ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದವರ ವಿರುದ್ಧ ಪ್ರಕರಣ ದಾಖಲು!

ಬೆಳ್ತಂಗಡಿ: Tulu Times | ಕುಡಿದ ಮತ್ತಿನಲ್ಲಿ ನಿಲ್ಲಿಸಿದ್ದ ಬೈಕ್‌ ತೆಗೆದುಕೊಂಡು ಹೋಗಿ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಡ್ಕಿ ಬಹಿನ್ ಯೋಜನೆ e-KYC ದೋಷಗಳು: ಭೌತಿಕ ಪರಿಶೀಲನೆಗೆ ಆದೇಶ

ಇಬ್ಬರು ಸ್ನೇಹಿತರು ಬಾವನ ಮನೆಗೆ ಹೋಗುವಾಗ ದಾರಿತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಚಲಾಯಿಸಿಕೊಂಡು ಹೋಗುವಾಗ 25 ರಿಂದ 30 ಜನರ ಗುಂಪು ಸೇರಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ನಂತರ ಜೀವಬೆದರಿಕೆ ಹಾಕಿದ್ದಾರೆ. ಈ ಸಂಬಂಧ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಇ-ಆಟೋ ರಿಕ್ಷಾ ಪರವಾನಗಿಗೆ ಆರ್‌ಟಿಒ ಮಾರ್ಗಸೂಚಿ ಪ್ರಕಟ

ಘಟನೆ ನಡೆದದ್ದೇನು..?

ಮರೋಡಿಯಲ್ಲಿರುವ ತನ್ನ ಬಾವನ ಮನೆಗೆ ಅಬ್ದುಲ್ ಸಮದ್ ಮತ್ತು ಸ್ನೇಹಿತ ಮೊಯಿದ್ದೀನ್ ನಾಸಿರ್ ಇಬ್ಬರು ಜ.20 ರಂದು  ಜಾವ 2:15 ಗಂಟೆಯಿಂದ 2:30 ಗಂಟೆಯ ಮಧ್ಯದ ಅವಧಿಯಲ್ಲಿ ಬರುವಾಗ ಅಬ್ದುಲ್ ಸಮದ್ ಮತ್ತು ಸ್ನೇಹಿತನಿಗೆ ಕುಡಿದ ಮತ್ತಿನಲ್ಲಿ ಬಾವನ ಮನೆ ತಿಳಿಯದೇ ಇದ್ದು, ಹುಡುಕಾಡಿ ನಡೆದುಕೊಂಡು ಹೋಗುವ ಸಮಯ ಪಳಾರಗೋಳಿ ಎಂಬಲ್ಲಿ ಮನೆಯ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಬೈಕನ್ನು ತೆಗೆದುಕೊಂಡು ಹೋಗುವಾಗ ಎರಡು ಬೈಕ್ ನಲ್ಲಿ ಬಂದ ಜನ ಅಡ್ಡ ಹಾಕಿದಾಗ ಅವರಿಂದ ತಪ್ಪಿಸಿಕೊಂಡು ಬೆಳ್ತಂಗಡಿ ತಾಲೂಕು ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಸುಮಾರು 25 ರಿಂದ 30 ಜನರ ಗುಂಪು ಅಬ್ದುಲ್ ಸಮದ್ ನನ್ನು ಸುತ್ತುವರಿದು ಮರಕ್ಕೆ ಕಟ್ಟಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.  ಹಲ್ಲೆಯಿಂದ ಅಬ್ದುಲ್ ಸಮದ್‌ ಹಾಗು ಮೊಯಿದ್ದಿನ್ ನಾಸಿರ್ ರವರಿಗೆ ಮೈಕೈಗೆ, ಬೆನ್ನಿಗೆ ಗಾಯಗಳಾಗಿದೆ.

ಇದನ್ನೂ ಓದಿ: ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ; ಅವರು ಸಂವಿಧಾನದ ರಕ್ಷಕರು: ವಿಪಕ್ಷ ನಾಯಕ ಆರ್.ಅಶೋಕ್

ಈ ಬಗ್ಗೆ ಹಲ್ಲೆಯಿಂದ ಗಾಯಗೊಂಡ ಅಬ್ದುಲ್ ಸಮದ್ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಬಾಚು, ನಿಶೀತ್,ನರೇಶ್ ಅಂಚನ್, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುನ್, ಸಸ್ತಿಕ್,ದೇವಿಪ್ರಸಾದ್, ಸುಧೀರ್,ಚಂದಪ್ಪ ವಿರುದ್ಧ ಕಲಂ 189(2), 191(2), 191(3), 352, 115(2), 118(1), 351(2) ಜೊತೆಗೆ 190 ಬಿ.ಎನ್.ಎಸ್-2023ಯಂತೆ ಪ್ರಕರಣ ದಾಖಲಾಗಿದೆ.

Case registered against those who tied him to a tree and beat him violently in Belthangady!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page