ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bangalore : ತಪಾಸಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು : ವಿಮಾನ‌ ಪ್ರಯಾಣಿಕರಲ್ಲಿ ಮನವಿ..!

Bangalore : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಇದೀಗ ಪ್ರಕಟಣೆ ಹೊರಡಿಸಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವುದರಿಂದ, ಈ ಹಿನ್ನೆಲೆ ಎಲ್ಲ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮೊದಲೇ ಯೋಜಿಸಿ, ಸಾಕಷ್ಟು ಮುಂಚಿತವಾಗಿ ಆಗಮಿಸಬೇಕು. ತಪಾಸಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿರುತ್ತದೆ.

ವಿಮಾನ ಹಾರಾಟದಲ್ಲಿ ವ್ಯತ್ಯಯ ಅಥವಾ ಯಾವುದೇ ವಿಚಾರದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿದೆ. ಭದ್ರತಾ ತಪಾಸಣೆ ಹಾಗೂ ಇತರೆ ಪ್ರಯಾಣ ಪ್ರಕ್ರಿಯೆಗಳಿಂದಾಗಿ ಆಗುವ ವಿಳಂಬವನ್ನು ತಪ್ಪಿಸಲು ಮುಂಚಿತವಾಗಿ ಏರ್ಪೋರ್ಟ್‌ನಲ್ಲಿರಲು ಮನವಿ ಮಾಡಲಾಗಿದೆ. ಪ್ರಯಾಣವನ್ನು ಸುರಕ್ಷಿತ ಮತ್ತು ಸುಗಮವಾಗಿಡಲು ನಿಮ್ಮ ಸಹಕಾರವೂ ಮುಖ್ಯ ಎಂದು‌‌‌‌ ಪ್ರಯಾಣಿಕರಲ್ಲಿ‌ ಕೇಳಿಕೊಳ್ಳಲಾಗಿದೆ.

ಇದೇ ರೀತಿ, ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಿರ್ಗಮಿಸುವ ಪ್ರಯಾಣಿಕರಿಗೆ ಕಠಿಣವಾದ ತಪಾಸಣಾ ನಿಯಮಗಳನ್ನು ಘೋಷಿಸಿದೆ. ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಬೇಕು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿರುತ್ತದೆ.

ಇದನ್ನೂ ಓದಿ :Kadabaದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9fR6e9tLRSs?si=oeFOEtg8uLTHFOOH

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page