ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಧಾರ್ಮಿಕಮಂಗಳೂರು

Koragajja: ತುಳುನಾಡಿನ ದೈವ ಕೊರಗಜ್ಜನ ಬಗ್ಗೆ ನಿಗೂಢ ಸತ್ಯಗಳನ್ನು ಕೇಳಿದ್ರೆ ಶಾಕ್‌ ಆಗ್ತೀರಾ!

Koragajja: ತುಳುನಾಡಿನ ಅತ್ಯಂತ ಕಾರ್ಣಿಕದ  ದೈವ ಅಂದ್ರೆ ಅದು ಸ್ವಾಮಿ ಕೊರಗಜ್ಜ. ಈ ದೇವರಲ್ಲಿ ಕೈಮುಗಿತು ಪ್ರಾರ್ಥನೆ ಮಾಡಿದ್ರೆ, ನಿಮ್ಮ ಜೀವನದಲ್ಲಿಖಂಡಿತಾ  ಬದಲಾವಣೆ ಸಾಧ್ಯ. ಅಷ್ಟಕ್ಕೂ ಸ್ವಾಮಿ ಕೊರಗಜ್ಜನ ಪವಾಡಗಳೇನು? ಯಾಕೆ ಕೊರಗಜ್ಜನನ್ನು ಆರಾಧನೆ ಮಾಡಲಾಗುತ್ತೆ? ಅನ್ನೋದನ್ನು ಈ ಸ್ಟೋರಿಯಲ್ಲಿ ಓದೋಣ…

ತುಳುನಾಡ ಅತ್ಯಂತ ಪವಿತ್ರವಾದ ಸ್ಥಳ ಅಂದ್ರೆ ಕೊರಗಜ್ಜನ ಸನ್ನಿಧಿ. ಮಂಗಳೂರು ಸೇರಿದಂತೆ ದಕ್ಷಿಣದ ಹಲವಾರು ಭಾಗಗಳಿಂದ ಕೊರಗಜ್ಜನ ದೇವಸ್ಥಾನಕ್ಕೆ ಜನ ಆಗಮಿಸುತ್ತಾರೆ. ಆತನ ಮಹಿಮೆ ಬಗ್ಗೆ ನಾವು ನೋಡುವುದಾದರೆ, ಕಳೆದು ಹೋದ ಯಾವುದಾದರೂ ವಸ್ತುಗಳನ್ನು ಮರಳಿ ಪಡೆಯಲು, ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು, ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮೊದಲು ಜನ ಕೊರಗಜ್ಜನನ್ನು ನೆನಪಿಸಿಕೊಳ್ಳುತ್ತಾರೆ.

ಕೊರಗಜ್ಜನಿಗೆ ದೈವ ಶಕ್ತಿ ಬಂದದ್ದು ಹೇಗೆ..?

ಕೊರಗಜ್ಜ ಎಂದರೆ ಕೊರಗ ತನಿಯ. ಇಲ್ಲಿ ಕೊರಗ ಎಂಬುದು ಸಮುದಾಯದ ಹೆಸರು. ಮತ್ತು ಅಜ್ಜ ಎಂಬುದು ತುಳು ಭಾಷೆಯಲ್ಲಿ ಸಾಮಾನ್ಯವಾಗಿ ಹಳೆಯ ಪುರುಷ ನಾಗರಿಕರಿಗೆ ಬಳಸುವಂತಹ ಪದವಾಗಿರುವುದರಿಂದ ಈ ಒಂದು ಪದವನ್ನು ಬಳಸಲಾಗುತ್ತದೆ. ತನ್ನ ಮದ್ಯ ವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡ ಹುಡುಗ ತನಿಯ. ಅವನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದ ಜನ ಈತನನ್ನು ಅಜ್ಜ ಎಂದು ಕರೆಯಲು ಪ್ರಾರಂಭ ಮಾಡುತ್ತಾರೆ.

ಕೊರಗಜ್ಜನಿಗೆ ಸಾಕು ತಾಯಿಯೇ ಆಧಾರವಾಗಿದ್ದಳು!

ಇನ್ನು ಕೊರಗ ತನಿಯನ ಬಗ್ಗೆ ಇರುವಂತಹ ನಂಬಿಕೆಗಳ ಬಗ್ಗೆ ನೋಡೋದಾದ್ರೆ, ಕೊರಗ ತನಿಯನು 30 ದಿನಗಳ ಶಿಶುವಿದ್ದಾಗ ತಾಯಿ ಮೈರೆಯನ್ನು ಕಳೆದುಕೊಳ್ಳುತ್ತಾನೆ, ಹಾಗೂ ತಂದೆಯನ್ನು ಕೂಡ ಕಳೆದುಕೊಳ್ಳುತ್ತಾನೆ, ಈ ಸಂದರ್ಭದಲ್ಲಿ ಆತನನ್ನು ನೋಡಿಕೊಳ್ಳೋಕೆ ಯಾರು ಕೂಡ ಜೊತೆಗೆ ಇರುವುದಿಲ್ಲ. ಕೊರಗ ಒಂಟಿಯಾದಾಗ ಮೈರಕ್ಕ ಎಂಬಾಕೆ ಆತನನ್ನು ದತ್ತು ಪಡೆದು ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಾಳೆ. ಕೊರಗತನಿಯನ ಆಗಮನದಿಂದ ಆ ಕುಟುಂಬದಲ್ಲಿ ಸಮೃದ್ಧಿ, ವ್ಯಾಪಾರ ಅಭಿವೃದ್ಧಿ ಹೊಂದುತ್ತದೆ. ಇನ್ನು ಕೊರಗನು ಮನೆಯವರ ಜೊತೆ ಸೇರಿಕೊಂಡು ಕೆಲಸಗಳನ್ನು ಮಾಡುತ್ತಾನೆ. ಬುಟ್ಟಿ ತಯಾರಿಕೆ ಹಾಗೂ ಬಿದಿರಿನ ವಸ್ತುಗಳನ್ನು ತಯಾರಿಸಲು ಈತ ಕಲಿಯುತ್ತಾನೆ.

ನಂತರ ಒಂದು ದಿನ ದೈವಗಳಿಗೆ ನೇಮವನ್ನು ಆಯೋಜಿಸಲಾಗುತ್ತೆ, ಈ ಸಂದರ್ಭದಲ್ಲಿ ಮೈರಕ್ಕನ ಕುಟುಂಬವು ದೇವಸ್ಥಾನಕ್ಕೆ ತೆಂಗಿನಕಾಯಿ, ಇತ್ಯಾದಿಗಳನ್ನ ನೀಡಬೇಕಾಗಿರುತ್ತೆ. ಈ ಎಲ್ಲಾ ವಸ್ತುಗಳನ್ನು ಸಾಗಿಸೋಕೆ ಏಳು ಮಂದಿ ಸಾಮರ್ಥ್ಯ ವುಳ್ಳಂತಹ ಪುರುಷರು ಬೇಕಾಗಿರುತ್ತಾರೆ. ಈ ಸಮಯದಲ್ಲಿ ಯಾರು ಕೂಡ ಇಲ್ಲದ ಕಾರಣ ಮೈರಕ್ಕ ಇದು ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ಕೆಲಸವದರಿಂದ ತನಿಯನಿಗೆ ದೇವಸ್ಥಾನಕ್ಕೆ ಸಾಗಿಸುವಂತೆ ಮನವಿಯನ್ನು ಮಾಡುತ್ತಾಳೆ, ಆಗ ತನಿಯ ನನಗೆ ಮಾತ್ರ ಆಹಾರವನ್ನು ನೀಡಬೇಕು, ಹಾಗಾದರೆ ನಾನು ಹೊರೆಯನ್ನು ಹೊರುತ್ತೇನೆ ಎಂದು ಷರತ್ತನ್ನು ಹಾಕುತ್ತಾನೆ. ನಂತರ ಸಾಮಗ್ರಿಗಳನ್ನು ಒಬ್ಬನೇ ದೇವಸ್ಥಾನಕ್ಕೆ ತಲುಪಿಸಲು ಪ್ರಯತ್ನವನ್ನು ಮಾಡುತ್ತಾನೆ.

ಇನ್ನು ಕೆಲ ಜಾತಿಯ ಕಾರಣದಿಂದಾಗಿ  ತನಿಯನನ್ನು ಮುಖ್ಯ ದೇವಾಲಯದ ಪ್ರದೇಶಕ್ಕೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಇದರಿಂದ ಕೋಪಗೊಂಡ ತನಿಯ ನಿಮ್ಮ ದೇವರಿಗೆ ನಾವು ನೀಡುವ ವಸ್ತುಗಳು ಬೇಕು, ಆದರೆ ನಾವು ಬೇಡ ಇದ್ಯಾವ ನ್ಯಾಯ ಅಂತ ಪ್ರಶ್ನೆಯನ್ನು ಮಾಡುತ್ತಾನೆ. ಆದರೆ ತನಿಯನ ಮಾತಿಗೆ ಯಾರು ಕೂಡ ಮಾತನಾಡದೆ ಸುಮ್ಮನಿರುತ್ತಾರೆ. ಎಲ್ಲರೂ ಕೂಡ ಅಲ್ಲಗೆಳೆಯುತ್ತಾರೆ. ನಂತರ ದೇವಸ್ಥಾನದ ಮೆಟ್ಟಿಲುಗಳ ಬಳಿ ನಿಂತ ತನಿಯನ ಕಣ್ಣು ಪಕ್ಕದಲ್ಲಿರುವಂತಹ ಉಪ್ಪಿನಕಾಯಿ ಮಾಡಲು ಬಳಸುವಂತಹ ಒಂದು ಹಣ್ಣಿನ ಮರದ ಮೇಲೆ ಬೀಳುತ್ತದೆ. ತನ್ನ ತಾಯಿ ಮೈರಕ್ಕ ಉಪ್ಪಿನಕಾಯಿ ಇಲ್ಲ ಅಂತ ಹೇಳಿದ ಮಾತನ್ನು ನೆನಪಿಸಿಕೊಂಡ ತನಿಯ ಆ ಹಣ್ಣುಗಳನ್ನು ಕೊಂಡೊಯ್ಯಲು ಮುಂದಾಗುತ್ತಾನೆ.‌

ಕೊರಗಜ್ಜನಿಗೆ ಮದ್ಯ, ಬೀಡಿ, ಚಕ್ಕುಲಿ ತಗೊಂಡು ಹೋಗೋದು ಯಾಕೆ..?

ಈ ಹಣ್ಣುಗಳು ಎಟಕದ ಕಾರಣ ಒಂದು ಕಾಲನ್ನು ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಡುತ್ತಾನೆ, ಆಗ ತನಿಯ ಮರೆತು ಕೊಂಬೆಗಳು ಎಟಕದ ಕಾರಣ,  ತನ್ನ ಮತ್ತೊಂದು ಕಾಲನ್ನು ದೇವಸ್ಥಾನದ ಕಲಶದ ಮೇಲೆ ಇಡುತ್ತಾನೆ, ಇದರಿಂದ ದೇವಾಲಯದ ಒಳಗೆ ಇದ್ದಂತಹ ದೈವ ಕೋಪದಿಂದ ಮಾಯವಾಗುತ್ತದೆ.  ಅಂದಿನಿಂದ ತನಿಯ ದೈವಿಕ ಶಕ್ತಿಯನ್ನು ಪಡೆಯುತ್ತಾನೆ ಎಂಬಂತ ಕಥೆ ಇದೆ. ದೇವಸ್ಥಾನದ ಮೆಟ್ಟಿಲುಗಳ ಮೇಲೆ ತನಿಯನು ಕಾಲಿಟ್ಟ ಕಾರಣ ಕೋಪಗೊಂಡ ಗ್ರಾಮಸ್ಥರು ತನಿಯನನ್ನು ಕೊಂದಿರಬಹುದು ಎಂದು ಹೇಳಲಾಗುತ್ತದೆ. ಆದರೆ ಇಂದಿಗೂ ಕೂಡ ಕೊರಗಜ್ಜ ಎಂದು ಕರೆಯಲ್ಪಡುವ ಕೊರಗತನಿಯ ಮರಣದ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಇನ್ನು ಕೊರಗಜ್ಜನಿಗೆ ಮದ್ಯ ನೈವೇದ್ಯ ತೆಗೆದುಕೊಂಡು ಹೋಗುವಂತಹ ರೂಢಿ ಇದೆ. ಯಾಕೆಂದರೆ ಕೊರಗಜ್ಜ ಬೆಳೆದಿದ್ದು ಕಳ್ಳು ವ್ಯಾಪಾರ ಮಾಡುವ ಕುಟುಂಬದಲ್ಲಿ, ಹೀಗಾಗಿ ಕೊರಗತನಿಯನಿಗೆ ಮದ್ಯ ಅಂದರೆ ಇಷ್ಟ. ಜೊತೆಗೆ ಎಲೆ ಅಡಿಕೆ, ಬಿಡಿ ಪ್ಯಾಕೆಟ್ ಅನ್ನು ಜೊತೆಗೆ ಚಕ್ಕುಲಿಯನ್ನು ಕೊರಗಜ್ಜನಿಗೆ ಅರ್ಪಿಸಲಾಗುತ್ತದೆ. ಇದು ಕೊರಗ ತನಿಯನ ಪುರಾತನ ಹಿನ್ನೆಲೆಯಾಗಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page