India Women’s Vs South Africa Women’s World Cup 2025 : ಐಸಿಸಿ ಮಹಿಳಾ ವಿಶ್ವಕಪ್ 2025 ಸೆಪ್ಟೆಂಬರ್ 30 ರಿಂದ ನವೆಂಬರ್ ನವೆಂಬರ್ 2, 2025 ರ ತನಕ ಮುಂದುವರಿದರೆ, ಫೈನಲ್ ಪಂದ್ಯ ನಿನ್ನೆ (ನವೆಂಬರ್ 2) ಮುಂಬೈನ ಡಾ.ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಿತು. ಫೈನಲ್ ಪಂದ್ಯದಲಿ ದಕ್ಷಿಣಾ ಆಫ್ರಿಕಾ ತಂಡವನ್ನು 52 ರನ್ ಗಳ ಅಂತರದಲ್ಲಿ ಮಣಿಸಿದ ಭಾರತದ ಮಹಿಳಾ ತಂಡ ಉಲ್ಲೇಖನೀಯ ದಾಖಲೆಯನ್ನು ಮಾಡಿರುತ್ತಾರೆ.
52 ರನ್ ಗಳ ಅಂತರದಲ್ಲಿ ಭರ್ಜರಿ ಗೆಲುವು ;
ಭಾರತದ ಮಹಿಳಾ ತಂಡದ ಮೇಲೆ ಅಭಿಮಾನಿಗಳ ನಿರೀಕ್ಷೆಗಳು ಹೆಚ್ಚಾಗಿದ್ದು, ಕೊನೆಗೂ ವಿಶ್ವಕಪ್ ಕೈಗೆತ್ತಿಕೊಳ್ಳವಲ್ಲಿ ಜಯಶಾಲಿಯಗಿರುತ್ತಾರೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 299 ರನ್ ನ ಗುರಿಯನ್ನು ದಕ್ಷಿಣಾ ಆಫ್ರಿಕಾ ತಂಡಕ್ಕೆ ನೀಡಿದ್ದು, ಅವರು 45.3 ಓವರ್ ನಲ್ಲಿ 246 ರನ್ ಗಳಿಗೆ ವಿಕೇಟ್ ಕಳೆದುಕೊಂಡು ಭಾರತ ತಂಡವು 52 ರನ್ ಗಳ ಅಂತರದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿತು.
39 ರೂ.ಕೋಟಿ ಬಹುಮಾನ ಗೆದ್ದ ಮಹತ್ವದ ಕ್ಷಣ ;
ಬಲಾಢ್ಯ ದಕ್ಷಿಣ ಆಫ್ರಿಕಾದ ತಂಡವನ್ನು ಮಣಿಸೋದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಇಬ್ಬರು ಮಹಿಳಾ ಆಟಗಾರ್ತಿಯರ ಹೆಚ್ಚಿನ ಪ್ರಯತ್ನದಿಂದ ಆಟ ಹೋಗುತ್ತಾ ಹೋಗುತ್ತಾ ಗೆಲುವಿನ ದಾಖಲೆ ಬರೆಯುವಲ್ಲಿ ಯಶಸ್ವಿ ಕಂಡಿತು. ಶೆಫಾಲಿ ವರ್ಮಾ ಮತ್ತೆ ದೀಪ್ತಿ ಶರ್ಮಾ ಆಲ್ ರೌಂಡ್ ಆಟಕ್ಕೆ ದಕ್ಷಿಣ ಆಫ್ರಿಕಾ ತಲೆಬಾಗಲೇ ಬೇಕಾಯಿತು. ಜೊತೆಗೆ, ಭಾರತಕ್ಕೆ ಗೆಲುವಿನೊಂದಿಗೆ 39.78 ಕೋಟಿ ರೂ. ಅತೀ ದೊಡ್ಡ ದಾಖಲೆಯ ಮೊತ್ತವನ್ನು ಬಹುಮಾನವಾಗಿಯೂ ಭಾರತ ತಂಡ ಸ್ವೀಕರಿಸಿ ಜಯಭೇರಿಯಾಗಿರುತ್ತಾರೆ. ಇದು ಮಹಿಳಾ ತಂಡದ ಅತ್ಯುತ್ತಮ ಹಾಗೂ ಮಹತ್ವದ ಕ್ಷಣವೆಂದು ಪರಿಗಣಿಸಲಾಗಿರುತ್ತದೆ.
ಇದನ್ನೂ ಓದಿ : Bengaluru: ಇಂದು ಕೆ-ಸೆಟ್ ಪರೀಕ್ಷೆಗೆ ಶೇ. 90ರಷ್ಟು ಮಂದಿ ಹಾಜರು..!
….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=RrnkngGPVY8WN0Cb











