ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಟ ದರ್ಶನ್‌ ಗ್ಯಾಂಗ್‌ ಗೆ ಮತ್ತೊಂದು ಶಾಕ್..!‌ ಏನಾಯ್ತು ಗೊತ್ತಾ?

ಬೆಂಗಳೂರು: Tulu Times|‌ನಟದರ್ಶನ್‌ ಹಾಗೂ ಆತನ ಗ್ಯಾಂಗ್‌ ಜೈಲುವಾಸ ಅನುಭವಿಸುತ್ತಿದೆ. ಇದೀಗ ಜೈಲಿನಲ್ಲಿರುವ ಆರೋಪಿಗಳಿಂದ 82 ಲಕ್ಷ ಹಣವನ್ನ ಐಟಿ ಇಲಾಖೆ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ 82 ಲಕ್ಷ ಹಣವನ್ನ ಐಟಿ ವಶಕ್ಕೆ ನೀಡಿದೆ. ಹೀಗಾಗಿ ದರ್ಶನ್‌ ಗ್ಯಾಂಗ್‌ ಗೆ ಮತ್ತೊಂದು ಶಾಕ್ ಎದುರಾಗಿದೆ. ಇನ್ನು ಬೆಂಗಳೂರಿನ 57ನೇ ಸಿಸಿ ಹೆಚ್ ಕೋರ್ಟ್ 82 ಲಕ್ಷ ಹಣವನ್ನ ಐಟಿ ಇಲಾಖೆ ವಶಕ್ಕೆ ನೀಡಿದೆ. ನಟ ದರ್ಶನ್ ಗ್ಯಾಂಗ್ ನಿಂದ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಆದಾಯ ತೆರಿಗೆ ಇಲಾಖೆ ಮುಂದೆ ನಟ ದರ್ಶನ್ ತಕರಾರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಬಸ್ ನಲ್ಲಿ ಗೊತ್ತಿಲ್ಲದಂತೆ ಅವಿತಿದ್ದ ನೆಂಟ ವಿಶ್ರಾಂತಿ ಪಡೆಯುತ್ತಿದ್ದ…!

ಪ್ರಾಸಿಕ್ಯೂಷನ್ ನಿಂದ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದು, ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿದ ನಂತರ ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುವುದು. ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ನ್ಯಾಯಾಲಯ ವಿಚಾರಣೆ ಆರಂಭಿಸಲಿದೆ.
ತುಂಬಾನೇ ಚಳಿ ಇದೆ. ನಾವ್ಯಾರೂ ರಾತ್ರಿ ಮಲಗುತ್ತಿಲ್ಲ. ಹೆಚ್ಚುವರಿ ಕಂಬಳಿ ಕೊಡಿಸಿ’ ಎಂದು ಕೋರ್ಟ್‌ಗೆ ದರ್ಶನ್ ಮನವಿ ಮಾಡಿದ್ದರು.  ಬಳಿಕ ಜಡ್ಜ್, ‘ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ’ ಎಂದು ಪ್ರಶ್ನೆ ಮಾಡಿದ್ದರು. ನಂತದ ದರ್ಶನ್‌ ಗೆ ಕಂಬಳಿ ಕೊಟ್ಟಿದ್ದಾರೆ.

ಇನ್ನು ದರ್ಶನ್‌ ನಟನೆಯ  ಡೆವಿಲ್ ಅಬ್ಬರಕ್ಕೆ ದಿನಗಣನೆ ಶುರುವಾಗಿದೆ. ದಾಸನ ಅಭಿಮಾನಿಗಳೆಲ್ಲರೂ ಸೇರಿ ಸಿನಿಮಾ ಗೆಲ್ಲಿಸೋಕೆ ಪಣ ತೊಟ್ಟಿದ್ದಾರೆ,  ದಾಸನ ಬಾರಿ ಕಟೌಟ್ ಗಳ ನಿಲ್ಲಿಸೊಕೆ ಸಕಲ ತಯಾರಿ ನಡೆಸ್ತಾ ಇದ್ದಾರೆ. ದರ್ಶನ್ ಪರಪ್ಪನ ಅಗ್ರಹಾರದ ಜೈಲಿನದ್ದರೂ ಕೂಡ ಡೆವಿಲ್ ಪ್ರಚಾರ ಆರಂಭವಾಗಿದ್ದು, ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಡೆವಿಲ್‌ ಸಿನಿಮಾಗೋಸ್ಕರ ದಿನಂಪ್ರತಿ ಓಡಾಡುತ್ತಿದ್ದು, ಈಗಾಗಲೇ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Another shock for actor Darshan’s gang..! Do you know what happened?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page