ಮಂಗಳೂರು : Tulu Times | ಮಾಸ್ಕ್ ಮ್ಯಾನ್ ಚಿನ್ನಯ್ಯ, ಕೈಯಲ್ಲಿ ಬುರುಡೆ ಹಿಡಿದು ಧರ್ಮಸ್ಥಳದಲ್ಲಿ ಸಂಚಲನ ಮೂಡಿಸಿದ್ದ ಈತ ತಾನೇ ಹೇಳಿದ ಮಾತಿಗೆ ಸಿಕ್ಕಾಕಿಕೊಂಡಿದ್ದಾನೆ. ಈತ ತೋರಿಸಿದ ಕಡೆಯಲೆಲ್ಲಾ ಗುಂಡಿಯನ್ನು ಅಗೆದು ಬುರುಡೆ ಪ್ರಕರಣಕ್ಕೆ ತೀವ್ರಗತಿ ಶೋಧವೇ ನಡೆದಿತ್ತು. ಆದರೆ, ಆತ ಹೇಳಿದಷ್ಟು ಶವಗಳು ಅಲ್ಲಿ ಕಂಡುಬಂದಿರದ ಕಾರಣ ಇದೆಲ್ಲಾ ಸುಮ್ಮನೆ ಹೇಳ್ತಾ ಇದ್ದಾನೆ ಅಂತ ಅನುಮಾನ ತೋರಿದ ಎಸ್ ಐಟಿ, ಕೊನೆಗೆ ಮಾಸ್ಕ್ ಮ್ಯಾನ್ ನನ್ನೇ ಜೈಲಿಗಟ್ಟುವ ಕಾರ್ಯ ನಡೆದಿತ್ತು.
12 ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ನೀಡಲು ಅನುಮತಿ ;
ವಿಚಾರಣೆಗಳೆಲ್ಲಾ ನಡೆದ ಬಳಿಕ, ಈತನಿಗೆ ಕೋರ್ಟ್ ಕೊನೆಗೂ ಜಾಮೀನು ನೀಡಲು ಮುಂದಾಗಿದೆ. ಅಷ್ಟೇ ಅಲ್ಲ ಒಟ್ಟು 12 ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ನೀಡಲು ಅನುಮತಿ ನೀಡಿದೆ. ಜಿಲ್ಲೆಯನ್ನು ತೊರೆಯದಂತೆ ಚಿನ್ನಯ್ಯನಿಗೆ ಕೋರ್ಟ್ ತಾಕೀತು ಮಾಡಿದೆ. ಎಲ್ಲಿಯೂ ಯಾವುದೇ ಸಂದರ್ಶನ ಹೇಳಿಕೆಗಳನ್ನು ಕೊಡಬಾರದು ಎಂದು ಕಡ್ಡಾಯಗೊಳಿಸಿರುವ ಕೋರ್ಟ್, ಇನ್ನು ಮುಂದೆ ಇದೇ ರೀತಿ ಅಪರಾಧಕ್ಕೆ ಕೈ ಹಾಕಬಾರದು ಮತ್ತು ಸಮಾನ ಅಪರಾಧ ಮತ್ತೆ ಮಾಡಬಾರದು, ವಿಚಾರಣೆಯಿಂದ ತಪ್ಪಿಸಿಕೊಳ್ಳುವುದು, ಸ್ಥಳ ಬಿಟ್ಟು ಓಡಿ ಹೋಗುವುದಾಗಲೀ, ಅಡಗುವುದಾಗಲೀ ಮಾಡಬಾರದು, ಇನ್ನು ಸಾಕ್ಷಿದಾರರಿಗೆ ಲಂಚ, ಬೆದರಿಕೆ ಕೊಡಬಾರದು, ಸಾಕ್ಷಿಗಳನ್ನು ನಾಶ ಮಾಡಬಾರದು ಹಾಗೂ ಕೇಸಿಗೆ ಸಂಬಂಧಿಸಿದಂತೆ ದಾಖಲೆ ನಾಶ ಮಾಡುವಂತಿಲ್ಲ. ಹಾಗೆಯೇ ಕೋರ್ಟ್ ಅನುಮತಿ ಇಲ್ಲದೆ ಕೋರ್ಟ್ ವ್ಯಾಪ್ತಿಯ ಹೊರಗೆ ಹೋಗುವಂತಿಲ್ಲ, ಕೇಸ್ ಬಗ್ಗೆ ಮಾಧ್ಯಮಕ್ಕೆ ಮಾತನಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಇನ್ನು ಪ್ರಥಮ ಚಾರ್ಜ್ ಶೀಟ್ ಸಲ್ಲಿಸಿರುವ ಎಸ್ ಐಟಿ ಮುಂದಿನ ಹಂತದ ತನಿಖೆಯಲ್ಲಿರುವಾಗಲೇ ಚಿನ್ನಯ್ಯನಿಗೆ ಜಾಮೀನು ಸಿಕ್ಕಿದು ಶಾಕ್ ಆಗಿದೆ. Mask Man Chinnayya release: Court sets conditions for bail – ತುಳು ಟೈಮ್ಸ್
ಇದನ್ನೂ ಓದಿ :ಲೋಕಾಯುಕ್ತ ದಾಳಿ ಹಿನ್ನೆಲೆ ಭ್ರಷ್ಟ ಅಧಿಕಾರಿಗಳು ಲಾಕ್ ಆಗಿದ್ದೇಗೆ..?
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi











