Madikeri: ಇಂದು ನಾಡಿನೆಲ್ಲೆಡೆ 70ನೇ ವರ್ಷದ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಮಂಜಿನ ನಗರಿ ಮಡಿಕೇರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರಿಂದ ಧ್ವಜಾರೋಹಣ ನಡೆಯಿತು.
ಪೊಲೀಸ್ ಕವಾಯತು ಮೈದಾನದಲ್ಲಿ ಕನ್ನಡದ ಕಂಪು..!
ಈ ಸಂದರ್ಭದಲ್ಲಿ ಪೊಲೀಸ್, ಎನ್ಸಿಸಿ, ಅರಣ್ಯ ಇಲಾಖೆ, ಗೃಹರಕ್ಷಕ ದಳ, ವಿವಿಧ ಶಾಲಾ ವಿದ್ಯಾರ್ಥಿಗಳ ಪಥಸಂಚಲನ ನಡೆಸಿದರು. ಉಸ್ತುವಾರಿ ಸಚಿವರು, ಆಕರ್ಷಕ ಪಥಸಂಚಲನ ವೀಕ್ಷಿಸಿದ ನಂತರ ಗೌರವ ವಂದನೆ ಸ್ವೀಕರಿಸಿದರು. ಪಥಸಂಚಲನದ ಮುಖ್ಯಸ್ಥರು, ಸಂಪೂರ್ಣ ಕನ್ನಡದಲ್ಲಿಯೇ ಪಥಸಂಚಲನದ ಕಮಾಂಡ್ ನೀಡಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶಾಸಕ ಮಂತರ್ ಗೌಡ, ಡಿಸಿ, ಎಸ್ಪಿ & ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಪೊಲೀಸ್ ಕವಾಯತು ಮೈದಾನದಲ್ಲಿ ಕನ್ನಡದ ಕಂಪು ಅನಾವರಣಗೊಂಡಿದೆ. 70 ಮಂದಿ ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಕೊಡಮಾಡಲಿದ್ದಾರೆ.
ಮಡಿಕೇರಿಯ ಮಹಿಳಾ ಸಾಧಕಿಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ!
ಕೊಡಗಿನ ಇಬ್ಬರು ಸಾಧಕರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಅಮ್ಮತಿಯ ನೆಲ್ಲಮಕ್ಕಡ ಗಣೇಶ್ ಮುತ್ತಪ್ಪ ಮತ್ತು ಸರೋಜಾ ಅವರ ಪುತ್ರಿ ಬೊಳ್ಳರಿ ಮಾಡ್ ಪುಟ್ಟಿಚಂಡ ಬಬಿನಾ ನಂದ ಹಾಗೂ ಸೋಮವಾರಪೇಟೆ ಹತ್ತಿರದ ಕಾರೆಕೊಪ್ಪದ ನಟ ಜೈಜಗದೀಶ್ ಅವರ ಪತ್ನಿ ನಿರ್ಮಾಪಕಿ, ನಟಿ, ನಿರ್ದೇಶಕಿ ವಿಜಯಲಕ್ಷ್ಮಿಸಿಂಗ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಡಾ.ಎನ್.ಎಂ.ಬಬಿನಾ ಬೆಂಗಳೂರಿನ 550 ಹಾಸಿಗೆಗಳ ಜಿಂದಾಲ್ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡದಲ್ಲಿ ಪುಸ್ತಕಗಳು, ಲೇಖನಗಳು, ಉಪನ್ಯಾಸಗಳು, ಟಿವಿ ಕಾರ್ಯಕ್ರಮಗಳನ್ನು ನೀಡುವುದು ಹಾಗೂ ಕನ್ನಡದಲ್ಲಿ ಆರೋಗ್ಯ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಈ ಬಾರಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಹೇಗಿತ್ತು..?
ಮಹಿಳಾ ಆರೋಗ್ಯ ಸಮಸ್ಯೆಗಳು, ಶ್ವಾಸಕೋಶ ಸಂಬಂಧಿತ ರೋಗಗಳ ಬಗ್ಗೆ ಪುಸ್ತಕ ಬರೆದಿದ್ದಾರೆ. ಈ ಬಾರಿ ಯಾವುದೇ ಆನ್ ಲೈನ್ ಮೂಲಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಲಿಲ್ಲ. ಆನ್ ಲೈನ್ ಅಲ್ಲದೆ ಅರ್ಜಿಗಳನ್ನು ಸಲ್ಲಿಸಬಹುದಾಗಿತ್ತು. ಹೀಗಾಗಿ ಪ್ರಶಸ್ತಿ ನೀಡುವುದರಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಈ ಬಾರಿ ಕನ್ನಡರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಈ ದಿನ ಕನ್ನಡಿಗರೆಲ್ಲರಿಗೂ ಸಂಭ್ರಮದ ದಿನ. ಮನೆ ಮನಗಳಲ್ಲಿ ಕನ್ನಡದ ಭಾಷೆಯ ಅಭಿಮಾನ ಮೆರೆಯುತ್ತಿರುವ ಈ ದಿನ ಒಂದಿನಕ್ಕಷ್ಟೆ ಸೀಮಿತವಾಗಿರದೆ, ಪ್ರತೀ ದಿನವೂ ಕನ್ನಡಮಯವಾಗಿರಲಿ ಅನ್ನೋದು ನಮ್ಮ ಆಶಯ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











