BBK12: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಮಲ್ಲಮ್ಮ ಹೊರನಡೆದಿದ್ದಾರೆ. ಸ್ಪರ್ಧಿಗಳೆಲ್ಲ ಸೇಫ್ ಆಗಿ ಕೊನೆಗೆ ಮಾಳು ಹಾಗೂ ಮಲ್ಲಮ್ಮ ಇಬ್ಬರೇ ಇದ್ದರು. ಈ ವೇಳೆ ಮಾಳು ಕಿಚ್ಚನಿಗೆ ಮನವಿ ಮಾಡಿರೋದು ಜನರ ಗೊಂದಲಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಟ ಮಲ್ಲಮ್ಮನಿಗೆ ಕಣ್ಣೀರಿನ ಬೀಳ್ಕೊಡುಗೆ ಕೊಟ್ಟ ಧ್ರುವ ರಕ್ಷಿತಾ..!
ಮಾಳು ಮುಗ್ಧತೆ ಬಗ್ಗೆ ಜನ ಏನಂತಾರೆ..?
ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಹಾಡುಗಳು ಭಾರೀ ಸದ್ದು ಮಾಡುತ್ತಿತ್ತು. ಅದರಲ್ಲೂ `ನಾ ಡ್ರೈವರ್’ ಹಾಡು ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲ ಕರ್ನಾಟಕದಾದ್ಯಂತ ಸಕತ್ ಹವಾ ಕ್ರಿಯೇಟ್ ಮಾಡಿತ್ತು. ತನ್ನ ಹಾಡಿನಿಂದ ಹೆಚ್ಚು ಜನಪ್ರಿಯರಾದ ಇವರ ಹಾಡು ಯೂಟ್ಯೂಬ್‌ನಲ್ಲಿ ಸುಮಾರು 250 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದವರು ಮತ್ತು ಉತ್ತರ ಕರ್ನಾಟಕದ ದೇಸಿ ಗಾಯಕರು ಎಂಬುದು ಅವರ ಜನಪ್ರಿಯತೆಗೆ ಕಾರಣವಾಗಿದೆ. ಈ ಹಾಡಿನ ರೂವಾರಿಯಾಗಿರುವ ಮಾಳು ನಿಪನಾಳ ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.
ಇದನ್ನೂ ಓದಿ: ಜಗಳ ಆದ್ರೆ ಆಗಲಿ ಬಿಡಿ..ಐ ಲವ್ ಯೂ..ಕಿಚ್ಚ ಕೊಟ್ಟ ಟಾಂಗ್ ನೋಡಿ!!
ಮಲ್ಲಮ್ಮ ಬೇಡ ನಾನೇ ಹೋಗ್ತೀನಿ …ಮಾಳು!
ಮಲ್ಲಮ್ಮ ಈ ವಾರ ಮನೆಯಿಂದ ಆಚೆ ಹೋಗುವಾಗ ಮಾಳು ಎದ್ದು ನಿಂತು ಕಿಚ್ಚ ಸುದೀಪ್ ಅವರ ಜೊತೆ ಒಂದು ಮನವಿ ಮಾಡಿಕೊಂಡಿದ್ದಾರೆ. ಮಲ್ಲಮ್ಮ ಎಲಿಮಿನೇಟ್ ಎಂಬುದು ಗೊತ್ತಾಯಿತೋ, ಈ ವೇಳೆ ಮಾಳು ಎದ್ದು ನಿಂತು. ಇದು ಎಷ್ಟು ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ. ನನ್ನ ಬದಲು ಮಲ್ಲಮ್ಮನೇ ಈ ಮನೆಯಲ್ಲಿ ಇರಬೇಕು ಎಂದಿದ್ದಾರೆ. ಅದಕ್ಕೆ ಸುದೀಪ್, ನಿಮ್ಮ ಮಾತಿಗೆ, ನಿಮ್ಮ ಮುಗ್ಧತೆಗೆ, ನಿಮ್ಮ ಒಳ್ಳೆಯತನದ ಬಗ್ಗೆ ನಮಗೆ ಗೌರವ ಇದೆ. ಆದರೆ ನಾವು ಗೌರವ ಕೊಡಬೇಕಿರುವುದು ಹೊರಗೆ ವೋಟ್ ಹಾಕಿರುವ ಜನರಿಗೆ. ನಾಮಿನೇಷನ್ ಮಾಡುವುದು ನೀವಾಗಿರುವುದು, ತೀರ್ಮಾನ ಮಾಡುವುದು ಜನರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಡೆಲ್ ಸೂರಜ್ ರಾಶಿಕಾ ಲವ್ ಸ್ಟೋರಿ ಬ್ರೇಕಪ್ ಆಯ್ತಾ..?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











