Bigboss season 12: ಕನ್ನಡದ ಬಿಗ್ ಬಾಸ್ ಸೀಸನ್ 12 ಅಂದ್ರೆ ಲವ್ ಸ್ಟೋರಿ ಇಲ್ಲ ಅಂದ್ರೆ ಮಜಾ ಇರುತ್ತಾ..? ಕೆಲವು ಪ್ರೀತಿ ಪ್ರೇಮ ಇಲ್ಲೇ ಶುರುವಾಗುತ್ತೆ.. ಅದೇ ರೀತಿ ಈ ಬಾರಿಯೂ ರಾಶಿಕಾ ಸೂರಜ್ ಲವ್ ಕಹಾನಿ ಒಂದು ಹಂತದಲ್ಲಿ ನಡೀತಾ ಇದೆ. ಆದ್ರೆ ಈಗ ಕೊಂಚ ಸೈಲೆಂಟ್ ಆದಂಗೆ ಕಾಣುತ್ತಿದೆ.
ರಾಶಿಕಾ ಸೂರಜ್ ಯಾವತ್ತು ಕ್ಯೂಟ್ ಅಂತ ಹೇಳಿದ್ರೋ ಅಲ್ಲಿಂದ ಸೂರಜ್ ಹಿಂದೆ ರಾಶಿಕಾ ಬಿದ್ದಿದ್ದಾರೆ. ಕೈ ಕೈ ಹಿಡಿದುಕೊಂಡು ಇಬ್ಬರೂ ಮನೆ ತುಂಬಾ ಓಡಾಡುತ್ತಿದ್ದರು. ಒಂದು ಬಾರಿ ಐ ಲವ್ ಯೂ ಅಂತ ಸೂರಜ್ ರಾಶಿಕಾಗೆ ಹೇಳಿದ್ದಾರೆ. ಅದಕ್ಕೆ ರಾಶಿಕಾ ನಾಟ್ ಇಂಟರೆಸ್ಟ್ ಅಂತ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಕ್ಷಿತಾ ಶೆಟ್ಟಿ ಫೇಕ್ ಎಂದವ್ರಿಗೆ ಕಿಚ್ಚ ಸುದೀಪ್ ಕ್ಲಾಸ್..!
ಸೂರಜ್ ಪ್ರೀತಿಲಿ ಬಿದ್ದ ರಾಶಿಕಾಗೆ ಕಿಚ್ಚ ವಾರ್ನಿಂಗ್…!
ಕಳೆದ ಎಪಿಸೋಡಲ್ಲಿ ಸೂರಜ್ ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ಶೈವ ನಡುವೆ ಜೋರಾಗಿ ಜಗಳ ನಡೆಯುತ್ತಿತ್ತು. ಆದರೆ. ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಇದ್ದರು. ದೊಡ್ಮನೆಯೊಳಗೆ ಪ್ರೀತಿ-ಪ್ರೇಮ ವಿಚಾರ ಟಾಸ್ಕ್ಗೆ ಎಫೆಕ್ಟ್ ಆದಾಗ ಅಥವಾ ಮನೆಯಲ್ಲಿ ಅವರ ಉಳಿವಿಗೆ ಕುತ್ತು ಬರಬಾರದು ಎನ್ನುವುದು ರೂಲ್ಸ್. ರಾಶಿಕಾ ಅವರು ಸೂರಜ್ ಸಿಂಗ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಮಾಡೆಲ್ ಫುಲ್ ಡಲ್..!
ಸುದೀಪ್ ವೀಕೆಂಡ್ ನಲ್ಲಿ ರಾಶಿಕಾ ಸೂರಜ್ಗೆ ಎಚ್ಚರಿಕೆ ನೀಡಿ, ನೀವು ಬಂದು ಶರ್ಟ್ ತೆಗೆದಿದ್ದು ನೋಡಿ ಕೆಲವರು ಆಟ ಆಡುವುದನ್ನೇ ನಿಲ್ಲಿಸಿದ್ದಾರೆ. ಅಲ್ಲಿ ಚೇಂಜ್ ಆದವರು ಆಟವನ್ನೇ ಆಡುತ್ತಿಲ್ಲ. ಹೀಗೆ ಮುಂದುವರಿದರೆ ನೀವು ಅಲ್ಲೇ ಇರ್ತೀರಿ, ನೀವು ಔಟ್ ಆಗ್ತೀರಾ ಎಂದು ಸುದೀಪ್ ರಾಶಿಕಾಗೆ ಎಚ್ಚರಿಕೆ ನೀಡಿದರು. ಸುದೀಪ್ ಎಚ್ಚರಿಕೆಯನ್ನು ಗಂಭೀರಾಗಿ ತೆಗೆದುಕೊಂಡ ರಾಶಿಕಾ ಈ ವಾರ ಒಳ್ಳೆಯ ಪರ್ಫಾಮೆನ್ಸ್ ನೀಡಿದ್ದಾರೆ. ಸೂರಜ್ ಸಂಪೂರ್ಣ ಡಲ್ ಆಗಿದ್ದಾರೆ.ಹೀಗೆ ಇಬ್ಬರ ಮಧ್ಯೆ ಈಗ ಎಲ್ಲೋ ಕೊಂಚ ಮೌನ ಆವರಿಸಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











