Bengaluru: ಸಿಲಿಕಾನ್ ಸಿಟಿಯಲ್ಲಿ ಡೆಲಿವರಿ ಬಾಯ್ ಗಳಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ ಎಂದು ಸ್ವೀಗಿ ,ಜೊಮ್ಯಾಟೋ ಸೇರಿ ಇತರೆ ಕಂಪನಿಗಳ ಜೊತೆ ಕಮಿಷನರ್ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ..!
ಇ ಕಾರ್ಮಸ್ ಸಂಸ್ಥೆಗಳ ಜೊತೆ ಆಯುಕ್ತರ ಕಚೇರಿಯಲ್ಲಿ ಸಭೆ!
ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ, ನೂರಕ್ಕೂ ಹೆಚ್ಚು ಇ ಕಾರ್ಮಸ್ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ಡೆಲಿವರಿ ನೀಡುವ ವೇಳೆ ಗ್ರಾಹಕರ ಜೊತೆ ದೌರ್ಜನ್ಯ , ರಸ್ತೆಯಲ್ಲಿ ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗುವುದು, ಮಹಿಳೆಯರ ಜೊತೆ ಅಸಭ್ಯ ಬಾಗಿ ವರ್ತನೆ ಮಾಡುವುದು, ಡೆಲಿವರಿ ತಡ ಮಾಡುವುದನ್ನೂ ಪ್ರಶ್ನೆ ಮಾಡಿದ್ದಕ್ಕೆ ಗ್ರಾಹಕರ ಮೇಲೆ ಹಲ್ಲೆ, ಸರಗಳ್ಳತನ, ಗ್ರಾಹಕರು ಆರ್ಡರ್ ಮಾಡುವ ವಸ್ತುಗಳನ್ನು ಕಳ್ಳತನ ಮಾಡಿ ಬೇರೆ ವಸ್ತುಗಳನ್ನು ನೀಡುವುದು, ಕೆಲಸಕ್ಕೆ ಸೇರಿಸಿಕೊಳ್ಳುವ ವೇಳೆ ಸರಿಯಾದ ರೀತಿಯಲ್ಲಿ ಮಾಹಿತಿ ಸಂಗ್ರಹ ಮಾಡದೆ ಇರುವುದು, ಮುಂದಿನ ದಿನಗಳಲ್ಲಿ ಡೆಲಿವರಿ ಬಾಯ್ ಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ್ರೆ, ಕಂಪನಿಗಳ ಮುಖ್ಯಸ್ಥರು, CEO ಗಳನ್ನ ಪ್ರಕರಣಗಳಲ್ಲಿ ಸೇರಿಸುವುದಾಗಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: ವ್ಯಾಘ್ರನ ಅಟ್ಟಹಾಸಕ್ಕೆ ಬಲಿಯಾಗುತ್ತಿವೆ ಒಂದೊಂದೇ ರೈತ ಜೀವ
ಇತ್ತೀಚೆಗೆ ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಗಳು ನಡೆಸಿದ ಕೆಲವು ಅಪರಾಧ ಕೃತ್ಯಗಳು ವರದಿಯಾಗುತ್ತಿವೆ. ಇವುಗಳಲ್ಲಿ ಲೈಂಗಿಕ ಕಿರುಕುಳ, ದರೋಡೆ ಮತ್ತು ಕಳ್ಳತನಗಳು ಸೇರಿವೆ. ಈ ಕೃತ್ಯಗಳಲ್ಲಿ ಒಬ್ಬ ಡೆಲಿವರಿ ಬಾಯ್ ಒಬ್ಬ ಮಾಡೆಲ್‍ಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಬಂಧಿತನಾಗಿದ್ದಾನೆ. ಒಬ್ಬ ಡೆಲಿವರಿ ಬಾಯ್ ಮೇಲೆ ನಡೆದ ಘರ್ಷಣೆಯಲ್ಲಿ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಚೇಸ್ ಮಾಡಿ ಕೊಲೆಗೈದಿದ್ದಾರೆ. ಅಲ್ಲದೆ, ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಗುಂಪನ್ನು ಪೊಲೀಸರು ಬಂಧಿಸಿದ್ದರು. ಯುವ ಮಾಡೆಲ್‍ಗೆ ಲೈಂಗಿಕ ಕಿರುಕುಳ ನೀಡಿದ ಡೆಲಿವರಿ ಬಾಯ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ರಾಶಿಕಾ ರಕ್ಷಿತಾ ಇಬ್ರಿಗೂ ಪತ್ರ ಸಿಕ್ಕಿಲ್ಲ..ರಂಪಾಟ ಮಾಡಿದ ರಾಶಿ..ಮೌನಿಯಾದ ರಕ್ಷಿತಾ!!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











