Rave Party : ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ಹದಿಹರೆಯದ ಯುವಕಯುವತಿಯರ ಮೇಲೆ ಇಂದು ಬೆಳಗ್ಗೆ ಕಗ್ಗಲೀಪುರದ ಪೋಲಿಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಸುಮಾರು 100 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಇದರಲ್ಲಿ 35 ಹೆಣ್ಣುಮಕ್ಕಳು, ಯುವಕರು ಹಾಗೂ 18 ವರ್ಷದ ಮೂವರು ವಿದ್ಯಾರ್ಥಿಗಳು ಇದ್ದರೆಂದು ವರದಿಯಾಗಿದೆ.
ಇವರು ನಿನ್ನೆ ಸಂಜೆ 7.00 ಗಂಟೆಯಿಂದ ಬೆಳಗ್ಗೆ 4 ಗಂಟೆಯ ತನಕ ಅಕ್ಕಪಕ್ಕದವರಿಗೆ ಕೇಳಿಸುವಂತೆ ಜೋರಾಗಿ ಮ್ಯೂಸಿಕ್ ಹಾಕುತ್ತಾ, ಮದ್ಯಪಾನ ಮಾಡಿ ಅಕ್ಕಪಕ್ಕದವರಿಗೆ ತೊಂದರೆ ನೀಡುತ್ತಿದ್ದರು ಎಂದು ಕೇಸ್ ದಾಖಲಾಗಿರುತ್ತದೆ.
ಇದೀಗ, ರೇವ್ ಪಾರ್ಟಿಯಲ್ಲಿ ಭಾಗಿಯಾದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು 19 ರಿಂದ 23 ವರ್ಷದ ಯುವಕ ಯುವತಿಯರೆನ್ನಲಾಗಿದೆ. ಬೆಂಗಳೂರಿನ ಮೂಲದವರೇ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ.
ರೇವ್ ಪಾರ್ಟಿ ಮಾಡುವ ಮುಂಚೆ ವಾಟ್ಸಾಪ್ ಗ್ರೂಪ್ ಒಂದನ್ನು ಮಾಡಿಕೊಂಡು ಪಾರ್ಟಿ ಆಯೋಜನೆಯನ್ನು ಮಾಡಲಾಗಿರುತ್ತದೆ. ಇದೊಂದು ಹೋಂಸ್ಟೇ ಆಗಿರುವ ಕಾರಣ ವಿದ್ಯಾರ್ಥಿಗಳು ಗಾಂಜಾ ಅಥವಾ ಮತ್ತಿತರ ಅಮಲು ಪದಾರ್ಥಗಳ ಸೇವನೆ ಮಾಡಿರುವುದಾಗಿ ಶಂಕಿಸಿ
ರಾಮನಗರದ ಸರಕಾರಿ ಆಸ್ಪತ್ರೆಗೆ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ವೈದ್ಯಕೀಯ ವರದಿಯ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ಹೇಳಿಕೆ ನೀಡಿರುತ್ತಾರೆ.
ಇದನ್ನೂ ಓದಿ : Tulasi Pooje : ತುಳಸಿ ವಿವಾಹವನ್ನು ಮನೆಗಳಲ್ಲಿ ಮಾಡಿದರೆ ಇವೆಲ್ಲಾ ಪ್ರಾಪ್ತಿಯಾಗುತ್ತದೆ…!
…..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಕ್ಲಿಕ್ ಮಾಡಿ : https://youtu.be/fJYoyzVUVk0?si=FdkpMlvbhQJzD4sU











