ಸಿನಿಮಾ:Tulu Times | ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಭಾರತೀಯ ನಟ. ಇದೀಗ ಇವರು ಸಾಮಾಜಿಕ ಕೆಲಸಗಳಿಂದ ಹೆಸರುಗಳಿಸುತ್ತಿದ್ದಾರೆ. ಸಹಾಯಹಸ್ತ ಎಂಬ ಟ್ರಸ್ಟ್ ಅನ್ನು ಧ್ರುವ ಸರ್ಜಾ ಪ್ರಾರಂಭ ಮಾಡಿದ್ದಾರೆ.
ಇದನ್ನೂ ಓದಿ: ಮದುವೆಯಾದ ಹೆಣ್ಣು ಮಕ್ಕಳು ಜವಾಬ್ದಾರಿಗಳನ್ನು ಮರೆಯೋದ್ಯಾಕೆ..?
ಇದು ಅನುಕಂಪವಲ್ಲ ನಮ್ಮ ಜವಾಬ್ದಾರಿ‘ ಅನ್ನೋ ಧ್ರುವ ರೀಲ್ ಅಷ್ಟೇ ಅಲ್ಲ ರಿಯಲ್ ಲೈಫ್ ನಲ್ಲೂ ಹೀರೋ ಆಗಿ ಮಿಂಚುತ್ತಿದ್ದಾರೆ. ಧ್ರುವ ಸರ್ಜಾ ಅಂಡ್ ಟೀಮ್ ಸಹಾಯಹಸ್ತ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ಬಡವರ ಧ್ವನಿಯಾಗಿ ಕೆಲಸ ಮಾಡಲಿದೆ.
ಇದನ್ನೂ ಓದಿ: ಈ ಕಾರಣದಿಂದ ದೇಹ ಮತ್ತು ಆರೋಗ್ಯವನ್ನೊಮ್ಮೆ ರಿಫ್ರೆಶ್ ಮಾಡ್ಕೊಳ್ಳಿ !
ಮತ್ತೊಮ್ಮೆ ಬಡಜನರ ಸಮಸ್ಯೆಗೆ ಕರಗಿದ ಧ್ರುವ ಮನಸ್ಸು. .!
ಇತ್ತೀಚಿಗೆ ರಂಗನತಿಟ್ಟು ಪಕ್ಷಿಧಾಮಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದ ಆಕ್ಷನ್ ಪ್ರಿನ್ಸ್ , ರಂಗನತಿಟ್ಟು ಪಕ್ಷಿಧಾಮದ ಸಿಬ್ಬಂದಿಗಳ ಸಮಸ್ಯೆಗೆ ಮಿಡಿದಿದ್ದಾರೆ. ಸಿಬ್ಬಂಧಿಗಳಿಗೆ ಅಗತ್ಯವಿರೋ ಶೂ, ಬ್ಯಾಗ್, ವಾಟರ್ ಬಾಟಲ್ ಗಳನ್ನು ವಿತರಿಸಿದ್ದಾರೆ. ಧ್ರುವ ಸರ್ಜಾ ಮಾಡಿದ ಸಹಾಯವನ್ನು ಪಕ್ಷಿಧಾಮದ ಬಡ ಸಿಬ್ಬಂದಿಗಳು ಕೊಂಡಾಡಿದ್ದಾರೆ.
ಇದನ್ನೂ ಓದಿ: ಟಿ – 20, 2026 ರ ಕ್ರಿಕೆಟ್ ವೀಕ್ಷಣೆಗೆ ಇಂದೇ ಟಿಕೆಟ್ ಬುಕ್ ಮಾಡಿ !
ಇನ್ನು ಇತ್ತೀಚೆಗೆ ಧ್ರುವ ಸರ್ಜಾ, ಮ್ಯಾನೇಜರ್, ಅವರ ಕಾರು ಚಾಲಕ ಹಾಗೂ ಅಭಿಮಾನಿಗಳ ವಿರುದ್ಧ ದೂರು ದಾಖಲಾಗಿತ್ತು. ಧ್ರುವ ಸರ್ಜಾ ವಿರುದ್ಧ ನೆರೆಮನೆಯವರೇ ದೂರು ದಾಖಲು ಮಾಡಿದ್ದಲ್ಲದೆ, ಎಫ್ಐಆರ್ ದಾಖಲು ಮಾಡುವಂತೆ ದೂರುದಾರರು ಒತ್ತಾಯಿಸಿದ್ದರು, ಕಾರಣ ಅಂದ್ರೆ, ಮನೋಜ್ ಧ್ರುವ ಸರ್ಜಾ ಅವರ ನೆರೆ ಮನೆಯವರೇ ಆಗಿದ್ದು, ಧ್ರುವ ಸರ್ಜಾ ಅವರ ಅಭಿಮಾನಿಗಳ ವರ್ತನೆಯಿಂದ ಬೇಸತ್ತು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಹಾಗೂ ಕಬ್ಬಡಿ ಕ್ರೀಡೆಗೆ ಪ್ರೋತ್ಸಾಹ
Action Prince Dhruva Sarja, who started a trust called Sahayahasta- ತುಳುಟೈಮ್ಸ್
ಇದನ್ನೂ ಓದಿ: ಡಿ. 16ರಿಂದ ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಆರಂಭ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











