ಬ್ರೇಕಿಂಗ್ ನ್ಯೂಸ್
ಕ್ರೀಡೆ

Job Vacancy : ಸರಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗವಕಾಶ…!

Job Vacancy : ಸರಕಾರಿ ಉದ್ಯೋಗ ಹಾಗೂ ಖಾಸಗೀ ಉದ್ಯೋಗ ಯಾವುದೇ ಇರಲಿ ಜನರು ಪ್ರತೀಯೊಬ್ಬರು ಈಗ ಕೆಲಸದ ನಿರೀಕ್ಷೆಯಲ್ಲೇ ಇದ್ದಾರೆ. ಜನರ ಬೇಡಿಕೆಗಳು ಜಾಸ್ತಿಯಾಗುತ್ತಿದ್ದಂತೆ, ಹಣದ ಅವಶ್ಯಕತೆ ಹೆಚ್ಚಾಗಿರುತ್ತದೆ. ಕೆಲಸ ಹೇಗೇ ಇರಲಿ ಒಮ್ಮೆ ಕೆಲಸ ಹುಡುಕಿ ಕೊಡಿ ಎಂದು ಬೇಡಿಕೆಯನ್ನಿಡುವ ಜನರನ್ನೂ ಕಾಣುತ್ತೇವೆ.‌ ಅದೆಷ್ಟೋ ವಿದ್ಯಾವಂತ ಯುವಕ‌ ಯುವತಿಯರು ನಿರುದ್ಯೋಗಿಗಳಾಗಿ‌ ಮನೆಯಲ್ಲಿರುವುದನ್ನು ಕಾಣುತ್ತೇವೆ. ಹೀಗಿರುವ ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಂಸ್ಥೆ ಉದ್ಯೋಗವಕಾಶದ ಆಹ್ವಾನವನ್ನು ನೀಡಿದೆ.

ನಿಮಾನ್ಸ್ ನಲ್ಲಿ ಉದ್ಯೋಗ…!
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು, ಸಂಶೋಧನಾ ಸಹವರ್ತಿ ಹಾಗೂ ಸಹಾಯಕ‌ ಹುದ್ದೆಗಳಿಗೆ ಕರೆ ನೀಡಿದೆ. ಮಾಸಿಕ ವೇತನ 38,000 – 50,000 ರೂ. ಹಾಗೂ‌ 35 ವರ್ಷದೊಳಗಿನ ಯುವಕ ಯುವತಿಯರಿಗೆ ಮಾತ್ರ ಅವಕಾಶ ಎಂದು ತಿಳಿಸಲಾಗಿದೆ. ಹಾಗೆಯೆ, ನವೆಂಬರ್ 11 ಕ್ಕೆ ಒಟ್ಟು 6 ಹುದ್ದೆಗಳಿಗೆ ನೇರ ಸಂದರ್ಶನ ಮಾಡಲಾಗುವುದು ಎಂದು ವರದಿಯಾಗಿದೆ.

ನವೆಂಬರ್ 11 ಕ್ಕೆ ಸಂದರ್ಶನ ಕರೆಯಲಿದೆ ನಿಮಾನ್ಸ್ ;
ಇದು ಲಿಖಿತ ಪರೀಕ್ಷೆ ಹಾಗೂ ಸಂದರ್ಶನವಾಗಿರುವುದರಿಂದ ಆಸಕ್ತರು ಬೆಂಗಳೂರಿನ ನಿಮಾನ್ಸ್ ಸಂಸ್ಥೆಯು ಆದಷ್ಟು ಬೇಗ ಸಂಪರ್ಕಿಸುವುದು ಅಥವಾ ನವೆಂಬರ್ 11 ಕ್ಕೆ ಬೆಳಗ್ಗೆ 10 ಗಂಟೆಗೆ ಸರಿಯಾಗಿ ನೇರ ಸಂದರ್ಶನಕ್ಕೆ, ನಿಮಾನ್ಸ್ ನ ಎನ್ ಬಿ ಆರ್ ಸಿ ಕಟ್ಟಡದ 4 ನೇ ಮಹಡಿಯಲ್ಲಿರುವ ಬೋರ್ಡ್ ರೂಮ್ ಮತ್ತು ಪರೀಕ್ಷಾ ಹಾಲ್ ಗೆ ಹಾಜರಾಗತಕ್ಕದ್ದು.

ಇದನ್ನೂ ಓದಿ :Bigboss season 12: ಮಾಡೆಲ್ ಸೂರಜ್‌ ರಾಶಿಕಾ ಲವ್‌ ಸ್ಟೋರಿ ಬ್ರೇಕಪ್ ಆಯ್ತಾ..?

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=WPztUDdm0DT7ADa0

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page