ಬ್ರೇಕಿಂಗ್ ನ್ಯೂಸ್
ಕರಾವಳಿಬಂಟ್ವಾಳ

Panemangaluru: ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಪತ್ತೆ

Panemangaluru: ಆಟೋ ರಿಕ್ಷಾ ಚಾಲಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಚಾಲಕನ ಮೃತದೇಹ ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿದೆ. ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ, ಪೀಟರ್ ಲೋಬೋ (52) ಮೃತರು.

ಅಕ್ಟೋಬರ್ 29 ರಂದು ಬೆಳಿಗ್ಗೆ ಸುಮಾರು 5:10ಕ್ಕೆ, ಪೀಟರ್ ಅವರು ಆಟೋ-ರಿಕ್ಷಾದಲ್ಲಿ ಮನೆಯಿಂದ ಹೊರಟು ಸೇತುವೆ ಮೇಲೆ ನಿಲ್ಲಿಸಿ ನದಿಗೆ ಹಾರಿದ್ದರು. ದಿನವಿಡೀ ಸ್ಥಳೀಯ ಈಜುಗಾರರು ಮತ್ತು ಬಂಟ್ವಾಳ ಅಗ್ನಿಶಾಮಕ – ರಕ್ಷಣಾ ದಳದವರು ವ್ಯಾಪಕ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಗುರುವಾರ ಮುಂದುವರಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದೆ.

ಪೀಟರ್ ಅವರು ಪಾರ್ಶ್ವವಾಯುವಿನಿಂದ ಮತ್ತು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ತಾನು ಯಾರನ್ನು ಅವಲಂಬಿಸುವಂತೆ ಆಗಬಾರದೆಂದು ತೀರ್ಮಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೀಟರ್ ಲೋಬೋ ಅವರ ಪತ್ನಿ ಅನಿತಾ ಲೋಬೊ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರಿನ ಸುದ್ದಿಗಳಿಗಾಗಿ ಸಂಪರ್ಕಿಸಿ: 7349258678

ಇದನ್ನೂ ಓದಿ: ಉಗ್ರರ ನೆಲದಿಂದ ತಪ್ಪಿಸಿಕೊಂಡ ಹಿಂದೂ ಯುವತಿಗೆ ಭಾರತೀಯ ಪೌರತ್ವ

===================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 31

You cannot copy content of this page