ಚಾರ್ಮಾಡಿ: Tulu Times | ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಲಾರಿಯೊಂದು ಸಿಲುಕಿದ ಸಿಲುಕಿದ ಪರಿಣಾಮ ಭಾರಿ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡಿದರು.
ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಈ ಘಟನೆ ನಡೆದಿದೆ. ಭಾರೀ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ತಿರುವು ಪಡೆದುಕೊಳ್ಳಲು ಸಾಧ್ಯವಾಗದೆ ರಸ್ತೆ ಮಧ್ಯೆ ಬಾಕಿಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾತ್ರಿ ಟ್ರಾಫಿಕ್ ಜಾಮ್ ಮುಂದುವರಿತ್ತು.
ಲಾರಿ ರಸ್ತೆಯಲ್ಲೇ ನಿಂತ ಕಾರಣ ಘನ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಲಘು ವಾಹನಗಳಿಗೆ ಸಂಚರಿಸುವಷ್ಟು ಜಾಗವಿದ್ದು ಬೇಕಾಬಿಟ್ಟಿಯಾಗಿ ವಾಹನಗಳನ್ನು ನುಗ್ಗಿಸಿದ ಕಾರಣ ಮತ್ತಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಹಲವು ತಾಸು ಸಾಲುಗಟ್ಟಿ ನಿಲ್ಲಬೇಕಾಯಿತು. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು,ಘಾಟಿ ಭಾಗದಲ್ಲಿ ವಾಹನ ಸಂಚಾರ ದಟ್ಟಣೆಯು ಅಧಿಕಗೊಂಡಿದೆ.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಇಚ್ಛಿಸುತ್ತೀರಾ ? ಹಾಗಾದ್ರೆ ಈಗಲೇ ಇ- ಪಾಸ್ ಗೆ ಅಪ್ರೈ ಮಾಡಿ
ಬೆಂಗಳೂರು: ಪ್ರತಿ ವರ್ಷ ಜನವರಿ 26ರಂದು ದೇಶದಾದ್ಯಂತ ಆಚರಿಸುವ ಗಣರಾಜ್ಯೋತ್ಸವವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮಹತ್ವವನ್ನು ಸಾರುವ ಅತ್ಯಂತ ಮಹತ್ವದ ದಿನವಾಗಿದೆ. ಈ ದಿನ 1950ರಲ್ಲಿ ಭಾರತವು ತನ್ನ ಸ್ವಂತ ಸಂವಿಧಾನವನ್ನು ಜಾರಿಗೆ ತಂದು, ಸಂಪೂರ್ಣ ಗಣರಾಜ್ಯ ರಾಷ್ಟ್ರವಾಗಿ ರೂಪುಗೊಂಡಿತು. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲೂ ಈ ದಿನವನ್ನು ಅತ್ಯಂತ ಗೌರವ, ಶಿಸ್ತು ಮತ್ತು ದೇಶಭಕ್ತಿಯೊಂದಿಗೆ ಆಚರಿಸಲಾಗುತ್ತದೆ.
ಇದೀಗ ಬೆಂಗಳೂರಿನಲ್ಲಿ ನಡೆಯುವ 77ನೇ ಗಣರಾಜ್ಯೋತ್ಸವ ವೀಕ್ಷಣೆಗೆ ಸಾರ್ವಜನಿಕರಿಗೆ ಇ-ಪಾಸ್ ವಿತರಿಸಲಾಗುತ್ತಿದ್ದು, ಸೇವಾ ಸಿಂಧು ವೆಬ್‌ಸೈಟ್ ಮೂಲಕ ಜನವರಿ 24ರೊಳಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ.
ಆಸಕ್ತರು ಸೇವಾ ಸಿಂಧು ವೆಬ್ ಸೈಟ್ (www.sevasindhu.karnataka.gov.in) ನಲ್ಲಿ ಜನವರಿ 24, 2026 ರ ಸಂಜೆ 5 ಗಂಟೆಯೊಳಗೆ ಅಗತ್ಯವಿರುವ ಎಲ್ಲ ವೈಯಕ್ತಿಕ ವಿವರಗಳನ್ನು ನಮೂದಿಸಿ ಇ-ಪಾಸ್ ಗಳನ್ನು ಪಡೆಯಬಹುದು.
ಇ-ಪಾಸ್ ನೋಂದಣಿ ಪ್ರಕ್ರಿಯೆ ಕುರಿತು ಸಹಾಯಕ್ಕಾಗಿ ಸೇವಾ ಸಿಂಧು ವೈಬ್ ಸೈಟ್‌ನಲ್ಲಿ ಸಹಾಯ ವಿಭಾಗವನ್ನು ವಿಕ್ಷೀಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ನಗರವಾಗಿದ್ದರೂ, ಇಲ್ಲಿ ಗಣರಾಜ್ಯೋತ್ಸವದ ಆಚರಣೆಗಳು ಭಾರತೀಯ ಸಂಸ್ಕೃತಿ ಮತ್ತು ಸಂವಿಧಾನದ ಮೌಲ್ಯಗಳನ್ನು ಜೀವಂತವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯುವಜನರಲ್ಲಿ ದೇಶಭಕ್ತಿ, ಕರ್ತವ್ಯಬೋಧನೆ ಮತ್ತು ಸಂವಿಧಾನದ ಮೇಲಿನ ಗೌರವವನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ.
Traffic jam at Charmadi Ghat, motorists’ parade!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











