ಬ್ರೇಕಿಂಗ್ ನ್ಯೂಸ್
ಕಡಬ

Kadaba : ಮೀನು ಮಾರೋ ವಿಚಾರದಲ್ಲಿ ವ್ಯಾಪಾರಿಗಳ ನಡುವೆ ಹೊಡೆದಾಟ…!

ಕಡಬ : ದಕ್ಷಿಣ ಕನ್ನಡ‌ಜಿಲ್ಲೆಯ ಕಡಬದಲ್ಲಿ ಸಂತೆಕಟ್ಟೆ ಮೀನು ಮಾರುಕಟ್ಟೆಯ ಬಳಿ ಮಾತಿನ ಪೈಪೋಟಿಯ ಜೊತೆ ಹೊಡೆದಾಟ ನಡೆದಿದ್ದು, ವ್ಯಾಪಾರಿಗಳು ಹೊಡೆದಾಡಿಕೊಂಡ ವೀಡಿಯೋಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.

ಕ್ಷುಲ್ಲಕ್ಕ ಕಾರಣಕ್ಕಾಗಿ ಶುರುವಾದ ಗಲಾಟೆ ;
ಮೀನು ಮಾರಾಟದ ವಿಚಾರದಲ್ಲಿ ಮೊದಲಿಗೆ ಮಾತಿನ ಚಕಮಕಿಯಿಂದ ಶುರುವಾದ ಗಲಾಟೆ ಹೊಡೆದಾಟಕ್ಕೆ ತಿರುಗಿತ್ತು. ಇದರಲ್ಲಿ ರಾಜು, ಮ್ಯಾಥ್ಯೂ ಹಾಗೂ ಆದಂ ಎಂಬವರ ನಡುವೆ ಗಲಾಟೆ ಪ್ರಾರಂಭವಾಗಿದ್ದು, ನಂತರ ಫಯಾಜ್, ರಕ್ಷಿತ್ ಮಾಣಿ ಹಾಗೂ ನೌಫಾಲ್ ಎಂಬುವರ ನಡುವೆ ಪರಸ್ಪರ ಕಿತ್ತಾಟ ನಡೆದಿದೆ ಎಂದು ವರದಿಯಾಗಿದೆ.

ಕ್ಷುಲ್ಲಕ್ಕ ಕಾರಣಕ್ಕಾಗಿ ಕಿತ್ತಾಟ ಆರಂಭವಾಗಿ ನಂತರ ಪೋಲಿಸ್ ಅಧಿಕಾರಿಗಳು ಕೇಸ್ ದಾಖಲು ಮಾಡುವಷ್ಟು ಜೋರಾಗಿ ನಡೆದಿತ್ತೆನ್ನಲಾಗಿದೆ. ಇವರ ಈ ಹೊಡೆದಾಟದಿಂದ ವ್ಯಾಪಾರಕ್ಕೆ ಬಂದ ಜನರ ಸಮಯವೂ ವ್ಯರ್ಥ. ಸುಮಾರು 10 ರಿಂದ 20 ನಿಮಿಷಗಳ ಕಾಲ ಇಲ್ಲಿ ವ್ಯಾಪಾರಕ್ಕೆ ಅಡ್ಡಿಯಾಯಿತೆನ್ನಲಾಗಿದೆ.

ಇದನ್ನೂ ಓದಿ : Satellite Launch : ಸುಮಾರು 4,000 ಕೆ.ಜಿ ತೂಕ ಮೀರಿದ ಬಾಹುಬಲಿ ಖ್ಯಾತಿಯ ಉಪಗ್ರಹದ ಉಡಾವಣೆ

…..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=WPztUDdm0DT7ADa0

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 4

You cannot copy content of this page