Mysore : ಪದೇ ಪದೇ ಹುಲಿಯ ದಾಳಿಯಿಂದಾಗಿ ಕಾಡಂಚಿನ ಗ್ರಾಮಗಳು ಮೈಸೂರಿನಲ್ಲಿ ಕಂಗಾಲಾಗಿದ್ದಾರೆ ಪ್ರತಿದಿನ ಕೆಲಸಕ್ಕೆ ಹೋಗುವ ಜನರು ಹೆಚ್ಚಾಗಿರುವ ಕಾರಣ ಹೆದರಿಕೊಂಡು ಜೀವನ ನಡೆಸಬೇಕಾಗಿದೆ ಹುಲಿ ದಾಳಿಯಿಂದ ಈಗಾಗಲೇ ಹಲವಾರು ರೈತರು ಇಲ್ಲಿ ಪ್ರಾಣ ಬಿಟ್ಟಿರುವುದು ವರದಿಯಾಗಿರುತ್ತದೆ ಹಾಗೂ ಇತ್ತಿಚೇಗಷ್ಟೇ ದನ ಕಾಯುತ್ತಿದ್ದ ರೈತನ ಬಳಿಗೆ ಹುಲಿ ಬಂದಾಗ ಆತ ಓಡಿ ತನ್ನ ಜೀವ ಉಳಿಸಿಕೊಂಡಿದ್ದ. ಹಾಗೆ ಹುಲಿ ಓಡಾಟದ ದೃಶ್ಯಗಳು ಕೂಡ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಸರಗೂರು ತಾಲ್ಲೂಕಿನಲ್ಲಿ ಮತ್ತೊಬ್ಬ ರೈತ ಬಲಿ;
ಇದೀಗ ಬಂದ ವರದಿಯ ಪ್ರಕಾರ, ಸರಗೂರು ತಾಲ್ಲೂಕಿನಲ್ಲಿ ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ದನ ಕಾಯುತ್ತಿದ್ದಾತನ ಮೇಲೆ ಹುಲಿಯು ಅಟ್ಯಾಕ್ ಮಾಡಿದ್ದು, ಪದೇ ಪದೇ ಈ ಘಟನೆಯಿಂದ ಜೀವಕಳೆದುಕೊಳ್ಳುತ್ತಿರುವ ರೈತರ ಬಗ್ಗೆ, ಅರಣ್ಯ ಇಲಾಖೆಯ ನಿರ್ಲಕ್ಷ್ಯ ತೋರಿರುವುದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಸ್ವತಃ ರೈತರೇ ಈ ಬಗ್ಗೆ ಮುನ್ನಚ್ಚರಿಕೆಯ ಕ್ರಮ ತೆಗೆದುಕೊಂಡು, ಹೊಲದಲ್ಲಿ ಕೆಲಸ ಮಾಡುವವರು ಮುಂಜಾನೆ ಅಥವಾ ಸಂಜೆ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ. ಅಥವಾ ಹತ್ತಿರದ ಕಾಡು ಪ್ರದೇಶದಲ್ಲಿ ಹೊಲಗಳಲ್ಲಿ ಬೆಳಕು ಅಥವಾ ಶಬ್ದ ವ್ಯವಸ್ಥೆಗಳನ್ನು ಹಾಕುವುದು, ಹುಲಿಗಳ ಚಲನಾ ವಲನ ಗಳಗಮನ ಹರಿಸಿಕೊಂಡು ಕೆಲಸ ಕಾರ್ಯದಲ್ಲಿ ತೊಡಗುವುದು ಸ್ವ ರಕ್ಷಣೆಗೆ ಒಳ್ಳೆಯದು.
ಇದನ್ನೂ ಓದಿ :Niramala Seetharaman : ಬ್ಯಾಂಕುಗಳಲ್ಲಿ ಸ್ಥಳೀಯ ಭಾಷಿಕರಿಗೆ ಉದ್ಯೋಗವಕಾಶ : ನಿರ್ಮಲಾ ಸೀತರಾಮನ್
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/2NUxdpIvL2A?si=fWmoMsoNw25i7mH_











