ಬ್ರೇಕಿಂಗ್ ನ್ಯೂಸ್
ಕರ್ನಾಟಕ

Actor Darshan : ಆರೋಪಿ ನಟ ದರ್ಶನ್ ಗೆ ಮತ್ತೊಮ್ಮೆ ಬಿಗ್ ಶಾಕ್…!

Actor Darshan : ರೇಣುಕಾಸ್ವಾಮಿ ಕೊಲೆ ಆಪಾದನೆಯ ಮೇಲೆ ಜೈಲುವಾಸದಲ್ಲಿರುವ ನಟ ದರ್ಶನ್ ಗೆ ಇನ್ನೊಂದು ಬಿಗ್ ಶಾಕ್ ಎದುರಾಗಿದೆ. ಹತ್ಯೆಗೈದಿರುವ ವ್ಯಕ್ತಿಯನ್ನು ಅಮಾನುಷವಾಗಿ ಅಪಹರಿಸಿ ಚಿತ್ರವಿಚಿತ್ರವಾಗಿ ಶೋಷಿಸಿ ಕೊಲೆಗೈದಿರುವ ದಾಖಲೆಗಳು ಸ್ಪಷ್ಟ ಸಾಕ್ಷಿಗಳೊಂದಿಗೆ ಕಂಡು ಬಂದಿದ್ದರೂ, ಜಾಮೀನು ಸಿಗುವ ಆಸೆಯಲ್ಲಿ ಮತ್ತೆ ಕೊರ್ಟ್ ನ ಉತ್ತರಕ್ಕೆ ಕಾಯುತ್ತಲೇ ಇರಬೇಕಾಯಿತು.

ಇದಕ್ಕೆ ಕೊರ್ಟ್, ಜಾಮೀನು ರದ್ದುಗೊಳಿಸಿ ಆರೋಪಿಯನ್ನು ಜೈಲಿನಲ್ಲಿ ಇರಿಸುವಂತೆಯೂ ಅಲ್ಲಿನ ವ್ಯವಸ್ಥೆಯ ಬಗ್ಗೆ ಮರು ತನಿಖೆ ಮಾಡಿ ಸಾಮಾನ್ಯರಂತೆ ನಟ ದರ್ಶನ್ ಶಿಕ್ಷೆ ಅನುಭವಿಸುವಂತೆ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಅದಾಗ್ಯೂ ನಿಲ್ಲದ ಬೇಡಿಕೆಗಳಿಗೆ ಕೋರ್ಟ್ ಇದೀಗ ಸರಿಯಾದ ಉತ್ತರವನ್ನೇ ನೀಡಿದೆ.

ಕೊಲೆ ಕೇಸ್ ನ ವಾದ ಪ್ರತಿವಾದದ ಮೇರೆಗೆ ನಾಳೆ ಚಾರ್ಜ್ ಫ್ರೇಮ್ ನಿಗದಿಯಾಗಲಿದೆ. ಜೊತೆಗೆ, ಆರೋಪಿ ದರ್ಶನ್ ಗೆ ಹಾಸಿಗೆಯ ಬದಲಾಗಿ, ಚಾದರ, ಬಟ್ಟೆಯನ್ನು ನೀಡುವಂತೆ ಕೋರ್ಟ್ ಸೂಚನೆ ನೀಡಿರುತ್ತದೆ. ನಟ ದರ್ಶನ್ ಕಳೆದ ಎರಡು ತಿಂಗಳಿಂದ ಜೈಲಿನಲ್ಲಿ ಕೆಲವೊಂದು ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಳಿಕೊಳ್ಳುತ್ತಲೇ ಇದ್ದಾರೆ. ಈ ಬಗ್ಗೆ ಪರ ವಕೀಲರು ಕೂಡಾ ಅರ್ಜಿಯನ್ನು ಕೋರ್ಟ್ ಗೆ ನೀಡಿದ್ದರು. ಇದರ ಬಗ್ಗೆ ವಾದ ಪ್ರತಿವಾದಗಳು ನಡೆಯುತ್ತಲೇ ಇತ್ತು ಕೂಡ. ಆದರೆ ಕೊಲೆ ಆರೋಪಿ ದರ್ಶನ್ ನ ಅರ್ಜಿಗೆ ಕೋರ್ಟ್ ಸಮ್ಮತಿಯನ್ನು ನೀಡಲೇ ಇಲ್ಲ. ಜೊತೆಗೆ ದರ್ಶನ್ ಇರುವ ಬ್ಯಾರಕ್ ನ್ನು ಕೂಡಾ ಬದಲಾವಣೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಕೋರ್ಟ್ ಜೈಲಿನ ಅಧಿಕಾರಿಗಳ ನಿರ್ಧಾರಕ್ಕೆ ಈ ಬ್ಯಾರಕ್ ಬದಲಾವಣೆಯನ್ನು ಬಿಡಲಾಗಿದೆ ಎಂದು ಸೂಚನೆ ನೀಡಿದೆ.

ನ್ಯಾಯಾಲಯವು ಈಗಾಗಲೇ ಜೈಲಿನ ವ್ಯವಸ್ಥೆ ಹಾಗೂ ವಿಚಾರಣಾ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಿತ್ತು. ಅದರ ನಡುವೆಯೂ ಆರೋಪಿಯ ಪರವಾದ ವಾದ ವಿವಾದಗಳು ಹೆಚ್ಚುತ್ತಲೇ ಇದ್ದವು. ಸೌಲಭ್ಯಗಳ‌ ಬಗ್ಗೆ ಕೋರಿರುವ ಅರ್ಜಿಗಳ ಪಟ್ಟಿ ಜಾಸ್ತಿ ಆಗುತ್ತಲೇ ಇದ್ದವು. ಆದರೆ, ಇದೆಲ್ಲದರ ಬಗ್ಗೆ ಕೋರ್ಟ್ ಸಾಮಾನ್ಯ ಜನರಿಗೆ ಯಾವ ಕಾನೂನು ನೀಡಲಾಗಿದೆ ಅದರಂತೆ ನಟ ದರ್ಶನ್ ಗೆ ಕೂಡಾ ಅದೇ ಜೈಲು ವ್ಯವಸ್ಥೆಯನ್ನು ನೀಡುವಂತೆಯೂ ತಿಂಗಳಿಗೊಮ್ಮೆ ಬಟ್ಟೆ, ಚಾದರ ಕೊಡುವುದಾಗಿ ಅಂತಿಮ ತೀರ್ಮಾನದ ಬಗ್ಗೆ ಇಂದು ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ :Bus Seize : ನಿಯಮ ಮೀರಿದ ಬಸ್ಸ್‌ : ಆರ್‌ಟಿಒ ಅಧಿಕಾರಿಗಳಿಂದ ಸೀಜ್‌

—–

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್‌ ಚಾನೆಲ್‌ ಕ್ಲಿಕ್‌ ಮಾಡಿ :https://www.youtube.com/watch?v=IwjbstX6g3M

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page