Bengaluru: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಪತ್ನಿ ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡೋದು ಮೊದಲೇನಲ್ಲ. ಇದೀಗ ಕಾಮಾಕ್ಯ ದೇವಿಯ ಮೊರೆ ಹೋಗಿ ದೇವಿಯ ಪ್ರಾರ್ಥನೆಯಲ್ಲಿ ಮುಳುಗಿದ್ದಾರೆ.
ಹೌದು, ಈ ಹಿಂದೆಯೂ ದರ್ಶನ್ ಹಾಗೂ ಗ್ಯಾಂಗ್ ಜೈಲು ಸೇರಿದ ಬಳಿಕ ಹಲವಾರು ದೇವಸ್ಥಾನಗಳಿಗೆ ತೆರಳಿ ತನ್ನ ಗಂಡನಿಗಾಗಿ ವಿಶೇಷ ಪೂಜೆಗಳನ್ನು ಮಾಡಿ ಹರಕೆಗಳನ್ನು ಕಟ್ಟಿಕೊಂಡು ದೇಗುಲ ದರ್ಶನ ಮಾಡಿದ ವಿಜಯಲಕ್ಷ್ಮಿ ತನ್ನ ಕುಟುಂಬಕ್ಕಾಗಿ ಬಿಡದ ದೇವಸ್ಥಾನವಿಲ್ಲ. ಅಷ್ಟೊಂದು ದೇವರ ಮೇಲಿನ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.
ಇದೀಗ, ಬೆಂಗಳೂರಿನ ಸಿಸಿಹೆಚ್ ನ್ಯಾಯಾಲಯಕ್ಕೆ ಡಿಗ್ಯಾಂಗ್ ಹಾಜರಾಗಲಿದೆ.
ಇದನ್ನೂ ಓದಿ: ಜಗಳ ಆದ್ರೆ ಆಗಲಿ ಬಿಡಿ..ಐ ಲವ್ ಯೂ..ಕಿಚ್ಚ ಕೊಟ್ಟ ಟಾಂಗ್ ನೋಡಿ!!
ಕಾಮಾಕ್ಯ ದೇವಿ ವಿಜಯಲಕ್ಷ್ಮಿ ಕೈ ಹಿಡಿಯುತ್ತಾಳಾ..?
ಆರೋಪ ನಿಗದಿಯ ಬಳಿಕ ಬಳಿಕ ಟ್ರಯಲ್‌ಗೂ ದಿನಾಂಕ ಫಿಕ್ಸ್ ಆಗಲಿದೆ. ಹೀಗಾಗಿ ನಾಳೆ ದರ್ಶನ್ ಗೆ ಮಹತ್ವದ ದಿನವಾಗಲಿದೆ. ಹೀಗಾಗಿ, ದರ್ಶನ್ ಪತ್ನಿ ವಿಜಯಲಕ್ಷ್ಮಿಇನ್‌ಸ್ಟಾದಲ್ಲಿ ಮಹತ್ವದ ಸಂದೇಶವನ್ನು ಪೋಸ್ಟ್ ಮಾಡಿ, ಅಸ್ಸಾಂನಲ್ಲಿರುವ ಕಾಮಾಕ್ಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ತನ್ನ ಇನ್‌ಸ್ಟಾದಲ್ಲಿ, ದೇವಿಗೆ ಪ್ರಿಯ ಕಮಲದ ಹೂ ಹಿಡಿದ ಫೋಟೋ ಪೋಸ್ಟ್ ಮಾಡಿ, ನಮಗೆ ಕಾಣದೇ ಇರುವುದು ಬಹಳಷ್ಟಿದೆ, ಆದ್ದರಿಂದ ಯಾವಾಗಲೂ ರಕ್ಷಣೆಗಾಗಿ ಪ್ರಾರ್ಥಿಸಿ ಎಂಬ ಸಂದೇಶ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ದರ್ಶನ್ ಪ್ರಕರಣದಲ್ಲಿ ಮಹತ್ವದ ಘಟ್ಟ ತಲುಪಿರುವ ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಕಾಮಾಕ್ಯ ದೇವಿಯ ಮೊರೆ ಹೋಗಿದ್ದಾರೆ.
ಜೈಲು ಹಕ್ಕಿಗಳ ಪರಿಸ್ಥಿತಿ ಹೇಗಿದೆ..?
ಇನ್ನು ಕಳೆದ ಕೆಲವು ದಿನಗಳ ಹಿಂದೆ ದರ್ಶನ್ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಹಣೆಗೆ ಕುಂಕುಮ ಇಟ್ಟುಕೊಂಡಿದ್ದರು, ಹೀಗಾಗಿ ದರ್ಶನ್ ಸಂಕಷ್ಟದಿಂದ ಮೊರೆ ಹೋಗಲು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರಾ ಎಂದು ಪ್ರಶ್ನೆ ಮೂಡಿತ್ತು. ಹಾಗೆಯೇ ಪವಿತ್ರಾ ಗೌಡ ಕೂಡ ಹಾಜರಿದ್ದು, ಪವಿತ್ರಾ ಮುಖದಲ್ಲಿ ಟೆಂನ್ಶನ್ ಎದ್ದು ಕಾಣುತ್ತಿತ್ತು. ಕೆಲವು ತಿಂಗಳಿನಿಂದ ಜೈಲು ಸೇರಿರುವ ಇಬ್ಬರು ಜೋಡಿಗಳು ತಮ್ಮ ಬಿಡುಗಡೆಯ ದಿನ ನೋಡುತ್ತಾ ಇದ್ದಾರೆ. ಆದರೆ ತಪ್ಪಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











