೆಯಲ್ಲಿ ಕಷ್ಟಕರ ವಾತಾವರಣ ಇದೆ ಅಂತ ಗಂಡನ ಮನೆಯನ್ನು ಬಿಟ್ಟು ಬರುವ ಮಂದಿ ಹಲವಾರು ಜನ ಇದ್ದಾರೆ.

ಮೊದಲು ನೀವು ಬದಲಾಗಿ..ದಾಂಪತ್ಯದ ಅರ್ಥ ತಿಳಿದುಕೊಳ್ಳಿ!!

ಹೊಂದಾಣಿಕೆ ಬರೋದೆ ಇಲ್ಲ ಅಂತ ಹೇಳಿಕೊಂಡು ತವರು ಮನೆಗೆ ಬರುವ ಮಹಿಳೆಯರು ತಮ್ಮ ಹಠ ಸಾಧನೆಗೆ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂತವರಿಗೆ, ಆಚೆ ಗಂಡನ ಪ್ರೀತಿನೂ ಸಿಗಲ್ಲ…ಗಂಡನಿಗೆ ಹೆಂಡತಿ ಪ್ರೀತಿನೂ ಸಿಗಲ್ಲ‌..ಹೀಗಾಗಿ, ಸಂಸಾರದ ಕೆಲವು ಕಷ್ಟಗಳನ್ನು ಹೆಣ್ಣು ಮಕ್ಕಳು ಅರಿತುಕೊಂಡು ಮುಂದುವರೆಯಬೇಕು. ಇಲ್ಲವಾದಲ್ಲಿ, ಸಮಾಜದ ಕಣ್ಣಿನ ಜೊತೆಗೆ ಕೂಡು ಕುಟುಂಬವಿರುವ ಮನೆತನದ  ಕಣ್ಣಿಗೂ ಗಂಡನ ಮನೆ ಬಿಟ್ಟು ಬಂದಿರುವ ಹೆಣ್ಣು ಅನ್ನೋ ಪಟ್ಟ ಖಾಯಂ ಆಗಿರುತ್ತದೆ. ಮನೆ ಅಂದಮೇಲೆ ಚಿಕ್ಕಪುಟ್ಟ ಕಷ್ಟ, ಸಮಸ್ಯೆಗಳು ಮಾಮೂಲು. ಅದನ್ನೇ ದೊಡ್ಡದಾಗಿ ಅಂದುಕೊಂಡು ಎಲ್ಲವನ್ನು ತ್ಯಜಿಸುವುದು ಬಹಳ ಆಘಾತಕಾರಿ. ಇದರಿಂದ  ವೈವಾಹಿಕ ಜೀವನದ ಅರ್ಥವೇ ಇಲ್ಲದಂತಾಗುತ್ತದೆ. ಮದುವೆ ಅನ್ನೋದು ಗಂಡ ಹೆಂಡತಿ ಜೊತೆಯಾಗಿ ಕಳೆಯಲು ದೇವರು ಕೊಟ್ಟಿರುವ ವರ, ಅದನ್ನು ಬಳಸಿಕೊಳ್ಳುವುದು ನಿಮಗೆ ಬಿಟ್ಟಿದ್ದು.

ನಿಮ್ಮ ಸಮಸ್ಯೆ ಗಂಡನ ಜೊತೆ ಹೇಳಿಕೊಳ್ಳಿ..! ಬೇರೆಯವರಿಗೆ ಉಪದೇಶ ಕೊಡೋಕೆ ಹೋಗಬೇಡಿ..!

ಕೆಲವು ಬಾರಿ ಮದುವೆಯಾದ ನಂತರ ಹೆಣ್ಣು ಮಕ್ಕಳು ತಮ್ಮ ಹಠ ಸಾಧನೆಗೋಸ್ಕರ ಗಂಡನನ್ನೇ ಬಿಟ್ಟು ದೂರ ಇರುತ್ತಾರೆ. ಇಂತವರು ನಿಜಕ್ಕೂ ಮದುವೆ, ತನ್ನ ಗಂಡ ಎಂಬ ಅಕ್ಕರೆಯನ್ನು ಇಟ್ಟುಕೊಳ್ಳುವುದಿಲ್ಲ. ಅಪರೂಪಕ್ಕೆ ಸಿಕ್ಕರೆ ಸಾಕಪ್ಪ ಅಂತ ತಮ್ಮಲ್ಲೇ ಅಂದುಕೊಂಡು ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಇನ್ನೂ ಕೆಲವರು ಸಮಾಜಕ್ಕೆ ಮದುವೆ ಬಗ್ಗೆ ಉಪದೇಶ ಕೊಡುವವರೂ ಇರುತ್ತಾರೆ, ಆದ್ರೆ ಅವರ ವೈಯಕ್ತಿಕ ದಾಂಪತ್ಯ ಜೀವನ ಹಾಳಾಗಿರುತ್ತದೆ. ಇಂತಹ ಮನಸ್ಥಿತಿಯ ಮಹಿಳೆಯರು ಖಂಡಿತವಾಗಿ ಬದಲಾಗಬೇಕಿದೆ, ಜೊತೆಗ ತನ್ನ ಸಂಗಾತಿಯ ಜೊತೆಗೆ ಬ್ಯೂಟಿಫುಲ್ ಲೈಫ್ ನಡೆಸಬೇಕಿದೆ. ತಮ್ಮ ಪ್ರೀತಿಯನ್ನು ತನ್ನ ಗಂಡನ ಜೊತೆ ಇದ್ದು ಜಯಿಸುವ ಕಡೆಗೆ ಗಮನ ಕೊಟ್ಟರೆ ಸಾವಿರ ಆಘಾತಗಳಿಗೆ ದಾರಿಯಾಗುತ್ತದೆ.

ಸಮಾಜಕ್ಕೆ ಒಳ್ಳೆಯವರಾಗಲು ಟ್ರೈ ಮಾಡಬೇಡಿ..!

ಇನ್ನು ಬಹುತೇಕ ಮಹಿಳೆಯರು ಮದುವೆಯಾದ ನಂತರ ತನ್ನ ಲೈಫ್ ಅನ್ನು ಇನ್ನೊಬ್ಬರ ಲೈಫ್ ಜೊತೆ ಕಂಪೇರ್ ಮಾಡಲು ಹೋಗುತ್ತಾರೆ. ಹಾಗೆಯೇ ತನ್ನ ಸಂಸಾರವನ್ನು ಹೆಚ್ಚಾಗಿ ಹೊಗಳುತ್ತಾರೆ. ಇನ್ನೊಬ್ಬರ ಎದುರುಗಡೆ ನಿಂತು ತನ್ನ ಕುಟುಂಬದ ಬಗ್ಗೆ ಅತಿಯಾಗಿ ಒಳ್ಳೆಯ ಅಭಿಪ್ರಾಯವನ್ನು ತೋರಿಸಿಕೊಳ್ಳುತ್ತಾರೆ. ಬೇರೊಬ್ಬರ ಜೀವನ ಅಥವಾ ಸಂಸಾರದ ಸಮಸ್ಯೆ ಕಂಡು ಅದಕ್ಕೆ ಪರಿಹಾರ ನೀಡುವ ನೆಪದಲ್ಲಿ ಒಳ್ಳೆಯವರಾಗೋಕೆ ಟ್ರೈ ಮಾಡುತ್ತಾರೆ. ಈ ರೀತಿ ಹೊಗಳಿಕೆಯ ಮಾತನಾಡಿ ಎಲ್ಲರೂ ಕೂಡ ತನ್ನನ್ನು ತನ್ನ ಫ್ಯಾಮಿಲಿಯನ್ನು ಹೋಗಳಬೇಕು ಅಂತ ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ‌. ಇಂತಹ ಮನಸ್ಥಿತಿ ಉಳ್ಳಂತಹ ಮಹಿಳೆಯರು ಬಹುತೇಕ ಜನ ನಮ್ಮಲ್ಲಿ ಇದ್ದಾರೆ. ಹೀಗೆ ಮಹಿಳೆಯರು ಹಲವಾರು ಸಂಗತಿಗಳನ್ನು ತಿಳಿದುಕೊಳ್ಳಬೇಕು. ಅದರಲ್ಲೂ ಮದುವೆಯಾದ ನಂತರ ಹೆಣ್ಣು ಮಕ್ಕಳು ಮದುವೆಯ ಅರ್ಥವನ್ನು ತಿಳಿದುಕೊಂಡು ಮುಂದುವರೆದರೆ ನಿಮ್ಮ ಜೀವನ ಪಾವನವಾಗುತ್ತದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page