Bus Seize : ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಬಸ್ ದುರಂತ ಹಲವು ಕುಟುಂಬಗಳ ಕಣ್ಣೀರಿಗೆ ಕಾರಣವಾಗಿದೆ. ಇನ್ನು ಕೆಲವು ವರದಿಗಳ ಪ್ರಕಾರ, ಬಸ್ ಚಾಲಕನಿಗೆ ನಿದ್ದೆ ಬಂದಿರುವ ಕಾರಣ ನಿಯಂತ್ರಣ ತಪ್ಪಿ ಅಪಘಾತ ಆಗಿದೆ ಎಂದೂ ಹೇಳಲಾಗುತ್ತಿದೆ. ಬಸ್ ನಲ್ಲಿ ಎಲ್ಲಾ ವಯೋಮಾನದವರು ಪ್ರಯಾಣಿಸುತ್ತಿದ್ದು ಹಲವು ಮಂದಿ ಪ್ರಾಣ ಕಳೆದುಕೊಂಡರೆ, ಇನ್ನು ಕೆಲವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ರಾಜ್ಯಸರ್ಕಾರವು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಮುನ್ನೆಚ್ಚರಿಕೆಯ ಕ್ರಮವಾಗಿ ಬಸ್ ಗಳ ತಾಂತ್ರಿಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುವಂತೆಯೂ, ಜೊತೆಗೆ ತಪಾಸಣೆ ನಡೆಸಿ ಬಸ್ ಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಸಾರಿಗೆ ನಿಗಮಗಳಿಗೆ ಸೂಚನೆಯನ್ನು ನೀಡಲಾಗಿತ್ತು.ಈ ಘಟನೆಯಿಂದ ಚಾಲಕರು ಪ್ರಾಯಾಣಿಕರ ಜೀವಕ್ಕೆ ಪ್ರಾಮುಖ್ಯತೆಯನ್ನು ನೀಡುವಂತೆಯೂ, ಅವರನ್ನು ಸುರಕ್ಷಿತವಾಗಿ ತಲುಪಿಸುವುದು ಚಾಲಕನ ಕರ್ತವ್ಯವಾಗಿದ್ದು, ಚಾಲಕರು ಆದಷ್ಟು ವಿಶ್ರಾಂತಿ ತೆಗೆದುಕೊಂಡ ನಂತರವೇ ವಾಹನ ಚಲಾಯಿಸುವುದು ಒಳಿತೆಂದು ಈ ಘಟನೆ ಮತ್ತೆಂದು ಸಂಭವಿಸದಂತೆ ಎಚ್ಚರವಹಿಸುವ ಪಾಠವಾಗಿದೆ.
ಈ ಹಿನ್ನಲೆ ಆರ್ ಟಿ ಒ ಅಧಿಕಾರಿಗಳು ದೇವನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದು ಸುಮಾರು 35 ಕ್ಕೂ ಹೆಚ್ಚು ಬಸ್ ಗಳನ್ನು, ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇರುವಂತಹವುಗಳನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ. ಕರ್ನಾಟಕ ಸಾರಿಗೆ ಇಲಾಖೆ ಬಸ್ ಗಳ ಸುರಕ್ಷತಾ ಕ್ರಮಗಳ ಬಗ್ಗೆ ಘಟನೆಯ ನಂತರ ಮುನ್ನಚ್ಚರಿಕೆಯನ್ನು ನೀಡಿದ್ದರೂ ಕೆಲವೊಂದು ಚಾಲಕರು ಅಥವಾ ಬಸ್ ನಿರ್ವಾಹಕರು ಈ ಬಗ್ಗೆ ಯೋಚನೆಯೂ ಮಾಡದೆ ಒಟ್ಟಾರೆ ಜನರನ್ನು ಬಸ್ ಗೆ ತುಂಬಿಸೋದೇ ಮೂಲ ಉದ್ದೇಶವೆಂದುಕೊಂಡಿದ್ದಾರೆ. ಅದರಲ್ಲೂ ನೇಪಾಳದಿಂದ ಬೆಂಗಳೂರಿಗೆ ಜನರನ್ನು ಕರೆದುಕೊಂಡು ಬರುತ್ತಿದ್ದ ಬಸ್ ನಲ್ಲಿ ನೂರಕ್ಕೂ ಅಧಿಕ ಪ್ರಯಾಣಿಕರನ್ನೂ ಸಾಮರ್ಥ್ಯಕ್ಕೂ ಮೀರಿ ತುಂಬಿಕೊಂಡು ಬಂದಿರುವುದು ತಿಳಿದು ಬಂದ ಹಿನ್ನಲೆ ತಕ್ಷಣವೇ ಬಸ್ ನ್ನು ಸೀಜ್ ಮಾಡಲಾಗಿದೆ. ಇದೇ ರೀತಿ ಬಸ್ ಗಳಲ್ಲಿ ನಿಗದಿತ ಜನರ ಸಂಖ್ಯೆಗಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಬರುವಂತಹ ಬಸ್ ಗಳನ್ನು ಆದಷ್ಟು ಬೇಗ ಸೀಜ್ ಮಾಡಬೇಕು ಹಾಗೂ ಇದರ ಬಗ್ಗೆ ಹೆಚ್ಚಿನ ಕ್ರಮ ತೆಗೆದುಕೊಂಡು ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುತ್ತಾರೆ.
ಇದನ್ನೂ ಓದಿ : online Scam:ಮೊಬೈಲ್ ಬಾಕ್ಸ್ ನೋಡಿ ಬೆಚ್ಚಿಬಿದ್ದ ಯುವಕ..!
————————–
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಕ್ಲಿಕ್ ಮಾಡಿ : https://www.youtube.com/watch?v=IwjbstX6g3M











