ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಕಿಚ್ಚ ಅಷ್ಟು ಹೇಳಿದ್ರೂ ಕಾಕ್ರೋಚ್‌ ಸುಧಿ ಎಚ್ಚೆತ್ತುಕೊಳ್ಳದೆ ಔಟ್‌ ಆಗ್ಬಿಟ್ರು..!

BBK12: ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ನಲ್ಲಿ ವೀಕೆಂಡ್‌ ಬಂದರೆ ಒಬ್ಬರು ಮನೆಯಿಂದ ಹೊರ ಹೋಗೋದು ಕಂನ್ಫರ್ಮ್‌ ಆಗುತ್ತದೆ, ಈ ವಾರ ಕಾಕ್ರೋಚ್‌ ಸುಧಿ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಕಾಕ್ರೋಚ್‌ ಸುಧಿ ಮನೆಯಲ್ಲಿ ಮೊದ ಮೊದಲು ಬಹಳ ಚೆನ್ನಾಗಿ ಆಟ ಆಟ ಆಡುತ್ತಿದ್ದರು, ಆದರೆ ಕೆಲವೊಮ್ಮೆ ಮನೆಯಲ್ಲಿ ಭಯದಿಂದಲೇ ಓಡಾಡುತ್ತಿದ್ದರು.  ಟಾಸ್ಕ್‌ ನಲ್ಲಿಯೂ ಕೂಡ ಚೆನ್ನಾಗಿ ಆಡುತ್ತಿದ್ದರು, ಆದ್ರೆ ಬರ್ತಾ ಬರ್ತಾ ಸೈಲೆಂಟ್‌ ಆಗಿಯೇ ಮನೆಯೊಳಗೆ ಇದ್ದರು.  ನೋಡೋಕೆ ವಿಲನ್‌ ತರ ಕಾಣಿಸಿದ್ರೂ ಕಾಕ್ರೋಚ್‌ ಸುಧಿ ಮಾತ್ರ ಒಳ್ಳೆಯ ಮನಸ್ಸಿನ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ಬಿಗ್‌ ಬಾಸ್‌ ಮನಗೆ ಹೋದ ನಂತರ ಕಾಕ್ರೋಚ್‌ ಸುಧಿ ಅವರ ಬಗ್ಗೆ ಜನರಿಗೆ ಅವರ ಬಗ್ಗೆ ಮೃದು ಸ್ವಭಾವಿ ಅನ್ನೋ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ: ಕಿಚ್ಚನ ವರ್ತನೆಗೆ ಹಿಗ್ಗಾಮುಗ್ಗ ಕೋಪಗೊಂಡ ಜನ ಹೇಳುತ್ತಿರುವುದೇನು ಗೊತ್ತಾ..?

ಸೋಷಿಯಲ್‌ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ ಎನ್ನುವ  ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು. ಕ್ರೋಚ್‌ ಸುಧಿ ಅವರೇ ಈ ವಾರ ಎಲಿನೇಟ್‌ ಆಗೋ ಸ್ಪರ್ಧಿ ಎನ್ನಲಾಗಿತ್ತು. ಇದೀಗ ಸುಧಿ ಅಧಿಕೃತವಾಗಿ ಔಟ್‌ ಆಗಿ ಬಂದಿದ್ದಾರೆ. ಹಿಂದಿನ ವಾರವಷ್ಟೇ ಕಾಕ್ರೋಚ್‌ ಸುಧಿ ಡೇಂಜರ್ಸ್‌ ಝೋನ್‌ನಲ್ಲಿ ಇದ್ದರು. ಕಳೆದ ವಾರ ಕಾಕ್ರೋಚ್  ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿ‌, ಆ ಅಧಿಕಾರ ಬಳಸಿ ಬಿಗ್​​ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು.

ವಿಲನ್‌ ಪಾತ್ರಗಳಲ್ಲಿ ಮಿಂಚಿದ ಕಾಕ್ರೋಚ್‌ ಸುಧಿಗೆ ಕಾಕ್ರೋಚ್‌ ಹೆಸ್ರು ಬಂದದ್ದು ಹೇಗೆ..?

ಕಾಕ್ರೋಚ್‌ ಸುಧಿ ಅವರ ನಿಜವಾದ ಹೆಸರು ಸುಧೀರ್ ಬಾಲರಾಜ್. ಇವರು  ಟಗರು ಸಿನಿಮಾದಲ್ಲಿ ಕಾಕ್ರೊಚ್ ಪಾತ್ರದಲ್ಲಿ ನಟಿಸಿದ್ದರು. ಇದರಿಂದ ಇವರು ಕಾಕ್ರೋಚ್ ಸುಧಿ ಎಂದೇ ಜನಪ್ರಿಯರಾಗಿದ್ದಾರೆ. ದುನಿಯ ವಿಜಿತ ಸಲಗ, ಭೀಮ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಧಿ ಬಹುತೇಕ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕಾಕ್ರೋಚ್ ಸುಧಿ ಅವರು ಹೀರೋ ಆಗಿ ನಟಿಸುತ್ತಿರುವ ಹೊಸ ಸಿನಿಮಾ ಸೆಟ್ಟೇರಿತ್ತು. ಆ ಸಿನಿಮಾಗೆ ಚೈಲ್ಡು ಎಂದು ಶೀರ್ಷಿಕೆ ಇಡಲಾಗಿತ್ತು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page