ಬ್ರೇಕಿಂಗ್ ನ್ಯೂಸ್
ಕರ್ನಾಟಕಕ್ರೀಡೆ

Mangaluru: ಕುಡ್ಲದ ಕ್ರಿಕೆಟರ್ ಜೆಮಿಮಾ ರೋಡ್ರಿಗಸ್ ಅವರಿಗಾಗಿತ್ತು ಭಾರೀ ಅವಮಾನ..!

Mangaluru: ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಮಾಡುವ ಮೂಲಕ ಭಾರತ ವಿಶ್ವಕಪ್ ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಜೆಮಿಮಾ ರೋಡ್ರಿಗಸ್ ಭರ್ಜರಿ ಶತಕ ಸಿಡಿಸಿ ಭಾರತ ತಂಡವನ್ನು ಮೂರನೇ ಬಾರಿಗೆ ಮಹಿಳಾ ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದರು. ಅಷ್ಷಕ್ಕೂ ಜೆಮಿಮಾ ರೋಡ್ರಿಗಸ್ ಬಗ್ಗೆ ಗೊತ್ತಿಲ್ಲದ ಸಂಗತಿ ನಾವು ಹೇಳ್ತೀವಿ ಓದಿ..

ಈ ಹುಡ್ಗಿ ರೀಲ್ಸ್‌ ಮಾಡೋಕಷ್ಟೇ ಸೀಮಿತ ಅಂತಿದ್ರು..!

ಒಂದು ಟೈಂ ನಲ್ಲಿ ಈ ಹುಡುಗಿ ಕೇವಲ ರೀಲ್ಸ್ ಮಾಡಲು ಮಾತ್ರ ಲಾಯಕ್ಕು. ರನ್ ಮಾಡಲ್ಲ, ಯಾವುದಕ್ಕೂ ಫಿಟ್ ಇಲ್ಲ. ಟ್ರೈನಿಂಗ್ ಸಮಯದಲ್ಲಿ ನಾಯಿ ಜೊತೆ ಆಡುತ್ತಾಳೆ ಅಂತ ಈ ಹುಡ್ಗೀನ ಜನ ಟೀಕೆ ಮಾಡ್ತಿದ್ರು.. ಮೂಲತಃ ಮಂಗಳೂರಿನವ್ರಾದ ಇವು 25ರ ಹರೆಯದ ಜೆಮಿಮಾ ಜೆಸ್ಸಿಕಾ ರೋಡ್ರಿಗಸ್ ಈಗ ದೇಶವೇ ಕೊಂಡಾಡುವ ಹುಡುಗಿ. ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಈ ಹುಡುಗಿ ನಾಲ್ಕು ವರ್ಷದವ್ರಿದ್ದಾಗಲೇ ಕ್ರಿಕೆಟ್‌ ಆಡೋಕೆ ಶುರು ಮಾಡಿ, ಇದೀಗ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.

ಪದೇ ಪದೇ ಅವಮಾನದಿಂದ ಗಟ್ಟಿಯಾದ ಹುಡ್ಗಿ..!

ತನ್ನ 17ನೇ ವಯಸ್ಸಿನಲ್ಲೇ ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ದರೂ ಜೆಮಿಮಾ ಸ್ಥಾನ ಮಾತ್ರ ಗಟ್ಟಿಯಾಗಿರಲಿಲ್ಲ. ಸ್ಥಿರ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದ ಈಕೆ ಆಗಾಗ ತಂಡದಿಂದ ಹೊರ ಬೀಳುತ್ತಿದ್ದರು. ಉತ್ತಮ ಆರಂಭ ಸಿಗುತ್ತಿದ್ದರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾಗುತ್ತಿದ್ದುದ್ದು ಜೆಮಿಮಾಗೆ ಹಿನ್ನೆಡೆಯಾಗಿತ್ತು. 2021ರ ವಿಶ್ವಕಪ್ ತಂಡದಲ್ಲಿ ಜೆಮಿಮಾಗೆ ಸ್ಥಾನ ಸಿಕ್ಕಿರಲಿಲ್ಲ. ಇದೇ ಬೇಸರದಲ್ಲಿದ್ದ ಈಕೆ ಸತತ ಪ್ರಯತ್ನ ಮಾಡುತ್ತಲೇ ಇದ್ದ ಹುಡುಗಿ. ಕ್ರಿಕೆಟ್‌ ಮೇಲಿನ ಹುಚ್ಚು ಈಕೆಯ ಜೀವನವನ್ನೇ ಒಂದು ಹಾದಿಯಲ್ಲಿ ಕರೆದುಕೊಂಡು ಹೋಗಿದೆ.

ನ್ಯೂಜಿಲ್ಯಾಂಡ್‌ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅಚಾನಕಾಗಿ ಸಿಕ್ಕ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶವನ್ನು ಜೆಮಿಮಾ ಪಡೆದುಕೊಂಡ ಹುಡುಗಿ. ಸ್ಕೃತಿ ಮಂದಣ್ಣ ಶತಕ ಬಾರಿಸಿದ್ದ ಆ ಪಂದ್ಯದಲ್ಲಿ ಜೆಮಿಮಾ ಅಜೇಯ 76 ರನ್ ಮಾಡಿದ್ದಳು. ಕೇವಲ 55 ಎಸೆತಗಳಲ್ಲಿ ಸಾಧ್ಯವಾಗಿತ್ತು. ಆಸೀಸ್ ವಿರುದ್ಧದ ಪಂದ್ಯದಲ್ಲಿ ಆಕೆಯ ಇನ್ನಿಂಗ್ಸ್ ಒಂದು ತಪಸ್ಸು ಅಂತ ಹೇಳಬಹುದು. ಅಂತಿಮವಾಗಿ, ವಿಜಯದ ಗಡಿ ದಾಟುತ್ತಿದ್ದಂತೆ ಕಣ್ಣೀರ ಕೋಡಿಯೇ ಹರಿದಿತ್ತು, ಮನದಲ್ಲಿದ್ದ ದುಗುಡ, ಸಂಕಟ, ಒತ್ತಡ, ಅವಮಾನ ಎಲ್ಲವೂ ಕಣ್ಣೀರಾಗಿ ಹರಿದಿದೆ.

ಹೆಣ್ಣು ಮಕ್ಕಳೇ ಇದ್ದ ಕುಟುಂಬ.. ತಂದೆಯ ಬೆಂಬಲ..!

ಜೆಮಿಮಾ ಮುಂಬೈನ ಭಾಂಡೂಪ್‌ನಲ್ಲಿ ನೆಲೆಸಿದ್ದ ಕ್ರಿಶ್ಚಿಯನ್ ಕುಟುಂಬದ ಮೂವರಲ್ಲಿ ಮಕ್ಕಳಲ್ಲಿ ಈಕೆಯೊಬ್ಬಳೇ ಹೆಣ್ಣು. ತಂದೆ, ತಾಯಿ ಮಂಗಳೂರು ಮೂಲದ ಕ್ಯಾಥೋಲಿಕ್ ಕ್ರಿಶ್ಚಿಯನ್ನರು. ನಾಲ್ಕು ವರ್ಷದವಳಿದ್ದಾಗಲೇ ಜೆಮಿಮಾ ಕ್ರಿಕೆಟ್ ಆಡಲು ಆರಂಭಿಸಿದ್ದಳು. ಮಕ್ಕಳಿಗೆ ಕ್ರೀಡೆಯ ಸರಿಯಾದ ಸವಲತ್ತು ಸಿಗಬೇಕು ಎಂದು ಬಾಂದ್ರಾಗೆ ಮನೆ ಬದಲಾಯಿಸಿದ್ದರು ಜೆಮಿಮಾ ತಂದೆ ಐವನ್ ರೋಡ್ರಿಗಸ್. ಹೀಗೆ ತಮ್ಮ ಮಕ್ಕಳಿಗೆ ತಂದ ತಾಯಿ ಕ್ರೀಡೆಯ ಬೆಂಬಲ ನೀಡುತ್ತಾ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿದ್ದಾರೆ. ಇದೀಗ ಮಗಳ ಸಾಧನೆ ಕಂಡು ಇಡೀ ದೇಶವೇ ಖುಷಿಪಡುವಂತಾಗಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 157

You cannot copy content of this page