ಬ್ರೇಕಿಂಗ್ ನ್ಯೂಸ್
ದೇಶ

Delhi : ದೆಹಲಿ‌ ಕೆಂಪುಕೋಟೆಯಲ್ಲಿ ಸ್ಪೋಟ : 13 ಮಂದಿ ಸಾವು, ಹಲವರು ಗಂಭೀರ

Delhi :  ನವದೆಹಲಿಯ ಕೆಂಪು ಕೋಟೆ ಬಳಿ ಇಂದು ರಾತ್ರಿ (ನ.10, 2025) ಸಂಭವಿಸಿದ ಸ್ಫೋಟವು ಇಡೀ ರಾಷ್ಟ್ರವನ್ನೇ ತಲ್ಲಣಗೊಳಿಸಿದ್ದು, ದೆಹಲಿಯ ಕೆಂಪು ಕೋಟೆ ಬಳಿಯ ಲಾಲ್ ಖಿಲಾ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರಲ್ಲಿ ಸ್ಪೋಟವಾಗಿರುತ್ತದೆ.

9 ವಾಹನಗಳು ಸುಟ್ಟು ಕರಕಲಾಗಿತ್ತು, ಒಟ್ಟು 13 ಜನ ಸಾವನ್ನಪ್ಪಿರುವ ಮಾಹಿತಿಯಿದ್ದು, 30 ಮಂದಿಗೆ ಗಾಯಗಳಾಗಿರುತ್ತವೆ. ಇದೀಗ ಸ್ಪೋಟ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪ್ರತಿಯೊಂದರ ಬಗ್ಗೆಯೂ‌ ವಿಚಾರಣೆ ನಡೆಸಲಾಗುತ್ತಿದೆ. ಮಾಧ್ಯಮಗಳಲ್ಲಿ ಲೈವ್ ಕವರೇಜ್ ಕೂಡ ನೀಡಲಾಗುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.

ದೇಶದ ರಾಜಧಾನಿಯಾಗಿ ಕೋಟ್ಯಾಂತರ ಕುಟುಂಬಗಳಿಗೆ ಆಶ್ರಯ ತಾಣವಾಗಿರುವ, ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿರುವ, ಕೇಂದ್ರ ಸರ್ಕಾರದ ಶಕ್ತಿಪೀಠವಾಗಿರುವ ದೆಹಲಿಯಲ್ಲಿ ಈ ಹಿಂದೆ 2011ರಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ರೀತಿ ಹಲವಾರು ಬಾರಿ ಬಾಂಬ್ ಸ್ಫೋಟಗಳು ಸಂಭವಿಸಿದ್ದು. 1997ರಲ್ಲಿ ಅಲ್ಲಿ ಮೊದಲನೆ ಬಾರಿ ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಎದುರೇ ಬಾಂಬ್ ಸ್ಫೋಟ ಸಂಭವಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಆ ಮಹಾನಗರದಲ್ಲಿ ಹಲವಾರು ಬಾರಿ ಸ್ಫೋಟಗಳು ಸಂಭವಿಸಲಾಗಿದೆ. ಈ ಘಟನೆ ಹೇಗಾಯಿತು, ಏಕಾಯಿತು ಎನ್ನುವ ಪ್ರಶ್ನೆಗೆ ಎಲ್ಲಾ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಲೇ ಇದ್ದಾರೆ. ಕಾರಿನ‌ ಹಿಂಭಾಗ ಸ್ಪೋಟಗೊಂಡಿದ್ದು, ಅದರ ಅವಶೇಷಗಳು ಛಿದ್ರವಾಗಿ‌ ಬಿಟ್ಟಿವೆ. ಈ ಸ್ಪೋಟದ ಹಿಂದೆ ಹಲವು ಅನುಮಾನಗಳಿದ್ದು, ದೆಹಲಿ ಕೆಂಪುಕೋಟೆಯನ್ನು ಟಾರ್ಗೆಟ್ ಮಾಡಿದ್ರಾ…? ಎಲ್ಲಾ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.

ಇದನ್ನೂ ಓದಿ :ಉಡುಪಿ: ಪಬ್‌ ಬಳಿ ಹೊಡೆದಾಟ – ನಾಲ್ವರ ಬಂಧನ

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=njDy5b6YvC72mp8Y

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page