ಬೆಂಗಳೂರು: Tulu Times l ವಿದೇಶಿ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಭಾರತದಲ್ಲಿ ಕೋಟ್ಯಾಂತರ ರೂಪಾಯಿ ನಗದು ಹಣ ಅಕ್ರಮ ಚಟುವಟಿಕೆಗಳಿಗೆ ಬಳಸಿರುವ ಶಂಕೆಯ ಮೇಲೆ ಜಾರಿ ನಿರ್ದೇಶನಾಲಯ ಮಹತ್ವದ ತನಿಖೆ ಆರಂಭಿಸಿದೆ.
ಇ.ಡಿ ಮಾಹಿತಿ ಪ್ರಕಾರ, ಅಮೆರಿಕದ ಟ್ರೂಯಿಸ್ಟ್ ಬ್ಯಾಂಕ್ ಗೆ ಸಂಬಂಧಿಸಿದ ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಭಾರತಕ್ಕೆ ತರಲಾಗಿದ್ದು, ವಿವಿಧ ರಾಜ್ಯಗಳ ಎಟಿಎಂ ಕೇಂದ್ರಗಳಿಂದ ಹಲವು ಬಾರಿ ನಗದು ಹಣ ತೆಗೆಯಲಾಗಿದೆ. ಬಳಿಕ ಆ ಹಣವನ್ನು ಭಾರತದಲ್ಲಿನ ಕೆಲವು ಚಟುವಟಿಕೆಗಳಿಗೆ ಬಳಸಲಾಗಿದೆ ಎನ್ನಲಾಗಿದೆ.
ಅಧಿಕಾರಿಗಳ ಪ್ರಕಾರ, ಈ ಸಂಸ್ಥೆ ಭಾರತದಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೋಂದಾಯಿತವಾಗಿಲ್ಲ. ಆದರೂ ವಿದೇಶಿ ಹಣವನ್ನು ಅಕ್ರಮ ಮಾರ್ಗದಲ್ಲಿ ಬಳಸಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ವ್ಯಕ್ತಿ ಇ.ಡಿ ಹೊರಡಿಸಿದ್ದ ಲುಕ್ ಔಟ್ ಸರ್ಕ್ಯುಲರ್ ಆಧಾರದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಕ್ ಎಂಬಾತನನ್ನು ವಲಸೆ ಇಲಾಖೆ ತಡೆದಿದೆ. ಆತನ ಬಳಿ 24 ವಿದೇಶಿ ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ತನಿಖೆಯಲ್ಲಿ ಛತ್ತೀಸ್‌ಗಢದ ಧಮ್ತರಿ ಹಾಗೂ ಬಸ್ತರ್ ಭಾಗಗಳಂತಹ ಎಡಪಂಥೀಯ ಚಟುವಟಿಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಕಾರ್ಡ್‌ಗಳ ಮೂಲಕ ಸುಮಾರು ₹6.5 ಕೋಟಿ ಹಣ ತೆಗೆಯಲಾಗಿದೆ ಎಂದು ಪತ್ತೆಯಾಗಿದೆ. ಇಂತಹ ಪ್ರದೇಶಗಳಲ್ಲಿ ಸಂಘಟಿತ ರೀತಿಯಲ್ಲಿ ದೊಡ್ಡ ಪ್ರಮಾಣದ ನಗದು ಹಣ ಎತ್ತಿರುವುದು ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ. ಅಕ್ರಮ ಚಟುವಟಿಕೆಗಳಿಗೆ ಹಣ ಹರಿಸುವ ಉದ್ದೇಶ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.
2025ರ ನವೆಂಬರ್‌ನಿಂದ 2026ರ ಏಪ್ರಿಲ್ ಅವಧಿಯಲ್ಲಿ ವಿದೇಶಿ ಬ್ಯಾಂಕ್ ಕಾರ್ಡ್‌ಗಳ ಮೂಲಕ ಭಾರತಕ್ಕೆ ಸುಮಾರು ₹95 ಕೋಟಿ ಹಣ ಹರಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇ.ಡಿ ದಾಳಿಯ ವೇಳೆ: 25 ವಿದೇಶಿ ಡೆಬಿಟ್ ಕಾರ್ಡ್‌ಗಳು, ₹40 ಲಕ್ಷ ನಗದು, ಡಿಜಿಟಲ್ ಸಾಧನಗಳು, ದಾಖಲೆಗಳು, ಇತರೆ ಮಹತ್ವದ ಸಾಕ್ಷ್ಯಗಳು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
₹95 crore flows into India through foreign debit cards – ತುಳುಟೈಮ್ಸ್
ಇದನ್ನೂ ಓದಿ :ಕಣ್ಣುಗಳ ಊತ ಕಡಿಮೆಯಾಗುತ್ತಿಲ್ಲವೇ? ಅದು ಕಿಡ್ನಿ ಸಮಸ್ಯೆಯ ಎಚ್ಚರಿಕೆಯಾಗಿರಬಹುದು
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/EYKaZkoL8Qk?si=4owvVYpLNxE2jVal











