ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಕಡಬ: ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಕಂದಾಯ ನಿರೀಕ್ಷಕ!

ಕಡಬ: Tulu Times | ಲಂಚ ಸ್ವೀಕರಿಸುವಾಗ  ಕಂದಾಯ ನಿರೀಕ್ಷಕ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ.
ಲಂಚ ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ  ವೈರಲ್ ಆಗುತ್ತಿದೆ.

ಒಟ್ಟು ₹1000 ಹಣವನ್ನು ಫೆಬ್ರವರಿ 4, 2026ರಂದು ತಮ್ಮ ಕಚೇರಿಯಲ್ಲೇ ಸ್ವೀಕರಿಸುವಾಗ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿವೆ. ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪ್ರತಿ ಸೆಂಟ್ಸ್‌ಗೆ ₹100 ರಂತೆ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಕೇಳಿ ಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬಂಟ್ವಾಳದಲ್ಲಿ ರಿಕ್ಷಾ ಪಲ್ಟಿಯಾಗಿ ಮಹಿಳೆ ಬಲಿ

ಬಂಟ್ವಾಳ: ಪ್ರತ್ಯೇಕ ಪ್ರಕರಣದಲ್ಲಿ, ಮಾರಿಪಳ್ಳ ಸಮೀಪದ ಕಡೆಗೋಳಿ ಎಂಬಲ್ಲಿರಿಕ್ಷಾ ಪಲ್ಟಿಯಾಗಿ ಮಹಿಳೆಯೊಬ್ಬರು ಬಲಿಯಾಗಿರು ಘಟನೆ ನಡೆದಿದೆ. ಮಂಗಳೂರಿನ ನಿವಾಸಿಯಾಗಿರುವ ವಿಶಾಲಾಕ್ಷಿ (45) ಮೃತ ಮಹಿಳೆಯಾಗಿದ್ದಾರೆ.

ರಿಕ್ಷಾ ಬೈಕ್ ಗೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ಇನ್ನೊಂದು ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಮಂಗಳೂರು ಕಡೆಯಿಂದ ಬರುತ್ತಿರುವ ವೇಳೆ ಕಡೆಗೋಳಿ ಜಂಕ್ಷನ್ ನಲ್ಲಿ ಬೈಕ್ ಸವಾರನೋರ್ವ ಎದುರುಗಡೆ ಕ್ರಾಸ್ ಆಗಿದ್ದಾನೆ. ಈ ವೇಳೆ ರಿಕ್ಷಾಗಳು ಸರಣಿ ಅಪಘಾತವಾಗಿ ಪಲ್ಟಿಯಾಗಿದೆ ಎನ್ನಲಾಗಿದೆ.

Kadaba: Revenue inspector caught accepting bribe- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 125

You cannot copy content of this page