ಬ್ರೇಕಿಂಗ್ ನ್ಯೂಸ್
ಧಾರ್ಮಿಕ

Tulasi Pooje : ತುಳಸಿ ವಿವಾಹವನ್ನು ಮನೆಗಳಲ್ಲಿ ಮಾಡಿದರೆ ಇವೆಲ್ಲಾ ಪ್ರಾಪ್ತಿಯಾಗುತ್ತದೆ…!

Tulasi Pooje : ತುಳಸಿಯನ್ನು ಲಕ್ಷ್ಮೀ ದೇವಿಯ ರೂಪವೆಂದೇ ಪರಿಗಣಿಸಲಾಗುತ್ತದೆ. ತುಳಸಿಯು ಶಾಂತಿ, ಸಮೃದ್ಧಿ, ಆರೋಗ್ಯ, ಪಾವಿತ್ರ್ಯತೆಯ ಸಂಕೇತವಾಗಿದೆ. ಹಾಗೇ ಪ್ರತೀ ಮನೆಯಲ್ಲಿಯೂ ತುಳಸಿ ಗಿಡದ‌ ಜೊತೆ‌ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ತುಳಸೀ ಪೂಜೆ ಪ್ರತೀ‌ನಿತ್ಯ ಮಾಡುವುದನ್ನು ಕಾಣುತ್ತೇವೆ.

ಇದೇ ತಿಂಗಳು ಅಂದರೆ ನವೆಂಬರ್ ನಲ್ಲಿ ತುಳಸಿ ವಿವಾಹ ಅಥವಾ ತುಳಸಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಅಂದರೆ, ಕಾರ್ತಿಕ ಶುದ್ಧ ದ್ವಾದಶಿಯಂದು ತುಳಸಿ ಮದುವೆಯನ್ನು ಮಾಡಲಾಗುತ್ತದೆ. ನವೆಂಬರ್ 2 ರಂದು ಬೆಳಗ್ಗೆ 7.31 ಕ್ಕೆ ಪ್ರಾರಂಭವಾಗಿ ನವೆಂಬರ್ 3 ರ ಬೆಳಗ್ಗೆ 5.07 ರ ಸಮಯದ ತನಕ ಈ ಗಳಿಗೆ ಚಾಲ್ತಿಯಲ್ಲಿರುತ್ತದೆ.
ಪವಿತ್ರ ತುಳಸಿಯನ್ನು ಚೆನ್ನಾಗಿ ಅಲಂಕರಿಸಿ, ಶಾಲಿಗ್ರಾಮ ಅಂದರೆ ವಿಷ್ಣುವಿನ ಒಂದು ರೂಪವನ್ನಿಟ್ಟು ಮಂಟಪವನ್ನು ಸಜ್ಜುಗೊಳಿಸಲಾಗುತ್ತದೆ. ಈ ತುಳಸಿ ವಿವಾಹವನ್ನು ಸಂಪೂರ್ಣ ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಕನ್ಯಾದಾನದಿಂದ ಹಿಡಿದು, ಬೆಂಕಿಗೆ ಏಳು ಸುತ್ತುಗಳನ್ನು ನಡೆಸುವುದು ಕೂಡಾ ವಾಡಿಕೆಯಿದೆ.

ತುಳಸಿ ವಿವಾಹದ ಪೂಜಾ ಆಚರಣೆಯನ್ನು‌ ಭಕ್ತರು ತಮ್ಮ ಮನೆಗಳಲ್ಲಿ ತುಳಸಿ‌ ಸಸ್ಯವನ್ನು ಪವಿತ್ರ ಪ್ರದೇಶದಲ್ಲಿ ಇಡುವ ಮೂಲಕ ಪ್ರಾರಂಭಿಸುತ್ತಾರೆ. ಈ ಗಿಡದ ಸುತ್ತ ಅರಶಿಣ, ಕುಂಕುಮ, ಹಾಲು, ತೆಂಗಿನಕಾಯಿ, ಹೂ,‌ಹಣ್ಣು ಇತ್ಯಾದಿಗಳೊಂದಿಗೆ, ದೀಪ ಬೆಳಗಿಸಿ ತುಳಸಿಗೆ ನೀರು ಸುರಿದು‌ ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ. ಈ ತುಳಸೀ ಪೂಜೆಯನ್ನು ಮಾಡುವವರ ಮನೆಯಲ್ಲಿ ಶಾಂತಿ, ಸಮೃದ್ಧಿ, ಆಯುಷ್ಯಾರಾರೋಗ್ಯ ಸಂಪನ್ನವಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ : Belagavi: ಕನ್ನಡ ರಾಜ್ಯೋತ್ಸವದ ದಿನ ಪುಂಡಾಟ ಮೆರೆದ ಎಂಇಎಸ್ ..!

…..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಕ್ಲಿಕ್ ಮಾಡಿ : https://youtu.be/fJYoyzVUVk0?si=FdkpMlvbhQJzD4sU

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 4

You cannot copy content of this page