ಬ್ರೇಕಿಂಗ್ ನ್ಯೂಸ್
ವಾಣಿಜ್ಯ

online Scam:ಮೊಬೈಲ್ ಬಾಕ್ಸ್ ನೋಡಿ ಬೆಚ್ಚಿಬಿದ್ದ ಯುವಕ..!

online Scam:ದಿನೇ ದಿನೇ ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವುದರಿಂದ ಕೆಲವೊಂದು ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಆನ್ ಲೈನ್ ಸ್ಕ್ಯಾಮ್ ಅಂದ್ರೆ ನಮ್ಮ ವೈಯಕ್ತಿಕ ಡೀಟೈಲ್ಸ್ , ಹಣ, ಬ್ಯಾಂಕ್ ಖಾತೆ ಹಾಗೂ ಮಾಹಿತಿಯನ್ನು ಮೆಸೇಜ್, ಫೋನ್ ಕಾಲ್ ಅಥವಾ ಸಾಮಾಜಿಕ ಮಾಧ್ಯಮಗಳ ಮುಖಾಂತರ ಕಸಿದುಕೊಳ್ಳುವುದಾಗಿದೆ. ಅದೆಷ್ಟೋ ನಕಲಿ ಫೋನ್ ನಂಬರ್, ಇ- ಮೇಲ್ ಗಳು ಈಗ ಸೃಷ್ಟಿಯಾಗುತ್ತಲೇ ಇವೆ. ಇದು ಅಪಾಯಕಾರಿ ಕ್ರಮವೇ ಆಗಿದ್ದರೂ ಡಿಜಿಟಲ್ ಯುಗದಿಂದಾಗಿ ಅನೇಕರು ಶಾಪಿಂಗ್, ಉದ್ಯೋಗ ಅಂತೆಲ್ಲಾ ಮೋಸ ಹೋಗುತ್ತಲೇ ಇದ್ದಾರೆ.

ಹಾಗಾಗಿ, ಇಲ್ಲೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆನ್ ಲೈನ್ ಡೆಲಿವರಿ ಸ್ಕ್ಯಾಮ್ ಗೆ ಬೆಚ್ಚಿ ಬಿದ್ದಿದ್ದಾನೆ. ಆತ 1.85 ಲಕ್ಷದ ಮೊಬೈಲ್ ನನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದ್ದು, ಮೊಬೈಲ್ ಬಂತೆಂದು ಖುಷಿಯಿಂದ ಕವರ್ ಓಪನ್ ಮಾಡಿದಾಗ ಅದರಲ್ಲಿದ್ದದ್ದು ‘ಕಲ್ಲು…’! ಹೌದು..ಅಮೇಜಾನ್ ಆ್ಯಪ್ ನಲ್ಲಿ ಪ್ರೇಮಾನಂದ್ ಎಂಬಾತ ಲಕ್ಷಾಂತರ ರೂಪಾಯಿಯ ಸ್ಯಾಮ್ ಸಂಗ್ ಮೊಬೈಲ್ ನ್ನು ಆರ್ಡರ್ ಮಾಡಿದ್ದರು. ಆದರೆ, ಮನೆಗೆ ಬಂದ ಆರ್ಡರ್ ತೆರೆದು ನೋಡಿದಾಗ ಅದರಲ್ಲಿ ಮೊಬೈಲ್ ಕಾಣಿಸಲಿಲ್ಲ. ಮನೆಯಲ್ಲಿ ಎಲ್ಲರೂ ಬೆಚ್ಚಿಬೀಳೋದರ ಜೊತೆಗೆ, ಡೆಲಿವರಿ ಬಾಯ್ ಗೆ ಕರೆ ಮಾಡಿದರೆ ಯಾವುದೇ ರೆಸ್ಪಾನ್ಸ್ ಬಂದಿರುವುದಿಲ್ಲ. ಆ ಕಾರಣ ಕುಮಾರಸ್ವಾಮಿ ಲೇಔಟ್ ನ ಪೋಲಿಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.

ಕ್ಷಣಮಾತ್ರದಲ್ಲಿ ಕೈಗೆಟುಕುವ ವಿಷಯಗಳು, ವಸ್ತುಗಳು ಎಲ್ಲವೂ ಡಿಜಿಟಲ್. ಪ್ರತಿಯೊಂದಕ್ಕೂ ಸಾಮಾಜಿಕ ಜಾಲತಾಣವನ್ನೇ ಅವಲಂಬಿತವಾಗಿರುವ ಯುವ ಸಮುದಾಯಕ್ಕೂ ಇನ್ನೂ ಅರಿವು ಬಂದಂತೆ ಕಾಣುತ್ತಿಲ್ಲ. ಹೆಚ್ಚಾಗಿ ನಂಬಿಕೆಯನ್ನಿಟ್ಟು ಇನ್ನೇನು ಸುಲಭಕ್ಕೆ ವಸ್ತು, ಉದ್ಯೋಗ ಸಿಕ್ಕೇ ಬಿಡ್ತು ಅನ್ನುವಷ್ಟರಲ್ಲಿ ಮೋಸ ಹೋಗಿಬಿಡುತ್ತಾರೆ. ಕೆಲವೊಮ್ಮೆ ಫ್ರೀಯಾಗಿ ಆನ್ಲೈನ್ ಕೋರ್ಸ್, ಆನ್ಲೈನ್ ಉದ್ಯೋಗ ಅಂತ ಹೇಳಿ ಹಂತ ಹಂತವಾಗಿ ಹಣವನ್ನು ಕಸಿದುಕೊಂಡು ನಂತರ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಸುಮ್ಮನಾಗುವ ಅದೆಷ್ಟೋ ವಂಚಿಸುವ ಲಿಂಕ್ ಗಳು ವಂಚನೆಗೊಳಗಾಗುವ ಜನರು ಹೆಚ್ಚುತ್ತಲೇ ಇದ್ದಾರೆ.

ಇದನ್ನೂ ಓದಿ:ನ. 28 ರಂದು ಉಡುಪಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

………………………………………………………………………………………………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/watch?v=IwjbstX6g3M

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page