Bengaluru: ಇಂದು ರಾಜ್ಯದ 11 ಜಿಲ್ಲೆಗಳಲ್ಲಿ ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆ-ಸೆಟ್-25 ನಡೆಯಿತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸುಮಾರು 4,000 ಕೆ.ಜಿ ತೂಕ ಮೀರಿದ ಬಾಹುಬಲಿ ಖ್ಯಾತಿಯ ಉಪಗ್ರಹದ ಉಡಾವಣೆ
ಎಲ್ಲೆಲ್ಲಿ ಪರೀಕ್ಷೆ ನಡೆದಿದೆ..?
ಪರೀಕ್ಷಾ ಅಕ್ರಮ ತಡೆಯಲು ಬಿಗಿ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಒಟ್ಟು 34 ವಿಷಯಗಳಿಗೆ ನಡೆದ ಕೆ-ಸೆಟ್ ಪರೀಕ್ಷೆಗೆ 1.34 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಇವರ ಪೈಕಿ 1.21 ಲಕ್ಷ ಮಂದಿ ಹಾಜರಾಗಿದ್ದಾರೆ. ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಜಿಲ್ಲೆಗಳ 316 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: ಕಾಮಾಕ್ಯ ದೇವಿಯ ಮೊರೆ ಹೋದ ದರ್ಶನ್ ಪತ್ನಿ ವಿಜಯಲಕ್ಷ್ಮಿ! ನಾಳೆ ಏನಾಗುತ್ತೆ?
ತೀವ್ರ ತಪಾಸಣೆಯ ನಂತ್ರ ಪರೀಕ್ಷೆಗೆ ಎಂಟ್ರಿ..!
ಪರೀಕ್ಷಾ ಕೇಂದ್ರಗಳಿಂದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ಕೆಇಎ ಕಚೇರಿಗೆ ಬಂದ ತಕ್ಷಣವೇ ಅವುಗಳನ್ನು ಸ್ಕ್ಯಾನ್ ಮಾಡಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು. ಎಲ್ಲ ವಿಷಯಗಳ ಕೀ ಉತ್ತರಗಳನ್ನು ಈ ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಬಳ್ಳಾರಿಯಲ್ಲಿ ವಿದ್ಯಾರ್ಥಿಗಳು ಕೆ-ಸೆಟ್ ಪರೀಕ್ಷೆ ಬರೆಯಲು ಬಂದಾಗ ಮೂಗುತಿ, ಕಿವಿಯೋಲೆ ಧರಿಸಿ ಬಂದವರಿಗೆ ಸಿಬ್ಬಂದಿ ಶಾಕ್ ಕೊಟ್ಟ ಪ್ರಸಂಗ ನಡೆದಿತ್ತು.
ಇದನ್ನೂ ಓದಿ: ಕೊಡವರು ಅಂದ್ರೆ ಹಾಕಿ: ಹಾಕಿ ಅಂದ್ರೆ ಕೊಡವರು: ಸಿ.ಎಂ ವರ್ಣನೆ
ಸಿಸಿ ಕ್ಯಾಮರಾ ಕಣ್ಗಾವಲಿ ಕೆ-ಸೆಟ್ ಪರೀಕ್ಷೆ!
ಹೀಗಾಗಿ, ಕೈ ಕಡಗ ಹಾಗೂ ಯುವತಿಯರ ಮೂಗುತಿ, ಕಿವಿಯೋಲೆಯನ್ನು ಸಿಬ್ಬಂದಿ ತೆಗೆಸಿದ್ದಾರೆ. ದೇವರ ದಾರವನ್ನೂ ಸಹ ಬಿಚ್ಚಿಸಿ ಪರೀಕ್ಷಾ ಕೊಠಡಿಯ ಒಳಗೆ ಕಳುಹಿಸಿದ್ದಾರೆ. ಅಸಮಾಧಾನದ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಬಾರಿ ಮುಖಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ. ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆದಿದೆ. 33 ವಿಷಯಗಳಿಗೆ ನಡೆಯುವ ಕೆ-ಸೆಟ್ ಪರೀಕ್ಷೆಯನ್ನು 1.36 ಲಕ್ಷ ಮಂದಿ ತೆಗೆದುಕೊಂಡಿರುವುದು ವರದಿಯಾಗಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











