Bigboss season12: ಬಿಗ್ ಬಾಸ್ ಕನ್ನಡ ಸೀಸನ್ 12 ಈ ಬಾರಿ ವೀಕ್ಷಕರ ಮನಗೆಲ್ಲುತ್ತಿದೆ. ಈ ವಾರದ ವೀಕೆಂಡ್ ಮಾತುಕತೆಯಲ್ಲಿ ಮಂಗಳೂರಿನ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡಿದ ಮಂದಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಟ ಪಟ ಮಾತುಗಾರ್ತಿ ರಕ್ಷಿತಾ ಶೆಟ್ಟಿ..!
ಕುಡ್ಲದ ಹುಡುಗಿ ರಕ್ಷಿತಾ ಶೆಟ್ಟಿ ಮುಂಚೆಯಿಂದಲೂ ತನ್ನ ಸೋಷಿಯಲ್ ಮೀಡಿಯಾ ಮೂಲಕ ಜನಪ್ರೀಯತೆ ಗಳಿಸಿದ ಹುಡುಗಿ.. ಇದೀಗ ಬಿಗ್ ಬಾಸ್ ಮನೆಯಲ್ಲೂ ತನ್ನ ಮಾತಿನಿಂದಲೇ ಗಮನ ಸೆಳೆಯುತ್ತಿದ್ದಾಳೆ. ಕನ್ನಡ, ಇಂಗ್ಲೀಷ್ ಅರ್ಧಂಬರ್ದ ಮಾತನಾಡಿ ವಿಷಯ ತಿಳಿಸುವ ಈ ಹುಡುಗಿ ದೊಡ್ಮನೆಯಲ್ಲಿ ಚಿಕ್ಕ ವಯಸ್ಸಿನ ಹುಡುಗಿ. ತನ್ನ ಬಗ್ಗೆ ಏನಾದರೂ ಕೆಟ್ಟದಾಗಿ ಮಾತನಾಡಿದರೆ ಸಹಿಸದೇ ಎದುರಲ್ಲಿಯೇ ಹೇಳಿ ಮನೆಮಂದಿಯ ಬಾಯಿ ಮುಚ್ಚಿಸುತ್ತಾಳೆ.
ಕಳೆದ ವಾರದಲ್ಲಿಯೂ ರಾಶಿಕಾ, ರಿಷಾ, ಅಶ್ವಿನಿ ಗೌಡ ಜೊತೆ ಮಾತಿನ ವಾಗ್ವಾದ ನಡೆಸಿ ಮನೆಮಂದಿಯ ಟೀಕೆಗೆ ಈಕೆ ಗುರಿಯಾಗಿದ್ದಳು.
ರಕ್ಷಿತಾ ಶೆಟ್ಟಿ ಜೊತೆ ಗಿಲ್ಲಿ ಫ್ರೆಂಡ್ ಶಿಪ್ ..!
ಅ ಸಂದರ್ಭದಲ್ಲಿ ಗಿಲ್ಲಿ ನಟ ರಕ್ಷಿತಾ ಶೆಟ್ಟಿ ಪರ ನಿಂತು ಮಾತನಾಡಿ, ಸಮಾಧಾನ ಮಾಡಿದ್ದಾರೆ. ಹಾಗಾಗಿ ರಕ್ಷಿತಾ ಹಾಗೂ ಗಿಲ್ಲಿ ಹೊಂದಾಣಿಕೆ ಸರಿಯಿದೆ. ಅದ್ರಲ್ಲಿ ರಾಶಿಕಾ, ರಿಷಾ, ಅಶ್ವಿನಿ ಗೌಡ ರಕ್ಷಿತಾಳನ್ನು ಫೇಕ್ ಎಂದು ಅವಮಾನ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ವೀಕೆಂಡ್ ನಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿ ತಿಳಿಹೇಳಿದ್ದಾರೆ. ಈ ಮುಂಚೆಯಿಂದಲೂ ಗಿಲ್ಲಿ ರಕ್ಷಿತಾ ಜೊತೆ ಒಳ್ಳೆಯ ಬಾಂಡಿಂಗ್ ಒಟ್ಟುಕೊಂಡಿದ್ದಾರೆ.
ನಟನೆ ಬಗ್ಗೆ ರಕ್ಷಿತಾ ಶೆಟ್ಟಿ ಕೆಟ್ಟದಾಗಿ ಮಾತನಾಡಬಾರದಿತ್ತು..ಅಶ್ವಿನಿ ಗೌಡ!
ರಿಷಾ ಈ ಹಿಂದೆ ಸುದೀಪ್ ಅವರ ಎದುರೇ ರಕ್ಷಿತಾ ಬಗ್ಗೆ ಹೇಳುತ್ತೇನೆ ಎಂದು ಕೋಪದಿಂದ ಹೇಳಿದ್ದರು. ಅದೇ ಸಂಗತಿಯನ್ನು ಸುದೀಪ್ ವೇದಿಕೆಯ ಮೇಲೆ ರಿಷಾ ಜೊತೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಿಷಾ ಉತ್ತರಿಸಿದ್ದಾರೆ. ನಿಮಗೆ ಧೈರ್ಯ ಇಲ್ಲವಾ ಈಗ ಎಂದು ಸುದೀಪ್ ಹೇಳಿದ್ದಾರೆ. ನಾನು ಇರೋದಕ್ಕೆ ನಿಮಗೆ ರಕ್ಷಿತಾ ಬಗ್ಗೆ ಹೇಳೋಕೆ ಆಗ್ತಿಲ್ಲ ಅಲ್ವ ಎಂದು ಸುದೀಪ್ ಹೇಳಿದ್ದಾರೆ. ಹೀಗೆ ಮನೆಮಂದಿ ಎಲ್ಲರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ರಕ್ಷಿತಾ ಶೆಟ್ಟಿ ನಟನೆಯ ಬಗ್ಗೆ ಮಾತನಾಡಿರೋದಕ್ಕೆ ಅಶ್ವಿನಿ ಗೌಡ ಬೇಸರಗೊಂಡಿದ್ದಾರೆ, ನಟನೆಗೆ ಇದು ಅವಮಾನ, ಆಕೆ ನಮ್ಮ ಪ್ರೊಫೇಶನ್ ಬಗ್ಗೆ ಕೆಟ್ಟದಾಗಿ ಮಾತನಾಡಬಾರದಿತ್ತು ಎಂದು ಅಶ್ವಿನಿ ಗೌಡ ಸುದೀಪ್ ಜೊತೆ ಹೇಳಿಕೊಂಡಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











