ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಧಾರ್ಮಿಕಬೆಳ್ತಂಗಡಿ

Dharmasthala: ಧರ್ಮಸ್ಥಳ ಮಂಜುನಾಥನ ಅಚ್ಚರಿಯ ಚಮತ್ಕಾರ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

Dharmasthala: ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ. ನಾಡಿನ ವಿವಿಧ ಭಾಗಗಳಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಈ ದೇಗುಲ ಪ್ರತಿ ದಿನವೂ ಲಕ್ಷಾಂತರ ಜನ ಭಕ್ತಾದಿಗಳಿಂದ ದೇವಸ್ಥಾನ ತುಂಬಿರುತ್ತದೆ. ಈ ಕ್ಷೇತ್ರದ ಮಂಜುನಾಥನ ಶಕ್ತಿಗಳೇನು ಅನ್ನೋದನ್ನ ನೋಡೋಣ ಈ ಸ್ಟೋರಿಯಲ್ಲಿ..

ಶಿವನ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುವ ಪುಣ್ಯಕ್ಷೇತ್ರ ಅಂದರೆ ಅದು ಧರ್ಮಸ್ಥಳ. ಇತ್ತೀಚೆಗೆ ಕೆಲವು ವರ್ಷಗಳಿಂದ ಈ ದೇವಸ್ಥಾನದ ಬಗ್ಗೆ, ಈ ದೇವಸ್ಥಾನದ ಸುತ್ತಮುತ್ತ ನಡೆದಿರುವಂತಹ ಘಟನೆಗಳು ಜನರ ಮನಸ್ಸಿಗೆ ಆಘಾತವನ್ನು ಉಂಟು ಮಾಡಿದೆ. ಆದರೂ, ಕೂಡ ಶಿವನ ಭಕ್ತರು ಇಲ್ಲಿಗೆ ಬಂದು ತಮ್ಮ ಪ್ರೀತಿಯ ಶಿವನನ್ನು ನೋಡಿ ದರ್ಶನವನ್ನು ಪಡೆದು ಕಣ್ತುಂಬಿ ಕೊಳ್ಳುತ್ತಾರೆ.

ಆ ಮಂಜುನಾಥನ ಶಕ್ತಿಯೇ ಅಂತಹದ್ದು, ಇಲ್ಲಿಗೆ ಬಂದಿರುವಂತಹ ಸಾವಿರಾರು ಭಕ್ತರಿಗೆ ಇಲ್ಲಿ ಅನ್ನಸಂತರ್ಪಣೆ ನಡೆಯುತ್ತಾ ಇರುತ್ತೆ. ಪ್ರತಿ ದಿನವೂ ಕೂಡ ಈ ದೇವಾಲಯಕ್ಕೆ ಆಗಮಿಸುವಂತಹ ಭಕ್ತರು ಅನೇಕ. ಶಿವನನ್ನು ಆರಾಧಿಸುವ ಈ ಪವಿತ್ರ ಸ್ಥಳದಲ್ಲಿ ಪರಶಿವನೆ ನೆಲೆಸಿದ್ದಾನೆ. ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಸಾಕಷ್ಟು ಜನ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಸಾವಿರ ಸಮಸ್ಯೆ, ತೊಂದರೆಗಳೆಲ್ಲವೂ ಕೂಡ ಈ ದೇವಸ್ಥಾನಕ್ಕೆ ಬಂದು ನಿವಾರಣೆಯಾಗಿದೆ. ಧರ್ಮಸ್ಥಳ ಎಂದರೆ ಧರ್ಮವು ನೆಲೆಸಿರುವ ಸ್ಥಳ ಎಂಬುದು ಭಕ್ತರ ನಂಬಿಕೆ. ಶಿವನನ್ನು ಅತ್ಯಂತ ಧಾರ್ಮಿಕವಾಗಿ ಪೂಜಿಸುವ ಸ್ಥಳ ಇದಾಗಿದ್ದು, ರಾಜ್ಯದ ಪುರಾತನ ದೇವಸ್ಥಾನವು ಕೂಡ ಹೌದು. ಈಗ ಹೆಗ್ಗಡೆ ಅವರ ಕುಟುಂಬವು ಈ ದೇವಸ್ಥಾನವನ್ನು ನಿರ್ವಹಿಸುತ್ತಿದೆ. ಧರ್ಮಸ್ಥಳ ದೇಗುಲವನ್ನು 800 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಧರ್ಮಸ್ಥಳ ಮಂಜುನಾಥ ದೇಗುಲದ ಕುರಿತು ಕೆಲವೊಂದು ವಿಷಯಗಳನ್ನು ನಾವು ಅರಿತುಕೊಳ್ಳಲೇಬೇಕು.

ಮಂಜುನಾಥನ ಪುರಾತನ ಕಥೆ ಏನು..?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಧರ್ಮಸ್ಥಳ ದೇಗುಲವೂ ಶ್ರೀ ಮಂಜುನಾಥನ ಆವಾಸ ಸ್ಥಳ ಈ ಪವಿತ್ರ ದೇಗುಲವೂ ನೇತ್ರಾವತಿ ನದಿಯ ದಂಡೆಯಲ್ಲಿದೆ. ಇಲ್ಲಿಗೆ ಭೇಟಿ ನೀಡದ ಜನರೇ ಇಲ್ಲ. ಇದು ಭೂಮಿಯ ಮೇಲಿನ ಅಪರೂಪದ ಶಿವ ದೇವಾಲಯವಾಗಿದ್ದು, ಇಲ್ಲಿ ಜೈನರು ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಈ ದೇಗುಲದಲ್ಲಿ ಸ್ವಾಮಿ ಮಂಜುನಾಥನೊಂದಿಗೆ ಅಮ್ಮನವರು, ಚಂದ್ರನಾಥ ಮತ್ತು ಧರ್ಮ ದೈವಗಳನ್ನು ಆರಾಧಿಸಲಾಗುತ್ತದೆ. ಇಲ್ಲಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ರೆ, ಸಕಾರಾತ್ಮಕ ಭಾವಗಳು ಶಕ್ತಿಗಳು ನಮ್ಮಲ್ಲಿ ಹರಿಯಲು ಆರಂಭವಾಗುತ್ತದೆ. ಇದೇ ಈ ಕ್ಷೇತ್ರದ ಮಹಿಮೆ ಎಂದರೆ ತಪ್ಪಾಗಲಿಕ್ಕಿಲ್ಲ.

ಅಣ್ಣಪ್ಪ ಎಂಬ ಹೆಸರಿನ ಮಹಾನ್ ಶಕ್ತಿ ಹೊಂದಿರುವ ಸ್ಥಳೀಯ ವ್ಯಕ್ತಿಯಿಂದ ಶಿವಲಿಂಗವನ್ನು ಧರ್ಮಸ್ಥಳಕ್ಕೆ ಕರೆತರಲಾಯಿತು ಎಂದು ಹೇಳಲಾಗುತ್ತದೆ. ಕೆಲವು ಶತಮಾನಗಳ ಹಿಂದೆ ಧರ್ಮಸ್ಥಳವನ್ನು ಕಡುಮಾ ಎಂದು ಕರೆಯಲಾಗುತ್ತಿತ್ತಂತೆ. ಇನ್ನು ದಂತಕಥೆಯ ಪ್ರಕಾರ, ಜೈನ ಧರ್ಮದ ಮುಖ್ಯಸ್ಥ ಬಿರ್ಮಣ್ಣ ಪೆರ್ಗೆಡೆ ಮತ್ತು ಅವರ ಪತ್ನಿ ಅಮ್ಮು ಬಲ್ಲತಿ ಅವರು ನೆಲ್ಲಾಡಿ ಬೀಡು ಎಂಬ ಮನೆಯಲ್ಲಿ ವಾಸಿಸುತ್ತಿದ್ದರು. ಕನಸಿನಲ್ಲಿ  ಕಾಣಿಸಿಕೊಂಡು ಮತ್ತು ನೆಲ್ಲಾಡಿ ಬಿಡುವಿನಲ್ಲಿ ಧರ್ಮ ದೇವಸ್ಥಾನಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು. ನಂತರ ಇಲ್ಲಿ ಕಾಳರಾಹು, ಕಾಳಕಾಯಿ, ಕುಮಾರ ಸ್ವಾಮಿ ಮತ್ತು ಕನ್ಯಾಕುಮಾರಿಯನ್ನು ಸ್ಥಾಪಿಸಿದರು.

ಧರ್ಮಸ್ಥಳದ ಮೂಲ ಹೆಸರು ಕಡುಮಾ..!

ಪೆರ್ಗಡೆ ಅವರು ನ್ಯಾಯ ದೇವತೆಗಳನ್ನು ಸ್ಥಾಪಿಸಿದ ದಿನದಿಂದ ಕಡುಮಾ ಧರ್ಮ ಕ್ಷೇತ್ರ ಮತ್ತು ನಾಲ್ಕು ಧರ್ಮ ದೈವಗಳ ವಾಸಸ್ಥಾನವಾಗಿರುತ್ತದೆ. ಅರ್ಚಕರು ಸ್ಥಳೀಯ ದೈವಗಳ ಪಕ್ಕದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಪೆರ್ಗಡೆ ಅವರಿಗೆ ವಿನಂತಿಸುತ್ತಾರೆ. ಲಿಂಗವನ್ನು ಹುಡುಕುವಾಗ ದೈವಗಳು ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ ಲಿಂಗವನ್ನು ತರಲು ವತ್ಸಲ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸುತ್ತಾರೆ,  ಸ್ವಲ್ಪ ಸಮಯದ ನಂತರ ಲಿಂಗದ ಸುತ್ತಲೂ ದೇವಾಲಯವನ್ನು ನಿರ್ಮಿಸಲಾಗುತ್ತದೆ. ಇಲ್ಲಿ ಹೆಗಡೆ ಅವರ ಕೋರಿಕೆಯ ಮೇರೆಗೆ ವಾದಿರಾಜ ಸ್ವಾಮಿ ಅವರು ತಮ್ಮ ಯೋಗ ಶಕ್ತಿಗಳ ಮೂಲಕ ಶಿವಲಿಂಗವನ್ನು ಪವಿತ್ರ ಗೊಳಿಸುತ್ತಾರೆ. ಜೊತೆಗೆ ಆ ಸ್ಥಳಕ್ಕೆ ಧರ್ಮಸ್ಥಳ ಎಂದು ಹೆಸರಿಡುತ್ತಾರೆ ಎಂದು ಹೇಳುತ್ತಾರೆ. ಅಂದಿನಿಂದ ಧರ್ಮಸ್ಥಳವು ಪೆರ್ಗಡೆ ಕುಟುಂಬದ 20 ತಲೆಮಾರುಗಳಿಂದ ನಿರ್ವಹಿಸಲ್ಪಡುವ ಧರ್ಮ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಮೀಸಲಾದ ಸ್ಥಳವಾಗಿದೆ. ಇಂದು ಧರ್ಮಸ್ಥಳವು ಅತ್ಯಂತ ಹೆಚ್ಚು ಶಿವಭಕ್ತರನ್ನು ಕಾಣುವ ದೇವಾಲಯವಾಗಿದೆ. ಪ್ರತಿದಿನ 10,000 ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನು ಇಲ್ಲಿ ಹತ್ತಿರ ಒಂದೇ ಬಂಡೆಯಿಂದ ಬಾಹುಬಲಿಯ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page