ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮಂಗಳೂರು: ನೆಲಕ್ಕುರುಳಿದ ಬೃಹತ್ ಗಾತ್ರದ ಮರ; ಭಾರೀ ಹಾನಿ!

ಮಂಗಳೂರು: Tulu Times | ಆಕಸ್ಮಿಕವಾಗಿ ನೆಲಕ್ಕುರುಳಿದ ಬೃಹತ್ ಗಾತ್ರದ ಮರದಿಂದಾಗಿ ದ್ವಿಚಕ್ರ ವಾಹನಕ್ಕೆ ಭಾರೀ ಹಾನಿ ಯಾಗಿದ್ದು, ಮರ ಬಿದ್ದ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ.

ಪದವಿನಂಗಡಿ ಪ್ರದೇಶದ ಕೊರಗಜ್ಜ ಕಟ್ಟೆ ಮುಂಭಾಗದಲ್ಲಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಈ ವೇಳೆ ಸ್ಕೂಟರ್ ಮೇಲೆ ಮರ ಬಿದ್ದಿದ್ದು, ಸ್ಕೂಟರ್‌ಗೆ ಭಾರೀ ಹಾನಿಯಾಗಿದೆ. ಯಾರಿಗೂ ಏನೂ ಪ್ರಾಣಹಾನಿಯಾಗಿಲ್ಲ. ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟೆಂಪೋ ಚಾಲಕ ಮರ ಬೀಳುವ ಕ್ಷಣದಲ್ಲಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ,  ಸಮೀಪದ ಕಟ್ಟಡವೊಂದರ ಗಾಜುಗಳು ನುಚ್ಚುನೂರಾಗಿದೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು,  ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಸ್ಥಳೀಯರು  ಮರ ತೆರವುಗೊಳಿಸುವ ಕಾರ್ಯಾಚರಣೆ  ಮಾಡಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಜೆಕಾರು: ಮಗಳು ಮೃತಪಟ್ಟ ನೋವಿಗೆ ತಾಯಿ ಆತ್ಮಹತ್ಯೆಗೆ ಶರಣು !

ಅಜೆಕಾರು: ಪ್ರತ್ಯೇಕ ಪ್ರಕರಣದಲ್ಲಿ, ತನ್ನ ಮಗಳು ಕ್ಯಾನ್ಸರ್ ನಿಂದ ಮೃತಪಟ್ಟಿರುವ ನೋವಿನಲ್ಲಿಯೇ ನೊಂದು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜೆಕಾರು ಕೈಕಂಬದಲ್ಲಿ ಬೆಳಕಿಗೆ ಬಂದಿದೆ.

ಮಗಳು ವಸಂತಿ (30) ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದು, ಇವರ ತಾಯಿ ಕುರುಂಬಿಲ (63) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಸಂತಿ ಸುಮಾರು 6 ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಹಾಸಿಗೆಯಲ್ಲೇ ಮಲಗಿದ್ದರು. ಇತ್ತೀಚಿಗೆ ಆರೋಗ್ಯ ಬಹಳ ಹದಗೆಟ್ಟಿತ್ತು.

ಆತ್ಮಹತ್ಯೆ ಮಾಡಿಕೊಳ್ಳಲು ಅಸಲಿ ಕಾರಣ ಏನು..?

ಕುರುಂಬಿಲ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದು, ಮರುದಿನ ಬೆಳಗ್ಗೆ ಯಾರು ಮನೆಯಲ್ಲಿ ಕಾಣದೆ ಇದ್ದಾಗ ನೆರೆಮನೆಯ ರೆಹಮತ್ತ ಉಲ್ಲಾ ರವರು ಕುರುಂಬಿಲು ಅವರ ಅಕ್ಕ ಶಾರದಾ ಅವರನ್ನು ಕರೆದು ಕುರುಂಬಿಲ ಅವರ ಮನೆಯ ಎದುರಿನ ಬಾಗಿಲು ತೆರೆದು ನೋಡಿದ್ದಾರೆ. ಆಗ ಮನೆಯ ಒಳಗಡೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಸಂತಿ ಪಕ್ಕದಲ್ಲಿಯೇ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ ಕುರುಂಬಿಲರವರ ಇಬ್ಬರು ಮಕ್ಕಳು ಈ ಹಿಂದೆಯೇ ಮೃತಪಟ್ಟಿದ್ದಾರೆ. ಒಬ್ಬ ಮಗಳೂ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದು, ಮಗಳ ಸಾವಿನ ಚಿಂತೆಯಿಂದ ಕುರುಂಬಿಲ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

Mangalore: Huge tree lying on the ground; Heavy damage!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 181

You cannot copy content of this page