ಬ್ರೇಕಿಂಗ್ ನ್ಯೂಸ್
ದೇಶ

Bahubali ರಿ-ರಿಲೀಸ್‌; ಬಾಕ್ಸ್‌ ಆಫೀಸ್‌ನಲ್ಲಿ ಮತ್ತೆ ದಾಖಲೆ

Bahubali: ವಿಶ್ವದಾದ್ಯಂತ ಸಖತ್‌ ಮೋಡಿ ಮಾಡಿದ್ದ ಬಾಹುಬಲಿ ಸಿನೆಮಾ ಮತ್ತೆ ತೆರೆ ಮೇಲೆ ಬಂದಿದೆ. ಬಾಹುಬಲಿ ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್​​ಕ್ಲೂಷನ್’ ಸಿನಿಮಾಗಳು ಭಾರತೀಯ ಸಿನೆಮಾ ರಂಗದ ಅತ್ಯಂತ ಪ್ರಮುಖ ಸಿನಿಮಾಗಳು ಎಂದರೂ ತಪ್ಪಾಗಲ್ಲ.

ರಾಜಮೌಳಿ ನಿರ್ದೇಶನ ಮಾಡಿಯೋ ಈ ಅತ್ಯದ್ಭುತ ಸಿನಿಮಾಗಳು ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ಒಂದೇ ಸಿನಿಮಾ ಆಗಿ ಮರು ಬಿಡುಗಡೆ ಆಗಿವೆ. ಅಕ್ಟೋಬರ್ 31ರ ಶುಕ್ರವಾರದಂದು ‘ಬಾಹುಬಲಿ: ದಿ ಎಪಿಕ್’ ಮರು ಬಿಡುಗಡೆ ಆಗಿದೆ. ಮೊದಲ ದಿನವೇ ಭರ್ಜರಿ ಕಲೆಕ್ಷನ್‌ ಸಹ ಮಾಡಿದೆ.

‘ಬಾಹುಬಲಿ’ ಸಿನಿಮಾಕ್ಕೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಹಾಗಾಗಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಭಾರತ ಮಾತ್ರವಲ್ಲದೆ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಬಾಹುಲಿ ದಿ ಎಪಿಕ್ ಸಿನಿಮಾ ಕೇವಲ ಭಾರತದಲ್ಲಿಯೇ ಮೊದಲ ದಿನವೇ ಸುಮಾರು 10 ಕೋಟಿ ಮೊತ್ತ ಗಳಿಕೆ ಮಾಡಿದೆ. ಮರು ಬಿಡುಗಡೆಯಾದ ಸಿನಿಮಾವೊಂದು ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿದೆ.

ಇನ್ನು ಸಿನಿಮಾದ ಓವರ್​​ಸೀಸ್ ಕಲೆಕ್ಷನ್ ಸುಮಾರು 3 ರಿಂದ ನಾಲ್ಕು ಕೋಟಿ ಆಗಿರಬಹುದೆಂಬ ಅಂದಾಜಿಸಲಾಗಿದೆ. ನಾರ್ತ್‌ ಅಮೆರಿಕ, ದುಬೈ ಇನ್ನಿತರೆ ಕಡೆಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಹಳ ಚೆನ್ನಾಗಿ ಆಗಿತ್ತು. ಹಾಗಾಗಿ ಈ ಭಾಗಗಳಲ್ಲಿ ಉತ್ತಮ ಗಳಿಕೆ ಮಾಡಿರುವ ನಿರೀಕ್ಷೆ ಇದೆ.

ಎರಡು ಭಾಗವನ್ನು ಒಂದೇ ಸಿನೆಮಾ ಆಗಿ ರೂಪು ಗೊಳಿಸಿರುವುದರಿಂದ ಸಿನೆಮಾಗಳಲ್ಲಿನ ಹಲವಾರು ಭಾಗಗಳಿಗೆ ಕತ್ತರಿ ಬಿದ್ದಿದೆ. ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು 3:43 ಗಂಟೆಗಳಿಗೆ ಇಳಿಸಲಾಗಿದೆ.

ಎಡಿಟಿಂಗ್ ಪ್ರಕ್ರಿಯೆ ವೇಳೆ ಹಲವು ಸೀನ್‌ಗಳನ್ನು ತೆಗೆಯಲಾಗಿದೆ. ಮೊದಲ ಭಾಗದಲ್ಲಿದ್ದ ಸುದೀಪ್ ದೃಶ್ಯ, ತಮನ್ನಾ ನೃತ್ಯವನ್ನು ತೆಗೆಯಲಾಗಿದೆ. ಅನುಷ್ಕಾ ಶೆಟ್ಟಿ – ಪ್ರಭಾಸ್ ಹಾಡಿಗೆ, ರಾಜಮೌಳಿ ಸ್ವತಃ ತಮ್ಮ ಅತಿಥಿ ಪಾತ್ರಕ್ಕೂ ಕತ್ತರಿ ಹಾಕಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ನಟ ಪ್ರಭಾಸ್, ರಾಣಾ ದಗ್ಗುಬಾಟಿ, ರಾಜಮೌಳಿ ಅವರುಗಳು ಸಂದರ್ಶನಗಳನ್ನು ಸಹ ಮಾಡಿದ್ದು ವಿಶೇಷ.

ಇದನ್ನೂ ಓದಿ: Actor Darshan : ಆರೋಪಿ ನಟ ದರ್ಶನ್ ಗೆ ಮತ್ತೊಮ್ಮೆ ಬಿಗ್ ಶಾಕ್…!

=======================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page