ಬ್ರೇಕಿಂಗ್ ನ್ಯೂಸ್
ಕರ್ನಾಟಕ

Hair fall : ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿದೆ ಹೊಸ ಪರಿಹಾರ…!

Hair fall : ಕೂದಲು ಉದುರುವಿಕೆ ಸಮಸ್ಯೆ ಈಗ ಸರ್ವೇ ಸಾಮಾನ್ಯವಾಗಿದೆ. ನಾವು ತಿನ್ನುವ ಆಹಾರದಿಂದ ಹಿಡಿದು, ಉಪಯೋಗಿಸುವ ಸೋಪು, ಶ್ಯಾಂಪು ಇತ್ಯಾದಿಗಳಿಂದ ಹಾಗೂ ಬದಲಾಗುವ ಹವಾಮಾನದಿಂದ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನು ವಿಪರೀತ ಟೆನ್ಷನ್ ಕಾರಣದಿಂದ ಕೂಡಾ ತಲೆಗೂದಲು ಉದುರುತ್ತವೆ ಎಂದು ಹಿರಿಯರು ಹೇಳೋದನ್ನು ಕೇಳಿರುತ್ತೇವೆ. ಹಾಗಾದ್ರೆ, ಈ ಸಮಸ್ಯೆಗೆ ಪರಿಹಾರ ಇಲ್ಲಿದೆ ನೋಡಿ….!

ಪ್ರತಿಯೊಬ್ಬರ ಮನೆಯಲ್ಲಿ ಕರಿಬೇವು ಇದ್ದೇ ಇರುತ್ತದೆ. ಕರಿಬೇವನ್ನು ಅಡುಗೆಗೆ ಬಳಸುತ್ತಾರೆ. ಹಾಗೇ, ಇದರಲ್ಲಿ ಆಂಟಿಆಕ್ಸಿಡೆಂಟ್, ಖನಿಜಗಳು ಹಾಗೂ ವಿಟಮಿನ್ ಹೇರಳವಾಗಿ ಇರುವುದರಿಂದ ಇದನ್ನು ಕೂದಲು ಉದುರುವಿಕೆ ಸಮಸ್ಯೆ ತಡೆಗಟ್ಟಲು ಉಪಯೋಗಿಸುತ್ತಾರೆ.
ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು, ಅದರಲ್ಲಿನ ನೀರಿನಾಂಶವನ್ನು ಒರೆಸಿ, ಸ್ವಲ್ಪ ತೆಂಗಿನ ಎಣ್ಣೆಯನ್ನು ಬಿಸಿಮಾಡಿ ಆಗ ಈ ಎಲೆಗಳನ್ನು ಎಣ್ಣೆಯಲ್ಲಿ ಕಪ್ಪಾಗುವವರೆಗೆ ಹುರಿದು, ಕೊನೆಯಲ್ಲಿ ಬಿಸಿಯನ್ನು ಆರಿಸಿ, ಸೋಸಿ ಇದನ್ನು ನೆತ್ತಿಯ ಭಾಗಕ್ಕೆ, ಕೂದಲಿಗೆ ಹಾಕಿದರೆ ಕೂದಲುದುರುವಿಕೆ ನಿಲ್ಲುತ್ತದೆ ಎಂದು ಹೇಳಲಾಗಿದೆ.

ಕರಿಬೇವಿನ ಎಣ್ಣೆಯು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಂತೆಯೇ, ತಲೆಹೊಟ್ಟು, ತಲೆ ತುರಿಸುವಿಕೆ, ಬಿಳಿಬಣ್ಣದ ಕೂದಲ ನಿವಾರಣೆಗೆ ಸಹಕಾರಿಯಾಗಿದೆ. ಈ ಎಣ್ಣೆಯನ್ನು ನೀವು ಸ್ನಾನ ಮಾಡುವ ಒಂದೂವರೆ ಗಂಟೆ ಮುಂಚಿತವಾಗಿಯೇ ಹಾಕಬೇಕು. ಇಲ್ಲದಿದ್ದರೆ, ಆಗಿಂದಾಗ್ಗೆ ಹಾಕಿ ಕೂದಲು ತೊಳೆದರೆ ನಿಮಗೆ ಅದರ ಪ್ರಯೋಜನ ತಿಳಿಯುವುದಿಲ್ಲ. ಕೆಲವರು ರಾತ್ರಿ ಎಣ್ಣೆ ಹಾಕಿ ಬೆಳಗ್ಗೆ ತೊಳೆಯುತ್ತಾರೆ ಆದರೆ, ತಲೆಯಲ್ಲಿ ತುಂಬಾ ಎಣ್ಣೆಯುಕ್ತ ಕೂದಲಿದ್ದರೆ ಹೀಗೆ ಮಾಡಬಾರದು.‌ ಕೂದಲಲ್ಲಿ ತೇವಾಂಶವಿಲ್ಲದಿದ್ದರೆ ಮಾತ್ರ ನೀವು ರಾತ್ರಿಯಿಡೀ ಹಾಕಿ ಮತ್ತೆ ತೊಳೆಯಬಹುದು. ಜಾಸ್ತಿ ಹೊತ್ತು ಎಣ್ಣೆಯನ್ನು ಕೂದಲಿನಲ್ಲಿ‌ ಬಿಟ್ಟರೆ ಹೆಚ್ಚು ಎಣ್ಣೆಯುಕ್ತ ಕೂದಲಿನವರಿಗೆ ನೆತ್ತಿಯಲ್ಲಿ ಅಥವಾ ತಲೆಯಲ್ಲಿ ಮೊಡವೆಗಳು ಬರಬಹುದು ಹಾಗಾಗಿ, ಇದರ ಬಗ್ಗೆ ಗಮನ ಹರಿಸಿ.

ಇದನ್ನೂ ಓದಿ :Somwarpet: ಇಂದು ಅರಣ್ಯಾಧಿಕಾರಿಗಳು- ರೈತ ಮುಖಂಡರ ಧಿಡೀರ್‌ ಸಭೆ..!

………….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=WPztUDdm0DT7ADa0

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page