Mangalore : ಬೆಳ್ಳಂಬೆಳಗ್ಗೆ ಕಣ್ತೆತೆರೆದು ನೋಡಿದ್ರೆ ಹೊರಗಡೆ ವ್ಯಕ್ತಿಯ ಮೃತದೇಹ. ಪ್ರಾಣಿಯ ದಾಳಿಯೋ ? ಅಥವಾ ಕೊಲೆಯೋ…? ವಿಚಾರಣೆ ನಡೆಯುತ್ತಿವೆಯಾದರೂ ಮೃತದೇಹ ನೋಡುವಾಗ ಎಂತವರಿಗೂ ಹೆದರಿಕೆ ಆದೀತು. ಹೌದು…! ವ್ಯಕ್ತಿಯೊಬ್ಬರ ಮೃತದೇಹವು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ನಡೆದಿದ್ದು, ಇದು ಕೊಲೆಯೋ ಅಥವಾ ಪ್ರಾಣಿಯ ದಾಳಿಯಿಂದ ಮೃತಪಟ್ಟಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಕುಂಪಲ ನಿವಾಸಿ ದಯಾನಂದ (60 ವರ್ಷ) ಎಂದು ಗುರುತಿಸಲಾಗಿದ್ದು, ದಯಾನಂದ ಅವರ ಮೃತದೇಹ ರಕ್ತಸಿಕ್ತವಾಗಿ ಬಿದ್ದಿದೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೋ ಪ್ರಾಣಿ ದಾಳಿಯಿಂದ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯ ಮಾಹಿತಿ ಪ್ರಕಾರ ಮುಂಜಾನೆ ವೇಳೆ ನಾಯಿ ದಾಳಿ ಮಾಡಿರುವ ಸಾಧ್ಯತೆ ಇದ್ದು, ದೇಹದ ಮೇಲೆ ಕಡಿದ ರೀತಿಯ ಗಾಯಗಳು ತುಂಬಾ ತೀವ್ರವಾಗಿತ್ತು. ವ್ಯಕ್ತಿ ಕಣ್ಣು ಸೇರಿ ದೇಹ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ತಜ್ಞರು ಇದೊಂದು ಪ್ರಾಣಿ ದಾಳಿ ಎಂದು ಸೂಚಿಸಿದರು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :Bengaluru: ಕಾಂಗ್ರೆಸ್ಸಿನವರಿಗೆ ಜನ ಸತ್ತಿದ್ದಕ್ಕೆ ಸಂಕಟವಿಲ್ಲ…! ಸಿ. ಟಿ ರವಿ!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/X4fDzCnlyPE?si=njrx3Asr1H6-vHmo











