ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಹತ್ಯೆಗೀಡಾದವನ ಹುಟ್ಟಿದ ದಿನದಂದೇ ಹಂತಕರಿಗೆ ಜೀವಾವಧಿ ಶಿಕ್ಷೆ

Bengaluru: ಹತ್ಯೆಗೀಡಾದವನ ಹುಟ್ಟಿದ ದಿನದಂದೇ ಹಂತಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2018ರ ಜೂನ್​ನಲ್ಲಿ ನಡೆದಿದ್ದ ಪಾಟ್ನಾ ಮೂಲದ ಸಿದ್ಧಾರ್ಥ ಕೊಲೆ ಪ್ರಕರಣದ ತೀರ್ಪು ಪ್ರಕಟಗೊಂಡಿದೆ. ಆ ಮೂಲಕ ಬರ್ತ್‌ಡೇ ಅಂದೇ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅತ್ಯಾಪರೂಪದ ಘಟನೆ ವರದಿಯಾಗಿದೆ. ಬೆಂಗಳೂರಿನ ಸಿಸಿಹೆಚ್​ 59ನೇ ನ್ಯಾಯಾಲಯ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ದೊಣ್ಣೆಯಿಂದ ತಲೆಗೆ ಹೊಡೆದ ಹಂತಕರು
2018ರ ಜೂನ್ 26ರಂದು, ಸಿದ್ಧಾರ್ಥ್ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 2.45ರ ಸುಮಾರಿಗೆ, ಮೂತ್ರ ವಿಸರ್ಜನೆ ಮಾಡಲು ಕಾರು ನಿಲ್ಲಿಸಿದಾಗ ಬೈಕ್‌ನಲ್ಲಿ ಬಂದ ಇಬ್ಬರು ಉದ್ದೇಶಪೂರ್ವಕವಾಗಿ ಬೈಕ್‌ನಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಆರೋಪಿಗಳು ಸಿದ್ದಾರ್ಥ್​ಗೆ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಸಿದ್ದಾರ್ಥ್​ ಜೂನ್ 28, 2018 ರಂದು ಮೃತಪಟ್ಟಿದ್ದರು.

ಘಟನೆ ಬಳಿಕ ಗಿರೀಶ್ ಮತ್ತು ಮಹೇಶ್ ಎಂಬವರನ್ನು ಮೈಕ್ರೋಲೇಔಟ್​​ ಠಾಣೆ ಪೊಲೀಸರು​ ಬಂಧಿಸಿದ್ದು, ತನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಕೊಲೆಯಾಗಿರುವ ಸಿದ್ಧಾರ್ಥ್​ ಜನ್ಮದಿನವಾದ ಅಕ್ಟೋಬರ್​ 24ರಂದೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಸಿಸಿಹೆಚ್​ 59ನೇ ನ್ಯಾಯಾಲಯ ನೀಡಿರುವ ಆದೇಶ ಮಗನ ಸಾವಿಗೆ ಸಿಕ್ಕ ನ್ಯಾಯ ಎಂದು ಸಿದ್ದಾರ್ಥ್​ ಪೋಷಕರು ಹೇಳಿದ್ದಾರೆ. ನಮ್ಮ ನೋವಿಗೆ ಉತ್ತರ ಸಿಕ್ಕಿದೆ ಎಂದು ಮೃತ ಸಿದ್ಧಾರ್ಥ್​ ತಂದೆ ಕೌಶಲೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: Madikeri: ಅಬ್ಬಬ್ಬಾ ಅಪಾಯವನ್ನು ಆಹ್ವಾನಿಸುತ್ತಿದೆ ಮರಳಿನ ತಡೆಗೋಡೆ; ಬ್ಯಾರಿಕೇಡ್ ಅಳವಡಿಸಲು ಒತ್ತಾಯ..!

=======================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 176

You cannot copy content of this page