ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಕಡಬ: ಕುಮಾರಧಾರ ನದಿಗೆ ಆಯತಪ್ಪಿ ಬಿದ್ದು ಮಹಿಳೆ ಮೃತ್ಯು

ಅಲಂಕಾರು: Tulu Times | ಮಹಿಳೆಯೊಬ್ಬರು ಕುಮಾರಧಾರ ನದಿಗೆ ಕಾಲು ಜಾರಿಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಡಬದ ಆಲಂಕಾರು ಗ್ರಾಮದ ನಗ್ರಿ ನಿವಾಸಿ ಬೆಳ್ತರವರ ಪತ್ನಿ ಕೊರಪ್ಪೋಳು(65ವ) ಶಾಂತಿಮೊಗರು ಕುಮಾರಧಾರ ನದಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಮಹಿಳೆ ಆತೂರಿಗೆ ಔಷದಿ ತರಲೆಂದು,ಆತೂರಿನಿಂದ ಆಲಂಕಾರಿನವರೆಗೆ ಬಸ್ಸಲ್ಲಿ ಬಂದು ಆಲಂಕಾರಿನಿಂದ ಶಾಂತಿಮೊಗರುವಿನ ಮೂಲಕ ಕುಮಾರಧಾರ ನದಿ ತಟದ ಮೂಲಕ ನಡೆದುಕೊಂಡು ಹೋಗಿದ್ದರು. ಈ ವೇಳೆ ಕುಮಾರಧಾರ ಅಣೆಕಟ್ಟಿನ  ಚಿಕ್ಕದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನದಿಯ ಪಕ್ಕದಲ್ಲಿ ಕಾಲುಜಾರಿ ನದಿಗೆ ಬಿದ್ದಿರ ಬಹುದು  ಎನ್ನಲಾಗಿದೆ. ಮೃತರು ಪತಿ ಒರ್ವ ಪುತ್ರ ಸೇರಿದಂತೆ ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ: ಮಂಗಳೂರು: ಔಷಧ ತೆಗೆದುಕೊಳ್ಳಲು ಆಸ್ಪತ್ರೆಗೆ ಹೋದ ವ್ಯಕ್ತಿ ನಾಪತ್ತೆ !

ಸ್ಥಳೀಯ ಯುವಕರು ಬೋಟಿಂಗ್ ಗೆ ಬಂದ ಸಮಯದಲ್ಲಿ ಮಹಿಳೆಯ ಶವ ಸಿಕ್ಕಿದೆ.  ಇನ್ನು ಮಹಿಳೆಯನ್ನು ಪರಿಶೀಲಿಸಿದ್ದಾಗ,  ಬೆಳಿಗ್ಗೆ ತೆಗೆದುಕೊಂಡ ಔಷದಿ ಆಧಾರ್ ಮತ್ತು ಆತೂರಿನಿಂದ ಆಲಂಕಾರಿಗೆ ಪ್ರಯಾಣಿಸಿದ ಬಸ್ ಟಿಕೇಟ್ ಸಿಕ್ಕಿದ್ದು ಆಧಾರ್ ವಿಳಾಸದ ಆಧಾರದಲ್ಲಿ ಮೃತ ಮಹಿಳೆಯ ಮನೆಯವರನ್ನು ಸಂಪರ್ಕಿಸಲಾಗಿದೆ. ಪುತ್ರ ಭಾಸ್ಕರ ನೀಡಿರುವ ದೂರಿಂತೆ ಕಡಬ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಶವವನ್ನು ನದಿಯಿಂದ ತೆರವುಗೊಳಿಸಿ ಮಹಜರಿಗೆ ಕಡಬಕ್ಕೆ ತೆಗೆದುಕೊಂಡು ಹೋಗಲಾಯಿತು.

Kadaba: Woman dies after falling into Kumaradhara river-ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 188

You cannot copy content of this page