ತಿರುವನಂತಪುರಂ – ತುಳು ಟೈಮ್ಸ್: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ತಿರುವನಂತಪುರಂ ಪಾಲಿಕಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಐತಿಹಾಸಿಕ ಗೆಲುವು ಸಾಧಿಸಿದೆ. ಆ ಮೂಲಕ ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಯುಡಿಎಫ್ ಕೋಟೆಯಲ್ಲಿ ಅರಳಿದ ಕಮಲ
ಕಳೆದ 45 ವರ್ಷಗಳಿಂದ ಯುಡಿಎಫ್ ಆಡಳಿತದಲ್ಲಿಯೇ ತಿರುವನಂತಪುರಂ ಕಾರ್ಪೊರೇಷನ್ ಇತ್ತು. ಆದರೆ ಯುಡಿಎಫ್ ಅನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದೆ.
ಪಾಲಿಕೆಯ 101 ವಾರ್ಡ್‌ಗಳಲ್ಲಿ ಎನ್‌ಡಿಎ 50 ಸ್ಥಾನಗಳನ್ನು ಗೆದ್ದರೆ, ಆಡಳಿತಾರೂಢ ಎಲ್‌ಡಿಎಫ್ 29 ಸ್ಥಾನಗಳಿಗೆ ಇಳಿದಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 19 ಸ್ಥಾನಗಳನ್ನು ಗೆದ್ದುಕೊಂಡಿತು. ಎರಡು ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಕಳೆದ ವಾರ ಅಭ್ಯರ್ಥಿಯ ಮರಣದ ಹಿನ್ನಲೆ ಒಂದು ವಾರ್ಡ್ ಮತದಾನವನ್ನು ರದ್ದುಗೊಳಿಸಲಾಯಿತು.
ಇದನ್ನೂ ಓದಿ: ಮತ್ತೆ ದೆಹಲಿಯತ್ತ ಪ್ರಯಾಣ ಬೆಳೆಸಿದ ಡಿಕೆ ಶಿವಕುಮಾರ್.! ಏಕೆ ಗೊತ್ತಾ?
ತಿರುವನಂತಪುರಂ ಜಿಲ್ಲೆಯು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರ ತವರು ಕ್ಷೇತ್ರವಾಗಿರುವುದರಿಂದ ಈ ಫಲಿತಾಂಶವು ರಾಜಕೀಯವಾಗಿ ಮಹತ್ವದ್ದಾಗಿದೆ, ಇದು ರಾಜ್ಯ ರಾಜಧಾನಿಯಲ್ಲಿ ಬಿಜೆಪಿಯ ಪ್ರಗತಿಯ ಪ್ರಮಾಣವನ್ನು ಒತ್ತಿಹೇಳಿದೆ. ಆ ಮೂಲಕ ತಿರುವನಂತಪುರಂ ಪಾಲಿಕಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡಿದೆ.
ಮೋದಿ ಅಭಿನಂದನೆ
ಈ ಗೆಲುವಿನ ಬಗ್ಗೆ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.’ತಿರುವನಂತಪುರಕ್ಕೆ ಧನ್ಯವಾದಗಳು! ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಡೆದ ಬಹುಮತವು ಕೇರಳ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ರಾಜ್ಯದ ಅಭಿವೃದ್ಧಿಯ ಆಕಾಂಕ್ಷೆಗಳನ್ನು ನಮ್ಮ ಪಕ್ಷದಿಂದ ಮಾತ್ರ ಪೂರೈಸಲು ಸಾಧ್ಯ ಎಂದು ಜನರಿಗೆ ಖಚಿತವಾಗಿದೆ. ನಮ್ಮ ಪಕ್ಷವು ಈ ರೋಮಾಂಚಕ ನಗರದ ಬೆಳವಣಿಗೆಗೆ ಕೆಲಸ ಮಾಡುತ್ತದೆ ಮತ್ತು ಜನರಿಗೆ ಜೀವನವನ್ನು ಸುಲಭಗೊಳಿಸುತ್ತದೆ’ ಎಂದು ಮೋದಿ ತಿಳಿಸಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











