ಬ್ರೇಕಿಂಗ್ ನ್ಯೂಸ್
ಕರ್ನಾಟಕ

Mekedatu Project : ಕಾವೇರಿ ನೀರಿಗಾಗಿ ವಿವಾದ : ಮೇಕೆದಾಟು ಕೊನೆಗೂ ಕರ್ನಾಟಕಕ್ಕೆ…!

Mekedatu Project : ಮೇಕೆದಾಟು ಯೋಜನೆಯು ಕರ್ನಾಟಕ ಸರ್ಕಾರದ ಪ್ರಮುಖ ಕಾವೇರಿ ನದಿ ಯೋಜನೆಯಾಗಿದೆ. ಈ ಯೋಜನೆ ರಾಜ್ಯದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಉದ್ದೇಶಕ್ಕಾಗಿ ರೂಪಿಸಲಾಗಿದ್ದು, ಮೇಕೆದಾಟು ಯೋಜನೆ ಕರ್ನಾಟಕದ ಕುಡಿಯುವ ನೀರಿನ ಉದಾಹರಣೆಗೆ ಬೆಂಗಳೂರಿನಲ್ಲಿ ಹೆಚ್ಚಾಗಿ ಕಾಣಸಿಗುವ ನೀರಿನ ಸಮಸ್ಯೆ ಪರಿಹರಿಸಲು ಬಹುಮುಖ್ಯ ಯೋಜನೆಯಾಗಿರುತ್ತದೆ. ಆದರೆ, ಅಂತರರಾಜ್ಯ ನೀರಿನ ವಿವಾದ ಹಾಗೂ ಪರಿಸರ ಅನುಮೋದನೆಯ ಸಮಸ್ಯೆಯಿಂದಾಗಿ ಇದರ ಅನುಷ್ಠಾನ ತಡವಾಗುತ್ತಿದೆ .

ಮೇಕೆದಾಟು ಯೋಜನೆ ಕರ್ನಾಟಕ ಸರ್ಕಾರದ ಯೋಜನೆಯಾದರೂ, ಕಾವೇರಿ ನದಿಯ ಮೇಲೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿ, ತಮಿಳು ನಾಡಿಗೆ ನೀರು ಹರಿಯುವಾಗ ವ್ಯತ್ಯಯವಾಗಬಹುದೆಂಬ ಕಾರಣದಿಂದ ವಿವಾದ‌ ಶುರುವಾಗಿತ್ತು. ತಮಿಳುನಾಡು ಸರ್ಕಾರ ಈ ಯೋಜನೆಗೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ವಿರೋಧ ವ್ಯಕ್ತಪಡಿಸಿದೆ.

ಆದರೆ ಇದೀಗ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದಿದೆ. ಯೋಜನೆ ವಿರೋಧಿಸಿ ನೆರೆಯ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ದೊಡ್ಡ ಗೆಲುವು ಲಭಿಸಿದಂತಾಗಿದೆ. ಕಳೆದ ಏಳು ವರ್ಷಗಳಿಂದ ತಮಿಳುನಾಡು ಈ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿತ್ತಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಆ ಅರ್ಜಿಯನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ ಯೋಜನೆಗೆ ಮುಂದುವರೆಯಲು ಕರ್ನಾಟಕಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ತಜ್ಞರನ್ನು ಪರಿಗಣಿಸಿದ ನಂತರ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಡಿಪಿಆರ್ ಪರಿಗಣಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳ ಪೂರ್ವಾಪೇಕ್ಷಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಆ ವಿಷಯದ ದೃಷ್ಟಿಯಿಂದ, ಪ್ರಸ್ತುತ ತಮಿಳುನಾಡಿನ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ :Life: ಲೈಫಲ್ಲಿ ಒಂಟಿಯಾಗಿದ್ದೀನಿ ಅಂತ ಅಂದುಕೊಂಡಿದ್ದೀರಾ..? ಹಾಗಾದ್ರೆ ಚಿಂತೆ ಬಿಡಿ..ಈ ಸ್ಟೋರಿ ನಿಮಗಾಗಿ!

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page