Satellite Launch : ಉಪಗ್ರಹಗಳನ್ನು ಹವಾಮಾನ ವರದಿ, ಭೂ ಪರಿಕರ, ಸಂವಹನ, ಸೈನಿಕ ನಿಗಾವಳಿ, ವಿಜ್ಞಾನ ಸಂಶೋಧನೆ ಇತ್ಯಾದಿ ಕಾರಣಗಳಿಗಾಗಿ ಬಳಸಲಾಗುತ್ತದೆ. ಉಪಗ್ರಹಗಳನ್ನು ಸಾಮಾನ್ಯವಾಗಿ ರಾಕೆಟ್ ಗಳ ಸಹಾಯದಿಂದ ಮಾಡಲಾಗುತ್ತದೆ.
ಉಪಗ್ರಹ ಉಡಾವಣೆಯ ಹಂತಗಳು ಯಾವುದೆಂದರೆ ; ಉಪಗ್ರಹ ಉಡಾವಣೆಯ ತಾಂತ್ರಿಕ ಪರೀಕ್ಷೆಗಳು, ರಾಕೆಟ್ ಗೆ ಲೋಡ್ ಮಾಡುವುದು, ಖಚಿತ ಗಗನ ಮಾರ್ಗದಲ್ಲಿ ಸಾಗಿಸುವುದು, ರಾಕೆಟ್ನಿಂದ ಬೇರ್ಪಡಿಸಿ, ಉಪಗ್ರಹವನ್ನು ಅದರ ಗುರಿ ಕಕ್ಷೆಯಲ್ಲಿ ಸ್ಥಾಪಿಸುವುದು ಹಾಗೂ ಭೂಮಿ ನಿಲ್ದಾಣಗಳಿಂದ ಉಪಗ್ರಹದ ಸ್ಥಿತಿ ಮತ್ತು ಕಾರ್ಯನಿರ್ವಹಣೆ ಹೇಗಿದೆ ಎಂದು ನಿರಂತರವಾಗಿ ತಪಾಸಣೆ ಮಾಡುವುದು.
ಇದು ಅತೀ ಭಾರವಾದ ಉಪಗ್ರಹ ;
ಬಾಹುಬಲಿ ಖ್ಯಾತಿಯ ಸುಮಾರು 4,420 ಕೆ.ಜಿ ತೂಕದ ಸಿ.ಎಂ.ಎಸ್ 03 ಸಂವಹನ ಉಪಗ್ರಹವಾಗಿದ್ದು, ಇಸ್ರೋದ ಅತ್ಯಂತ ಶಕ್ತಿಶಾಲಿ ಹಾಗೂ ವಿಶ್ವಾಸಾರ್ಹ ಹಾಗೂ ಮಿಲಿಟರಿ ಸಂವಹನ ಉಪಗ್ರಹವಾಗಿ ಇದನ್ನು ಜಿಸ್ಯಾಟ್ – 7 ಆರ್ ಎಂದೂ ಕರೆಯಲಾಗುತ್ತದೆ. ಜೊತೆಗೆ, ಈ ಉಪಗ್ರಹವನ್ನು ಇಸ್ರೋದ ಬಾಹುಬಲಿ ರಾಕೆಟ್ ಎಂದೇ ಕರೆಯಲಾಗಿದೆ. ಅಂದರೆ, ಹೆಚ್ಚು ಶಕ್ತಿಶಾಲಿಯಾಗಿರುವ ಉಪಗ್ರಹವಾಗಿ ಇದು ಹೊರಹೊಮ್ಮಲಿದೆ.
ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ (ನವೆಂಬರ್ 2) ಉಡಾವಣೆ :
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ (ನವೆಂಬರ್ 2) ಸಮಯ 5.66 ಕ್ಕೆ ಉಡಾವಣೆಗೊಳ್ಳಲಿರುವ ಸಿಎಮ್ ಎಸ್ – 03 ಉಪಗ್ರಹ. ಈ ಉಪಗ್ರಹ ಸೆಕೆಂಡಿಗೆ 10 ಕಿ.ಮೀ ವೇಗದಲ್ಲಿ ಸುಮಾರು 179 ಕಿ.ಮೀ. ಎತ್ತರದಲ್ಲಿ ಇದನ್ನು ವಾಹನದಿಂದ ಬೇರ್ಪಡಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Job Vacancy : ಸರಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗವಕಾಶ…!
……
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=WPztUDdm0DT7ADa0











