ಉಪ್ಪಿನಂಗಡಿ – ತುಳು ಟೈಮ್ಸ್: ಅಡಿಕೆ ಮತ್ತು ವನಸ್ಪತಿ ಉತ್ಪನ್ನಗಳ ಖರೀದಿ ಕೇಂದ್ರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26) ಮತ್ತು ಜಂಶೀದ್ (25) ಬಂಧಿತರು.
ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿನ ಅಡಿಕೆ ಮತ್ತು ಅರಣ್ಯ ಉತ್ಪನ್ನಗಳ ಖರೀದಿ ಕೇಂದ್ರಕ್ಕೆ ಹಾಡಹಗಲೇ ನುಗ್ಗಿ 5 ಲಕ್ಷ ರೂ. ನಗದು, ದಾಖಲೆಗಳು ಹಾಗೂ ಚೆಕ್‌ಗಳು ಇದ್ದ ಬ್ಯಾಗ್ ಅನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Uppinangady: ಹಾಡಹಗಲೇ ಅಂಗಡಿಗೆ ನುಗ್ಗಿ ಐದು ಲಕ್ಷ ದೋಚಿದ ಕಳ್ಳರು
ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ಪೊಲೀಸರು ಅಂಗಡಿವೊಂದರಿಂದ ನಗದು ಕಳ್ಳವುಗೈದ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಿದ್ದರು. ಅಲ್ಲಿ ನಡೆಸಿದ ವಿಚಾರಣೆ ವೇಳೆ, ಇವರು ಉಪ್ಪಿನಂಗಡಿ ಕಳ್ಳತನದಲ್ಲಿ ನೇರ ಕೈವಾಡ ಇದೆ ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನಲೆ ಉಪ್ಪಿನಂಗಡಿ ಪೊಲೀಸರುಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅ. 27 ರಂದು ವಸಂತ್ ಎಂಬುವವರಿಗೆ ಸೇರಿದ ಅಂಗಡಿಯಿಂದ ಕಳವು ನಡೆದಿತ್ತು. ಅಂದು ಮಧ್ಯಾಹ್ನ ಅಂಗಡಿ ಮಾಲೀಕ ನಗದು ಡ್ರಾವರ್ ಅನ್ನು ಲಾಕ್ ಮಾಡಿ ಶಟರ್ ತೆರೆದೇ ಶೌಚಾಲಯಕ್ಕೆ ಹೋಗಿದ್ದರು. ಅವರು ಹಿಂದಿರುಗಿ ಬಂದಾಗ, ನಗದು ಡ್ರಾವರ್ ಒಡೆದು 5 ಲಕ್ಷ ರುಪಾಯಿ ನಗದು ಕಳುವು ಮಾಡಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಎನ್. ಆರ್. ಪುರ ಪೊಲೀಸರಿಂದ ಆರೋಪಿಗಳನ್ನು ವಶಕ್ಕೆ ಪಡೆದು, ಮುಹಮ್ಮದ್ ಶಹಬಾದ್ ಮತ್ತು ಜಂಶೀದ್‌ನನ್ನು ಉಪ್ಪಿನಂಗಡಿಗೆ ಕರೆತಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Two individuals, identified as Muhammed Shahabad and Jamsheed from Mudigere, were arrested in Chikkamagaluru in connection with a theft at Uppinangady’s Gandhi Park. Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











