ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

Nirmala Sitharaman: ತುಳು ಭಾಷೆಯ ಸಾಂಸ್ಕೃತಿಕ ವೈಭವ ಹೊಗಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ !

Nirmala Sitharaman: ಉಡುಪಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತುಳುಭಾಷೆ ಹಾಗೂ ಕನ್ನಡ ಭಾಷೆಯ ಸಾಂಸ್ಕೃತಿಕ ವೈಭವವನ್ನು ಶ್ಲಾಘಿಸಿ, ಹೊಗಳಿ ಮಾತನಾಡಿದ್ದಾರೆ. ದಕ್ಷಿಣ ಭಾರತದ ಭಾಷೆಗಳ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ವೈಭವವನ್ನು ಶ್ಲಾಘಿಸಿ, ವಿಶೇಷವಾಗಿ ಕನ್ನಡ ಮತ್ತು ತುಳು ಭಾಷೆಗಳ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಗಳಿದ್ದಾರೆ.

ಇದನ್ನೂ ಓದಿ: ದಾಖಲೆಯ ಮೊತ್ತದ ಬಹುಮಾನದೊಂದಿಗೆ ಇತಿಹಾಸ ಸೃಷ್ಟಿಸಿದ ಮಹಿಳಾ ಏಕದಿನ ವಿಶ್ವಕಪ್‌- 2025

ತುಳು ಭಾಷೆಯನ್ನು ನಾನು ಇಷ್ಟಪಡುತ್ತೇನೆ..!

ಈ ಕುರಿತು ಸ್ಥಳೀಯ ಮಾಧ್ಯಮದವರ ಜೊತೆ ಜತೆ ಮಾತನಾಡಿದ ಅವರು, ತುಳು ಭಾಷೆಯನ್ನು ನಾನು ಇಷ್ಟಪಡುತ್ತೇನೆ. ತುಳು ತನ್ನ ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಿಕೊಂಡು ಸಾಗುತ್ತಿದೆ, ಕನ್ನಡ ಭಾಷೆಯ ಶಕ್ತಿ ಅದ್ಭುತ. ದಾಸ ಸಾಹಿತ್ಯ ಮತ್ತು ಸಂಕೀರ್ತನೆಗಳು ಕನ್ನಡದ ಆಳವಾದ ಆಧ್ಯಾತ್ಮಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ತಿನಿಸು ಮಾಡಿ ತಿಂದರೆ ಯಾವುದೇ ಆರೋಗ್ಯ ಸಮಸ್ಯೆಗಳಿರುವುದಿಲ್ಲ…!

ಜೊತೆಗೆ ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಾಂಸ್ಕೃತಿಕ ಮೌಲ್ಯವನ್ನು ಉಲ್ಲೇಖಿಸಿ, ದಕ್ಷಿಣ ಭಾರತೀಯ ಭಾಷೆಗಳು ಕೇವಲ ಸಂವಹನದ ಮಾಧ್ಯಮಗಳಲ್ಲ; ಇವುಗಳು ಜನಾಂಗದ ಇತಿಹಾಸ, ಕಲೆ ಮತ್ತು ಭಾವನೆಗಳ ಪ್ರತಿಬಿಂಬ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಪ್ರವಾಸದಲ್ಲಿರುವ ಸಚಿವೆ ಕೆಲವು ದಿನಗಳ ಹಿಂದೆ ಐತಿಹಾಸಿಕ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದು, ಆನೆ ಲಕ್ಷ್ಮೀಯಿಂದ ಹೂವಿನ ಹಾರ ಹಾಕಿಸಿಕೊಂಡಿದ್ದರು. ಇದೀಗ ಕರಾವಳಿಗೆ ಭೇಟಿ ನೀಡಿದ್ದಾರೆ.

ಜಾಹೀರಾತು ಲಿಂಕ್‌ ಒತ್ತಿ ಹಣ ಕಳೆದುಕೊಂಡ ವ್ಯಕ್ತಿ..!

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಮಾತನಾಡುವಂತಹ ಜಾಹಿರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ ಹಿರಿಯ ನಾಗರಿಕರೊಬ್ಬರು 13.91 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 63 ವರ್ಷದ ದೂರುದಾರರು ಆ.28ರಂದು ಮೊಬೈಲ್ ವೀಕ್ಷಿಸುತ್ತಿರುವಾಗ ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಮಾತನಾಡುತ್ತಿರುವ ವೀಡಿಯೋ ಕಂಡು ಬಂದಿದೆ. ಆ ಲಿಂಕ್ ಕ್ಲಿಕ್ ಮಾಡಿದಾಗ ಬೇರೆ ಪೇಜ್ ತೆರೆದುಕೊಂಡಿದ್ದು,‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಮೆಸೆಜ್ ಬಂದಿದೆ.  ಇತ್ತೀಚೆಗೆ ಇಂತಹ ಹಲವಾರು ಪ್ರಕರಣಗಳು ದಾಖಲಾಗುತ್ತಿವೆ. ಆನ್‌ ಲೈನ್‌ ವಂಚಕರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಗೊತ್ತಿದ್ದರೂ ಜನ ಯಾಮಾರುತ್ತಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:‌ https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 173

You cannot copy content of this page