ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಅಜೆಕಾರು:‌ ಮಗಳು ಮೃತಪಟ್ಟ ನೋವಿಗೆ ತಾಯಿ ಆತ್ಮಹತ್ಯೆಗೆ ಶರಣು !

ಅಜೆಕಾರು:‌ Tulu Times | ತನ್ನ ಮಗಳು ಕ್ಯಾನ್ಸರ್  ನಿಂದ ಮೃತಪಟ್ಟಿರುವ ನೋವಿನಲ್ಲಿಯೇ ನೊಂದು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜೆಕಾರು ಕೈಕಂಬದಲ್ಲಿ ಬೆಳಕಿಗೆ ಬಂದಿದೆ.

ಮಗಳು ವಸಂತಿ (30) ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದು,  ಇವರ ತಾಯಿ ಕುರುಂಬಿಲ (63) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವಸಂತಿ ಸುಮಾರು 6 ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಹಾಸಿಗೆಯಲ್ಲೇ ಮಲಗಿದ್ದರು, ಇತ್ತೀಚಿಗೆ ಆರೋಗ್ಯ ಬಹಳ  ಹದಗೆಟ್ಟಿತ್ತು.

ಆತ್ಮಹತ್ಯೆ ಮಾಡಿಕೊಳ್ಳಲು ಅಸಲಿ ಕಾರಣ ಏನು..?

ಕುರುಂಬಿಲ ಕೆಲಸಕ್ಕೆ ಹೋಗಿ ಸಂಜೆ ಮನೆಗೆ  ಬಂದು, ಮರುದಿನ ಬೆಳಗ್ಗೆ ಯಾರು ಮನೆಯಲ್ಲಿ ಕಾಣದೆ ಇದ್ದಾಗ ನೆರೆಮನೆಯ ರೆಹಮತ್ತ ಉಲ್ಲಾ ರವರು ಕುರುಂಬಿಲು ಅವರ ಅಕ್ಕ ಶಾರದಾ ಅವರನ್ನು ಕರೆದು ಕುರುಂಬಿಲ ಅವರ ಮನೆಯ ಎದುರಿನ ಬಾಗಿಲು ತೆರೆದು ನೋಡಿದ್ದಾರೆ. ಆಗ  ಮನೆಯ ಒಳಗಡೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಸಂತಿ ಪಕ್ಕದಲ್ಲಿಯೇ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಕುರುಂಬಿಲರವರ  ಇಬ್ಬರು ಮಕ್ಕಳು ಈ ಹಿಂದೆಯೇ ಮೃತಪಟ್ಟಿದ್ದಾರೆ. ಒಬ್ಬ ಮಗಳೂ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದು, ಮಗಳ ಸಾವಿನ ಚಿಂತೆಯಿಂದ ಕುರುಂಬಿಲ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಮಂಗಳೂರು: ಸುಲಿಗೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಳ್ಳನ ಬಂಧನ!

ಮಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಸುಲಿಗೆ ಮಾಡಿ, ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿ ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿತ ವ್ಯಕ್ತಿಯನ್ನು ತೊಕ್ಕೊಟ್ಟು ಚಂಬುಗುಡ್ಡೆ ನಿವಾಸಿ ನವೀನ್ ಸಿಕ್ಕೇರಾ (52) ಎಂದು ಗುರುತಿಸಲಾಗಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2011 ಮತ್ತು 2012ರಲ್ಲಿ ಐಪಿಎಸ್ ಸೆಕ್ಷನ್ 392 (ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ!

ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದ ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಅರ್ಜಿ ಪರಿಶೀಲಿಸಿದ ಹೈಕೋರ್ಟ್, ಶಿಕ್ಷೆಯನ್ನು ಒಂದು ವರ್ಷದ ಕಾರಾವಾಸಕ್ಕೆ ಇಳಿಸಿ, 15,000 ರೂ. ದಂಡ ವಿಧಿಸಿತ್ತು. ಅಲ್ಲದೆ, 2022ರ ಒಳಗೆ ಒಂದು ವೇಳೆ ಈ ಅವಧಿಯಲ್ಲಿ ಶರಣಾಗದಿದ್ದರೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಹಳೆಯ ಶಿಕ್ಷೆಯೇ (3 ವರ್ಷ) ಜಾರಿಯಾಗಲಿದೆ ಎಂದು ಹೇಳಿತ್ತು. ನಂತರ, ಪರಾರಿಯಾಗಿದ್ದ ಆರೋಪಿ ವಿರುದ್ಧ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿದೆ. ಮಂಗಳೂರು ಪೂರ್ವ ಠಾಣೆಯ ಎಎಸ್‌ಐ ಮಚ್ಚೇಂದ್ರನಾಥ್ ಜೋಗಿ ಹಾಗೂ ಸಿಬ್ಬಂದಿಗಳಾದ ಅಭಿಷೇಕ್ ಮತ್ತು ನಾರಪ್ಪ ಕೆ.ಬಿ. ಅವರ ತಂಡವು ಜನವರಿ 14, ರಂದು ಸುರತ್ಕಲ್‌ ಹೊನ್ನಕಟ್ಟೆಯ ಬಾರ್ ಒಂದರಲ್ಲಿ ಆರೋಪಿಯನ್ನು ಬಂಧಿಸಿದೆ. ಹೈಕೋರ್ಟ್ ವಿಧಿಸಿದ್ದ ಗಡುವು ಮೀರಿದ ಕಾರಣ. ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದೆ.

Ajekaru: Mother commits suicide over daughter’s death!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page