Alike: ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಕಬ್ಬಿಣದ ದೋಟಿ ಗೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವರು ಸಾವೀಗೀಡಾದ ಘಟನೆ ವಿಟ್ಲದ ಅಳಿಕೆಯಲ್ಲಿ ನಡೆದಿದೆ. ಇಸ್ಮಾಯಿಲ್ (37) ಘಟನೆಯಲ್ಲಿ ಮೃತಪಟ್ಟವರು.
ಅಳಿಕೆ ಯ ಇಬ್ರಾಹಿಂ ಉಸ್ತಾದ್ ಅವರ ಮಗನಾದ ಇಸ್ಮಾಯಿಲ್ ಎಂಬವರು ಕಬ್ಬಿಣದ ದೋಟಿಯಲ್ಲಿ ತೆಂಗಿನಕಾಯಿ ಕೀಳುತ್ತಿದ್ದರು. ಈ ಸಂದರ್ಭ ಇಸ್ಮಾಯಿಲ್ ಅವರ ಕೈಯಲ್ಲಿದ್ದ ದೋಟಿಯು ಅಚಾನಕ್ಕಾಗಿ ವಿದ್ಯುತ್ ತಂತಿಗೆ ತಾಗಿದೆ. ಈ ವೇಳೆ ದೋಟಿಯಲ್ಲಿ ವಿದ್ಯುತ್ ಪ್ರವಹಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಿದರೂ ಫಲಕಾರಿಯಾಗಲಿಲ್ಲ. ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದ್ದಿದರು. ಮೃತ ವ್ಯಕ್ತಿಯು ಪತ್ನಿ, ಮಗ, ಮಗಳು,ಬಂಧು ಮಿತ್ರರನ್ನು ಅಗಲಿದ್ದಾರೆ.
ಇದನ್ನೂ ಓದಿ: Kadaba : ಮೀನು ಮಾರೋ ವಿಚಾರದಲ್ಲಿ ವ್ಯಾಪಾರಿಗಳ ನಡುವೆ ಹೊಡೆದಾಟ…!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=WPztUDdm0DT7ADa0











