ಹವಾಮಾನ : Tulu Times | ರಾಜ್ಯ ಹವಾಮಾನ ಇಲಾಖೆ, ಶನಿವಾರದಂದು ಬೆಂಗಳೂರಿನಲ್ಲಿ 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅದು ಈ ವರ್ಷದ ಅತ್ಯಂತ ಚಳಿ ದಿನವಾಗಿದೆ ಎಂದಿದೆ. ಮಳೆ ಹನಿ ಇಲ್ಲದೆ, ಮಂಜಿನ ಹನಿಯೊಂದಿಗೆ ಬಹಳ ಅಪರೂಪದ ಈ ಚಳಿಯ ದಿನದ ಬಗ್ಗೆ ಜನರೂ ಆತಂಕಗೊಂಡಿದ್ದಾರೆ. ಹೆಚ್ಚಾಗಿ ಬೆಂಗಳೂರಿನ ಜನರಿಗೆ ಚಳಿಯ ಅನುಭವ ಹೆಚ್ಚಾಗಿ ಇರುವುದಿಲ್ಲ. ಆದರೆ ಈ ದಿನದ ಚಳಿಯಿಂದಾಗಿ ಮನೆಯಿಂದ ಹೊರ ಹೋಗುವುದಕ್ಕೂ ಯೋಚಿಸುವಂತಾ ಪರಿಸ್ಥಿತಿಯಾಗಿದೆ.
ತಮಿಳುನಾಡಿನ ಉಂಟಾಗಿರುವ ದಿತ್ವಾ ಚಂಡಮಾರುತದ ಪರಿಣಾಮದಿಂದಾಗಿ ಚಳಿ ಹೆಚ್ಚಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಹಗಲಿನ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಲು ಕಾರಣವಾಗಿದ್ದು, ಸಾಮಾನ್ಯವಾಗಿ ನಿರಂತರ ಮಳೆ ಸುರಿದರೆ ಮಾತ್ರ ಈ ವ್ಯತ್ಯಾಸವಾಗುವುದನ್ನು ಕಾಣಬಹುದು, ಆದರೆ ಇಂದು ಹಾಗಾಗಲಿಲ್ಲ.
ಇನ್ನು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 2 ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಇತ್ತ ಬೆಂಗಳೂರಿನಲ್ಲಿ ಮುಂದಿನ 2 ದಿನ ಇದೇ ವಾತಾವರಣ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಈ ರೀತಿಯ ಹವಾಮಾನ ಬದಲಾವಣೆಯಿಂದ ಜನರ ಆರೋಗ್ಯ ಕೂಡಾ ಏರು ಪೇರಾಗುವ ಸಾಧ್ಯತೆಯಿದೆ.
Bengaluru is experiencing its coldest weather this year: Cyclone Ditva effect – ತುಳು ಟೈಮ್ಸ್
ಇದನ್ನೂ ಓದಿ :ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಂಸ್ಥೆಯಿoದ ವೈದ್ಯಕೀಯ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=XQ2uVqaVrzSdIpny











