ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

‘ಕುರಾಯದೊಡೆಯ’ ಕನ್ನಡ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ

ಬಂದಾರು: Tulu Times l ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನ ಬಂದಾರು ಇದರ ಏಪ್ರಿಲ್ 02 ರಿಂದ 10 ವರೆಗೆ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವದ ಪ್ರಯುಕ್ತ ‘ಕುರಾಯದೊಡೆಯ’ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆಗೊಳಿಸಲಾಗಿದೆ.

ಬೈಪಾಡಿ ಮೇಘನ ಪ್ರಶಾಂತ್ ಹೊಳ್ಳ ಇವರ ಸಾಹಿತ್ಯ, ಮಾ.ಸರ್ವಾರ್ಥ ಜೈನ್, ಅಶ್ವಿಜಾ ಶ್ರೀಧರ್ ಭಟ್ ಇವರ ಧ್ವನಿಯಲ್ಲಿ, ಮಾಸ್ಟರ್ ರೆಕಾರ್ಡಿಂಗ್ ಗುರುವಾಯನಕೆರೆ ಇವರ ರೆಕಾರ್ಡಿoಗ್ ನಲ್ಲಿ ಮೂಡಿಬಂದಿರುವ ಕುರಾಯದೊಡೆಯ ಭಕ್ತಿಗೀತೆಯ ಧ್ವನಿ ಸುರುಳಿಯು ಶ್ರೀ ಕ್ಷೇತ್ರ ಕುರಾಯದಲ್ಲಿ ಏಪ್ರಿಲ್ 4 ರಂದು ನೀಲೇಶ್ವರ ಆಲಂಬಾಡಿ ವೈಷ್ಣವ್ ತoತ್ರಿಗಳು ಅಮೃತ ಹಸ್ತದಿಂದ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ, ಅಭಿವೃದ್ಧಿ ಸಮಿತಿ, ಯಕ್ಷಗಾನ ಸಮಿತಿ, ಪದಾಧಿಕಾರಿಗಳು, ಅರ್ಚಕರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Audio recording of Kannada devotional songs by ‘Kuraya Dodeya’ released – ತುಳುಟೈಮ್ಸ್

ಇದನ್ನೂ ಓದಿ :ಬೆಳದಿಂಗಳ ರಾತ್ರಿಗಳು, ಕಲ್ಲಿನ ಮೇಲೆ ನಿದ್ರೆ: ಕಾಡಿನಲ್ಲಿ ಬದುಕುಳಿದು ಬಂದಿರುವ ಶರಣ್ಯಾಳ ಕಥೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=lz_cJF6WHlkG7wK9

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page