ಬ್ರೇಕಿಂಗ್ ನ್ಯೂಸ್
ಪುತ್ತೂರು

Puttur : ದೈಹಿಕ ಸಂಪರ್ಕಕ್ಕೆ ಒತ್ತಾಯಿಸದಕ್ಕಾಗಿ ತಂದೆಯ ಬಂಧನ

Puttur : ಹೆಣ್ಣುಮಕ್ಕಳ ಭದ್ರತೆ, ಗೌರವ ಇವು ಕಾನೂನಾತ್ಮಕ ಹಕ್ಕುಗಳಾಗಿವೆ. ಆದರೆ ಪ್ರಸ್ತುತ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ತನಕ ಹೆಣ್ಣುಮಕ್ಕಳ‌ ದೌರ್ಜನ್ಯ ಹೆಚ್ಚುತ್ತಲೇ ಇದೆ. ಹೆಚ್ಚಾಗಿ ಈಗ ಮಕ್ಕಳ‌ ಮೇಲಿನ ಲೈಂಗಿಕ ಕಿರುಕುಳ ಸಮಾಜದಿಂದ ಮನೆಯ ಒಳಗೇ ಜಾಸ್ತಿಯಾಗುತ್ತಿದೆ.

ಹೆತ್ತ ತಂದೆ ತಾಯಿಯ ಜೊತೆ ಬೆಳೆದ ಮಕ್ಕಳು‌ ರಕ್ಷಣೆಯಲ್ಲಿರುತ್ತಾರೆ ಎಂದು ತಿಳಿದುಕೊಂಡರೆ ಈಗ ತಂದೆಯೇ ಸ್ವಂತ ಮಗಳ‌ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡೋದನ್ನು ಕಾಣಬಹುದು. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಅಬ್ದುಲ್ ಹನೀಫ್ ಎಂಬಾತ ಬಲವಂತವಾಗಿ ಸ್ವಂತ ಮಗಳೊಂದಿಗೆ ದೈಹಿಕ ಸಂಪರ್ಕಕ್ಕೆ ಒಳಗಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇದೀಗ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನವನ್ನೂ ವಿಧಿಸಿದೆ. ಭಾರತೀಯ ಕಾನೂನಿನ ಪ್ರಕಾರ ದೈಹಿಕ ಬಲಾತ್ಕಾರಗಳು ಹಾಗೂ ಕ್ರಿಮಿನಲ್ ಫೋರ್ಸ್ ಇವು ತುಂಬಾ ಆತಂಕಕಾರಿ ಕ್ರಮಗಳಾಗಿದ್ದು, ಮನೆಯೊಳಗಿನ ಅಹಿತಕರ ದೈಹಿಕ ಅಥವಾ ಮಾನಸಿಕ ದುರ್ಬಳಕೆಗೆ ಕಟ್ಟುನಿಟ್ಟಿನ‌ ಶಿಕ್ಷೆ ವಿಧಿಸಲಾಗುತ್ತದೆ.

ಕೆಲವೊಮ್ಮೆ ಇಂತಹಾ ಅಪರಾಧಗಳು ಬೆಳಕಿಗೆ ಬರುತ್ತವೆ. ಆದರೆ, ಅದೆಷ್ಟೋ ದೌರ್ಜನ್ಯಗಳು ಇನ್ನು ಮನೆಗಳಲ್ಲೇ ಸಾಯುವಂತಹ ಸ್ಥಿತಿ ಈಗ ತೀರಾ ಸಾಮಾನ್ಯವಾಗಿದೆ. ಅಪರಾಧಿಗೆ ಸುಲಭವಾಗಿ ದಾಳಿ ಮಾಡೋದಿಕ್ಕೆ ಆಗುತ್ತದೆ ಮತ್ತು ಕೆಲವೊಮ್ಮೆ ಶಿಕ್ಷೆಗಳಿಂದಲೂ ತಪ್ಪಿಸಿಕೊಳ್ಳುತ್ತಾರೆ. ಆದರೆ, ಮಾನಸಿಕವಾಗಿ ಕುಗ್ಗಿ ಹೋಗಿರುವ ಮಕ್ಕಳು ಕೆಲವೊಮ್ಮೆ ಇಂತಹಾ ಬಲತ್ಕಾರಗಳನ್ನು ಎಲ್ಲಿಯೂ ಹಂಚಿಕೊಳ್ಳುವುದಿಲ್ಲ ಮತ್ತು ಕೆಲವೊಂದು ಬೆದರಿಕೆಗಳಿಂದ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಾಹಿತಿಯ ಪ್ರಕಾರ ಹಲವೆಡೆ, ಅನೇಕ ಹೆಣ್ಣುಮಕ್ಕಳು ತಮ್ಮನ್ನು ಯಾರೂ ನಂಬುವುದಿಲ್ಲ ಎಂದು ಭಯಬೀಳುತ್ತಾರೆ. ದೌರ್ಜನ್ಯ ನಡೆಸಿದವರು ತನಗೆ ಅಥವಾ ತನ್ನ ಪ್ರೀತಿಪಾತ್ರರಿಗೆ ಅಪಾಯ ಮಾಡಬಹುದು ಅಥವಾ ಕೊಲ್ಲಬಹುದು ಎಂದು ತಮ್ಮೊಳಗಿನ ಈ ನೋವನ್ನು ಎಲ್ಲಿಯೂ ಬಿಚ್ಚಿಡುವ ಪ್ರಯತ್ನ ಮಾಡುವುದಿಲ್ಲ. ಹಾಗಾಗಿ, ಮಕ್ಕಳಲ್ಲಿ ಮುಕ್ತವಾಗಿ ಮಾತನಾಡಲು ಅಥವಾ ನೋವನ್ನು ಹೇಳಿಕೊಳ್ಳುವ ಸ್ವತಂತ್ರತೆಯನ್ನು ಮನೆಯಲ್ಲೇ ಕಲಿಸಿದರೆ ಮಾನಸಿಕವಾಗಿಯಾದರೂ ದೃಢವಾಗಲು ಸಾಧ್ಯ.

ಇದನ್ನೂ ಓದಿ : Chikkamagaluru: ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಕ್ಲಿಕ್ ಮಾಡಿ : https://youtu.be/fJYoyzVUVk0?si=FdkpMlvbhQJzD4sU

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page