Bigboss season 12: ಬಿಗ್ ಬಾಸ್ ಸೀಸನ್ 12 ರಲ್ಲಿ ರಾಶಿಕಾ ಹಾಗೂ ಸೂರಜ್ ಮಧ್ಯೆ ಲವ್ ಇರೋದು ಎಲ್ಲರಿಗೂ ಗೊತ್ತು. ಇದೀಗ ಇಂದಿನ ಪ್ರೋಮೋದಲ್ಲಿ ಸುದೀಪ್ ರಾಶಿಕಾ ಹಾಗೂ ಸೂರಜ್ ಗೆ ಟಾಂಗ್ ಕೊಟ್ಟು ಮಾತನಾಡಿದ್ದಾರೆ.
ಇದನ್ನೂ ಓದಿ: ಮಾಡೆಲ್ ಸೂರಜ್ ರಾಶಿಕಾ ಲವ್ ಸ್ಟೋರಿ ಬ್ರೇಕಪ್ ಆಯ್ತಾ..?
ಹೌದು, ಇಬ್ಬರು ಮನೆಯಲ್ಲಿ ಒಟ್ಟಿಗೆ ಹೆಚ್ಚಾಗಿ ಸಮಯ ಕಳೆಯುತ್ತಾರೆ. ಹೀಗಾಗಿ ಯಾರೇ ಜಗಳ ಆಡಿದರೂ ಈ ಇಬ್ಬರು ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ತಮ್ಮ ಪಾಡಿಗೆ ತಾವು ಇರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗೆಯೇ ಸುದೀಪ್ ಕೂಡ ಇಬ್ಬರ ಕಾಳೆಲೆದಿದ್ದಾರೆ. ಜಗಳ ಆಡಿದ್ರೆ ಆಡ್ತಾ ಇರಲಿ. ನಮ್ಮ ಕೆಲಸ ನಾವು ಮಾಡೋಣ ಅಲ್ವ ಅಂತ ಸುದೀಪ್ ಇಬ್ಬರಿಗೆ ವೇದಿಕೆ ಮೇಲೆ ಹೇಳುತ್ತಾರೆ.
ಇದನ್ನೂ ಓದಿ: ರಕ್ಷಿತಾ ಶೆಟ್ಟಿ ಫೇಕ್ ಎಂದವ್ರಿಗೆ ಕಿಚ್ಚ ಸುದೀಪ್ ಕ್ಲಾಸ್..!
ಸೂರಜ್ ರಾಶಿಕಾ ತಮ್ಮದೇ ಲೋಕದಲ್ಲಿ ಇರುತ್ತಾರಾ..?
ನೀವಿಬ್ಬರು ನಿಮ್ಮ ಪಾಡಿಗೆ ಇರ್ತೀರಿ ಅಂತ ಹೇಳಿದ್ದಾರೆ. ಈ ಗ್ಯಾಪಲ್ಲಿ ಸೂರಜ್ ರಾಶಿಕಾಗೆ ಐ ಲವ್ ಯೂ ಅಂತ ಹೇಳಿರೋದನ್ನೂ ಕೂಡ ಸುದೀಪ್ ಎಲ್ಲರ ಎದುರು ಹೇಳುತ್ತಾರೆ, ಈ ಸಂದರ್ಭದಲ್ಲಿ ಸೂರಜ್ ಇಲ್ಲ ಹಾಗೇನಿಲ್ಲ ಸರ್ ಅಂತ ಹೇಳುತ್ತಾರೆ, ಅದಕ್ಕೆ ಸುದೀಪ್ ವಿಟಿ ಹಾಕಲೇ ಹಾಗಾದರೆ ಅಂದಾಗ ಇಲ್ಲ ಸರ್ ಬೇಡ ಅಂತ ಸೂರಜ್ ನಗಾಡಿಕೊಂಡು ಹೇಳುತ್ತಾರೆ. ಇನ್ನು ರಾಶಿಕಾ ಜೊತೆಯೂ ಅದೇ ಪ್ರಶ್ನೆ ಕೇಳಿದ ಕಿಚ್ಚ, ಮಾತಿಗೆ ಎಲ್ಲರೂ ನಗುತ್ತಾರೆ. ಇಬ್ಬರೂ ಕೂಡ ತಮ್ಮದೇ ಆದ ಲೋಕದಲ್ಲಿ ಇರುವುದು ಇಡೀ ದೊಡ್ಮನೆಗೆ ಗೊತ್ತು. ಇಬ್ಬರು ಮುಂಚೆಯೇ ಪರಿಚಯ ಇರೋರ ತರಹ ಹೊಂದಾಣಿಕೆಯಿಂದ ಇರೋದು ಜನರಿಗೂ ನಗು ತರಿಸುತ್ತಿರೋದಂತು ಸತ್ಯ. ಈ ಇಬ್ಬರು ಮನೆಯೊಳಗಡೆ ಮಾತ್ರ ಈ ರೀತಿ ಪ್ರೀತಿಯ ನಾಟಕವಾಡ್ತಿದ್ದಾರೋ ಅಥವಾ ನಿಜವಾಗಿಯೂ ಲವ್ ಮಾಡುತ್ತಿದ್ದಾರೋ ಅನ್ನೋದು ವೀಕ್ಷಕರಿಗೆ ಇನ್ನೂ ಕೂಡ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಆದರೆ ಬಿಗ್ ಬಾಸ್ ಮನೇಲಿ ಲವ್ ಕಹಾನಿಗಳು ಇದು ಮೊದಲೇನಲ್ಲ. ಈ ಹಿಂದೆಯಿಂದಲೂ ಇಂತಹ ಸ್ಟೋರಿಗಳು ಬಹಳ ಚಿಗುರಿವೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











