ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Chalavadi T Narayanaswamy: ಸಿ.ಎಂ. ಬೆಂಕಿ ಬಿದ್ದಾಗಲೂ ರಾಜಕೀಯದ ಬೇಳೆ ಬೇಯಿಸಿಕೊಳ್ತಿದ್ದಾರೆ!

Chalavadi T Narayanaswamy: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಕಿ ಬಿದ್ದಾಗಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳಬೇಕೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯ ಬಾಂಬ್ ಸ್ಫೋಟದಿಂದ ಬಿಹಾರದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಬಿಜೆಪಿಗೆ ಹೊಡೆತ ಆಗಲಿದೆ. ಅಲ್ಲದೇ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟಕ್ಕೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ರಾಜಕೀಯದ ಹೇಳಿಕೆ ನೀಡಿದ್ದಾರೆ. ನನಗೆ ಆ ಹೇಳಿಕೆ ನೋಡಿ ಬಹಳ ಬೇಸರವಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಮೊದಲು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದರಲ್ಲಿ ರಾಜಕೀಯ, ಚುನಾವಣೆ ವಿಷಯವನ್ನು ಬೆರೆಸಬಾರದಿತ್ತು. ಇವರು ಅವಿವೇಕತನದ ಪ್ರದರ್ಶನವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನು ಖಂಡಿಸುವುದಾಗಿ ತಿಳಿಸಿದರು.

ಭಯೋತ್ಪಾದನೆ ನಿಗ್ರಹ ಮಾಡಿದ ನಮ್ಮ ಸರಕಾರ..!

ದೆಹಲಿ ಭಯೋತ್ಪಾದಕ ದಾಳಿಗೆ ಸಿಂದೂರದ ಮಾದರಿಯಲ್ಲೇ ಉತ್ತರ ಕೊಡುವುದಾಗಿ ಪ್ರಧಾನಿಯವರು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಆದರೆ, ಇವತ್ತು ವಿಪಕ್ಷದಲ್ಲಿರುವ ಕಾಂಗ್ರೆಸ್ಸಿನ ಕೆಲವು ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
2004ರಿಂದ 2014ರವರೆಗೆ ಅವರ ಕಾಲಾವಧಿಯಲ್ಲಿ ಸರಾಸರಿ 4 ಸಾವಿರ ಭಯೋತ್ಪಾದಕ ಘಟನೆಗಳು ನಡೆದಿದ್ದವು. 2014ರ ನಂತರ ನಮ್ಮ ಸರಕಾರ ಬಂದ ಬಳಿಕ ಸರಾಸರಿ ಕೇವಲ ಒಂದು ಸಾವಿರದಿಂದ 1500 ಘಟನೆಗಳು ನಡೆದಿವೆ. 2025ರಲ್ಲಿ ಕೇವಲ 629 ಘಟನೆಗಳು ನಡೆದಿವೆ. ನಾವು ಭಯೋತ್ಪಾದನೆ ನಿಗ್ರಹ ಮಾಡಿದ್ದು ಯಾರಿಗೇ ಆದರೂ ಅರ್ಥ ಆಗುತ್ತದೆ ಎಂದು ತಿಳಿಸಿದರು.

ಸದನದ ವಿಚಾರದಲ್ಲಿ ಮೇಲ್ಮನೆಯ ಸದಸ್ಯರ ಸಭೆ..!

ಬೆಳಗಾವಿಯಲ್ಲಿ ನಡೆಯುವ ಸದನದ ವಿಚಾರದಲ್ಲಿ ಮೇಲ್ಮನೆಯ ಸದಸ್ಯರ ಸಭೆಯನ್ನು ಇವತ್ತು ಕರೆಯಲಾಗಿತ್ತು. ಈ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ. ಮೇಲ್ಮನೆಯ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗಾಗಲೇ ಡಿಸೆಂಬರ್ 8ರಿಂದ ಸದನ ಆರಂಭ ಆಗಬಹುದು ಎಂದಿದ್ದಾರೆ. ಆದರೆ, ಸರಕಾರ ಯಾವುದೇ ತೀರ್ಮಾನ ಮಾಡಿಲ್ಲ ಎಂದರು. ಚರ್ಚೆಗೆ ತರಬೇಕಾದ ವಿಚಾರಗಳು, ನಮ್ಮ ನಡವಳಿಕೆ, ಸರಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡುವುದು, ಇವರ ವೈಫಲ್ಯಗಳು, ದುಂಡಾವರ್ತಿ, ಅಭಿವೃದ್ಧಿ ಶೂನ್ಯವಾದ ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಸರಕಾರವು ರೈತರ ಸಮಸ್ಯೆಗೆ ಪರಿಹಾರ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿ ಬೀದಿಗಿಳಿದ ಬಳಿಕ ಕಬ್ಬು ಬೆಳೆಗಾರರಿಗೆ ಅಲ್ಪಸ್ವಲ್ಪ ಮಟ್ಟದ ಪರಿಹಾರ ಕೊಟ್ಟಿದ್ದಾರೆ. ಅತಿವೃಷ್ಟಿಗೆ ಸಂಬಂಧಿಸಿ ಹೇಳಿಕೆ ಹೊರತುಪಡಿಸಿದರೆ ಹಣ ಬಿಡುಗಡೆ ಮಾಡಿಲ್ಲ; ಇವೆಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಸದನದಲ್ಲಿ ಯಾವ ರೀತಿ ಚರ್ಚಿಸಬೇಕೆಂದು ಇವತ್ತು ಚರ್ಚೆ ಮಾಡಿದ್ದೇವೆ ಎಂದರು. ಸದನದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅವಶ್ಯ ಚಿಂತನೆಗಳನ್ನು ಮಾಡಿದ್ದಾಗಿ ಹೇಳಿದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page