Hasanamba Temple: ಇಡೀ ದೇಶವನ್ನೆ ತನ್ನತ್ತ ಸೆಳೆಯುತ್ತಿರುವ ಶಕ್ತಿಕೇಂದ್ರ, ಹಾಸನಾಂಬೆ ಉತ್ಸವಕ್ಕೆ ನಾಳೆ ತೆರೆಬೀಳಲಿದೆ. ಅ. 10ರಿಂದ ಸಾರ್ವಜನಿಕ ದರ್ಶನ ಆರಂಭಗೊಂಡು, ಅ. 22 ಅಂದರೆ ನಾಳೆಯೇ ಕೊನೆಯಾಗಲಿದೆ.
ಕೇವಲ 12 ದಿನಗಳಲ್ಲಿ ಬರೋಬ್ಬರಿ 23 ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇವಿ ದರ್ಶನ ಪಡೆದು ಧನ್ಯರಾದರು. ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಬರೋಬ್ಬರಿ 17 ಕೋಟಿ ರೂ ಹೆಚ್ಚು ಆದಾಯ ಹರಿದು ಬಂದಿದೆ. ಆ ಮೂಲಕ ಹಾಸನಾಂಬೆ ದರ್ಶನೋತ್ಸವದ ಹೊಸ ದಾಖಲೆ ಬರೆದಿದೆ.
ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬಂದಿದೆ. 12ನೇ ದಿವನಾದ ಇಂದು ಕೂಡ ಮಂಗಳವಾರ ಆಗಿರುವುದರಿಂದ ಅಪಾರ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಅಕ್ಟೋಬರ್ 9ರ ಗುರುವಾರ ದೇಗುಲದ ಬಾಗಿಲು ತೆರೆಯಲಾಗಿದ್ದು. ಅಕ್ಟೋಬರ್ 17ರ ಏಕಾದಶಿ ದಿನದಂದು ದಾಖಲೆಯ ನಾಲ್ಕು ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ.
ನಿತ್ಯವೂ ಎರಡರಿಂದ ಎರಡುವರೆ ಲಕ್ಷ ಭಕ್ತಾದಿಗಳು ಹಾಸನಾಂಬೆಯನ್ನು ಕಣ್ತುಂಬಿಕೊಂಡು ತಮ್ಮ ಕಷ್ಟ ದೂರಮಾಡಿ, ಇಷ್ಟಾರ್ಥ ಸಿದ್ಧಿಸಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.
ಕಳೆದ ವರ್ಷ 20 ಲಕ್ಷ ಭಕ್ತರು ಹಸನಾಂಬೆಯ ದರ್ಶನ ಮಾಡಿ ದಾಖಲೆ ನಿರ್ಮಾಣವಾಗಿದ್ದರೆ, ಈ ವರ್ಷ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಹೊಸ ದಾಖಲೆ ಸೃಷ್ಟಿಯಾಗಿದೆ. 12 ದಿನಕ್ಕೆ 23 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈ ವರ್ಷ ಕೇವಲ ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ ದಾಖಲೆಯ 17 ಕೋಟಿಗೂ ಅಧಿಕ ಆದಾಯ ಬಂದಿದೆ. ಇಂದು ಬೆಳಿಗ್ಗೆ 5 ಗಂಟೆಯಿಂದ ದರ್ಶನ ಆರಂಭವಾಗಿದ್ದು ಮಧ್ಯಾಹ್ನ 2 ಗಂಟೆವರೆಗೆ ನಿರಂತವಾಗಿ ದರ್ಶನ ನಡೆಯಲಿದೆ. 2 ಗಂಟೆಯಿಂದ 3: 30ರವರೆಗೆ ನೈವೇದ್ಯಕ್ಕಾಗಿ ದೇಗುಲ ಮುಚ್ಚಲಿದೆ. ಆ ನಂತರ ರಾತ್ರಿವರೆಗೂ ದರ್ಶನ ಭಾಗ್ಯ ಸಿಗಲಿದೆ.
ಲಕ್ಷ ಲಕ್ಷ ಭಕ್ತರಿಗೆ ಆಶೀರ್ವಾದ ಮಾಡುವ ಮಹಾಮಯಿ ಹಾಸನಾಂಬೆಯ ಮತ್ತೆ ದರ್ಶನಕ್ಕಾಗಿ ಒಂದು ವರ್ಷ ಕಾಯಬೇಕಿದೆ. ಕೊನೆಯ ದಿನದ ದರ್ಶನಕ್ಕೂ ಅಪಾರ ಸಂಖ್ಯೆ ಭಕ್ತರು ಹರಿದು ಬರಲಿದ್ದು. ಜಿಲ್ಲಾಡಳಿತ ಕೂಡ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲು ಸನ್ನದ್ಧವಾಗಿದೆ.
ಇದನ್ನೂ ಓದಿ: Sullia: ಅತ್ಯಾಪರೂಪದ ಖಾಯಿಲೆಯೊಂದಿಗೆ ಹೋರಾಡಿದ ಚಾಂದಿನಿ ಇನ್ನಿಲ್ಲ
===================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











